ನವದೆಹಲಿ,ಫೆ.22- ದಕ್ಷಿಣ ಏಷ್ಯಾ ರಾಷ್ಟ್ರದಲ್ಲಿ ವಿದೇಶಿ ವಿನಿಮಯ ಉಲ್ಲಂಘನೆ ಆರೋಪದಡಿ ಬ್ರಿಟಿಷ್ ಬ್ರಾಡ್ ಕಾಸ್ಟರ್ (ಬಿಬಿಸಿ) 314,510 ಪೌಂಡ್‌ಗಳ (3.44 ಕೋಟಿ ರೂ.) ದಂಡ ವಿಧಿಸಲಾಗಿದೆ.
ಜಾರಿ ನಿರ್ದೇಶನಾಲಯ(ಇ.ಡಿ,) ಏಪ್ರಿಲ್ 2023ರಲ್ಲಿ ವಿದೇಶಿ ವಿನಿಮಯ ನಿರ್ವಹಣಾ ಕಾಯಿದೆಯಡಿ ತನಿಖೆ ಪ್ರಾರಂಭಿಸಿತ್ತು. ತೆರಿಗೆ ಅಧಿಕಾರಿಗಳು ದೆಹಲಿ ಮತ್ತು ಮುಂಬೈನಲ್ಲಿರುವ ಬ್ರಾಡ್ ಕಾಸ್ಟರ್ ಕಚೇರಿಗಳನ್ನು ಎರಡು ತಿಂಗಳ ನಂತರ ಶೋಧ ನಡೆಸಲಾಗಿತ್ತು. ಭಾರತದ ವಿದೇಶಿ ವಿನಿಮಯ ನಿರ್ವಹಣಾ ಕಾಯಿದೆಯ ಶಂಕಿತ ಉಲ್ಲಂಘನೆಗಳ ಕುರಿತು ಇಡಿ ತನಿಖೆಗಳನ್ನು ನಡೆಸುತ್ತದೆ. ತಪ್ಪಿತಸ್ಥರ ಮೇಲೆ ತೀರ್ಪು ನೀಡಿ ದಂಡ ವಿಧಿಸಬಹುದಾಗಿದೆ.
ವಿದೇಶಿ ವಿನಿಮಯ ನಿರ್ವಹಣಾ ಕಾಯಿದೆ ಅಡಿ ಬಿಬಿಸಿ ಇಂಡಿಯಾ ವಿರುದ್ಧ ಆದೇಶ ನೀಡಿದೆ.
2023 ಆಗಸ್ಟ್ 4ರಂದು ಡಬ್ಲ್ಯುಎಸ್ ಇಂಡಿಯಾ, ಅದರ ಮೂವರು ನಿರ್ದೇಶಕರು ಮತ್ತು ಈ ಕಾನೂನಿನ ಅಡಿ ವಿವಿಧ ಉಲ್ಲಂಘನೆಗಳಿಗೆ ಸಂಬಂಧಿಸಿದಂತೆ ಹಣಕಾಸು ಮುಖ್ಯಸ್ಥರಿಗೆ ಶೋಕಾಸ್ ನೋಟಿಸ್ ನೀಡಿತ್ತು.
ಆ ಬಳಿಕ ಪ್ರಕ್ರಿಯೆಗಳನ್ನು ಆರಂಭಿಸಿ ಈ ತೀರ್ಮಾನ ಕೈಗೊಂಡಿದೆ. 100 ಪ್ರತಿಶತ ಎಫ್ ಡಿಐ ಕಂಪನಿಯಾಗಿರುವ ಬಿಬಿಸಿ ಡಬ್ಲ್ಯುಎಸ್ ಇಂಡಿಯಾ ಡಿಜಿಟಲ್ ಮಾಧ್ಯಮದ ಮೂಲಕ ಸುದ್ದಿ ಮತ್ತು ಪ್ರಚಲಿತ ವಿದ್ಯಮಾನಗಳನ್ನು ಅಪ್ಲೋಡ್ / ಸ್ಟ್ರೀಮಿಂಗ್ ಮಾಡುವಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದೆ.
2019 ಸೆಪ್ಟೆಂಬರ್ 18ರಂದು ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರದ ಉತ್ತೇಜನ ಇಲಾಖೆ (ಡಿಪಿಐಐಟಿ) ಹೊರಡಿಸಿದ ಪತ್ರಿಕಾ ಟಿಪ್ಪಣಿ 4. ಸರ್ಕಾರದ ಅನುಮೋದನೆ ಮಾರ್ಗದ ಅಡಿ ಡಿಜಿಟಲ್ ಮಾಧ್ಯಮಕ್ಕೆ ಶೇಕಡಾ 26 ರಷ್ಟು ಎಪ್ಪಿಐ ಮಿತಿಯನ್ನು ನಿಗದಿಪಡಿಸಿದೆ. ಡಬ್ಲ್ಯುಎಸ್ ಇಂಡಿಯಾದಲ್ಲಿ ವಿಧಿಸಲಾದ ಒಟ್ಟು ದಂಡವು 3,44,48,850 ರೂಪಾಯಿಗಳಾಗಿದ್ದು, 15.10.2021ರ ನಂತರ ಈಇಒಎಂ 1999 ರ ನಿಬಂಧನೆಗಳನ್ನು ಉಲ್ಲಂಘಿಸಿದ ದಿನಾಂಕದವರೆಗೆ ಪ್ರತಿ ದಿನಕ್ಕೆ 5,000 ರೂಪಾಯಿಗಳ ದಂಡ ವಿಧಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ಮೂವರು ನಿರ್ದೇಶಕರಾದ ಗೈಲ್ಸ್ ಆಂಟೋನಿ ಹಂಟ್, ಇಂದು ಶೇಖರ್ ಸಿನ್ಹಾ ಮತ್ತು ಪಾಲ್ ಮೈಕೆಲ್ ಗಿಬ್ಬನ್ಸ್ ಅವರಿಗೆ ತಲಾ 1,14,82,950 ರೂ.ದಂಡ ವಿಧಿಸಲಾಗಿದೆ.ಫೆಬ್ರವರಿ
2023 ರಲ್ಲಿ ನಡೆದ ತೆರಿಗೆ ದಾಳಿಗಳು 2002 ರ ಗಲಭೆಗಳ ಸಮಯದಲ್ಲಿ ಗುಜರಾತ್ ರಾಜ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವದ ಬಗ್ಗೆ ಆ ಸಾಕ್ಷ್ಯಚಿತ್ರವನ್ನು ಬಿಡುಗಡೆ ಮಾಡಿದ ನಂತರ ಗಲಭೆಯಲ್ಲಿ ಕನಿಷ್ಠ 1,000 ಜನರು ಕೊಲ್ಲಲ್ಪಟ್ಟಿದ್ದರು.
ಭಾರತ ಸರ್ಕಾರವು 2023 ರಲ್ಲಿ ಸಾಕ್ಷ್ಯಚಿತ್ರವನ್ನು ಪ್ರಚಾರ ಎಂದು ವಜಾಗೊಳಿಸಿ, ಅದರ ಪ್ರಸಾರವನ್ನು ನಿರ್ಬಂಧಿಸಿತ್ತು. ದೇಶದಲ್ಲಿ ಸಾಮಾಜಿಕ ಮಾಧ್ಯಮದ ಮೂಲಕ ಯಾವುದೇ ಕ್ಲಿಪ್‌ಗಳನ್ನು ಹಂಚಿಕೊಳ್ಳುವುದನ್ನು ನಿರ್ಬಂಧ ಹಾಕಿತ್ತು.
ಮೋದಿ ಅವರು ಗಲಭೆಗಳನ್ನು ತಡೆಯಲು ಸಾಕಷ್ಟು ಕೆಲಸ ಮಾಡಲಿಲ್ಲ ಎಂಬ ಆರೋಪವನ್ನು ನಿರಾಕರಿಸಿದರು ಮತ್ತು ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯ ತನಿಖೆಯ ನಂತರ 2012ರಲ್ಲಿ ದೋಷಮುಕ್ತರಾಗಿದ್ದರು.