Sunday, August 3, 2025
Homeಅಂತಾರಾಷ್ಟ್ರೀಯ | Internationalಅಮೇರಿಕಾದ ಎಫ್‌ -35 ಫೈಟರ್‌ ಜೆಟ್‌ ಖರೀದಿ ಯೋಚನೆ ಕೈಬಿಟ್ಟ ಭಾರತ

ಅಮೇರಿಕಾದ ಎಫ್‌ -35 ಫೈಟರ್‌ ಜೆಟ್‌ ಖರೀದಿ ಯೋಚನೆ ಕೈಬಿಟ್ಟ ಭಾರತ

India drops plan to buy US F-35 fighter jets

ನವದೆಹಲಿ,ಅ.1-ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಭಾತರತ ರಫ್ತು ಉತ್ಪನ್ನಗಳ ಮೇಲೆ ಶೇ. 25 ರಷ್ಟು ಸುಂಕ ಘೋಷಿಸಿರುವುದರಿಂದ ಮೊದಲ ಹಂತವಾಗಿ ರಕ್ಷಣಾ ಉಪಕರಣಗಳನ್ನು ಖರೀದಿ ನಿಲ್ಲಲಿದೆ ಎಂಬ ಮಾತುಗಳು ಕೇಳಿಬರುತ್ತಿದೆ.

ಈ ವರ್ಷದ ಫೆಬ್ರವರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಅಮೆರಿಕ ಭೇಟಿಯ ಸಮಯದಲ್ಲಿ ಡೊನಾಲ್ಡ್ ಟ್ರಂಪ್‌ ಭಾರತಕ್ಕೆ ಮಾರಾಟ ಮಾಡಲು ಪ್ರಸ್ತಾಪಿಸಿದ್ದ ಎಫ್‌ -35 ಫೈಟರ್‌ ಜೆಟ್‌ಗಳನ್ನು ಖರೀದಿ ನೆನಗುದಿಗೆ ಬೀಳಲಿದೆ.

ಭಾರತ ಈಗ ಫೈಟರ್‌ ಜೆಟ್‌ಗಳನ್ನು ಖರೀದಿಗೆ ಆಸಕ್ತಿ ಹೊಂದಿಲ್ಲ ಎಂದು ಅಮೆರಿಕಕ್ಕೆ ತಿಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.ಇದರ ನಡುವೆ ಜಂಟಿಯಾಗಿ ರಕ್ಷಣಾ ಸಾಧನಗಳನ್ನು ವಿನ್ಯಾಸಗೊಳಿಸುವುದು ಮತ್ತು ತಯಾರಿಸುವುದರ ಮೇಲೆ ಕೇಂದ್ರೀಕರಿಸಿದ ಪಾಲುದಾರಿಕೆಯಲ್ಲಿ ಹೆಚ್ಚು ಆಸಕ್ತಿ ಹೊಂದಿದೆ ಎಂದು ಅಮೆಕರಕ ಅಧೕಕಾರಿಗಳು ಹೇಳಿಕೊಂಡಿದ್ದಾರೆ.

ಭಾರತವು ಅಮೆರಿಕದಿಂದ ನೈಸರ್ಗಿಕ ಅನಿಲ ಖರೀದಿಯನ್ನು ಹೆಚ್ಚಿಸಲು ಮತ್ತು ಸಂವಹನ ಉಪಕರಣಗಳು ಮತ್ತು ಚಿನ್ನದ ಆಮದನ್ನು ಹೆಚ್ಚಿಸಲು ಪರಿಗಣಿಸುತ್ತಿದೆ ಎಂದು ವರದಿ ಹೇಳಿಕೊಂಡಿದೆ.

ಆದರೆ ಅಮೆರಿಕ ಅಧ್ಯಕ್ಷರ ಇತ್ತೀಚಿನ ಮಾತುಗಳು ಹಲವರನ್ನು ಕೆರಳಿಸಿದೆ.ಮುಂದಿನ ಮೂರು ಅಥವಾ ನಾಲ್ಕು ವರ್ಷಗಳಲ್ಲಿ ಅಮೆರಿಕದೊಂದಿಗೆ ಭಾರತದ ವ್ಯಾಪಾರ ಹೆಚ್ಚುವರಿಯನ್ನು ಕಡಿಮೆಯಾಗಬಹುದು ಎಂದು ಹೇಳಲಾಗುತ್ತಿದೆ.

RELATED ARTICLES

Latest News