Monday, April 28, 2025
Homeರಾಷ್ಟ್ರೀಯ | National26 ರಫೆಲ್‌ ಯುದ್ಧ ವಿಮಾನ ಖರೀದಿಗೆ ಫ್ರಾನ್ಸ್ ಜೊತೆ ಭಾರತ ಒಪ್ಪಂದ

26 ರಫೆಲ್‌ ಯುದ್ಧ ವಿಮಾನ ಖರೀದಿಗೆ ಫ್ರಾನ್ಸ್ ಜೊತೆ ಭಾರತ ಒಪ್ಪಂದ

India, France To Sign Rs 63,000 Crore Deal For 26 Rafale-M Jets For Indian Navy Today

ನವದೆಹಲಿ,ಏ.28- ಒಂದು ಕಡೆ ಭಾರತ ಮತ್ತು ಪಾಕಿಸ್ತಾನ ನಡುವೆ ಗಡಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿ ಯಾವುದೇ ಕ್ಷಣದಲ್ಲಿ ಎರಡೂ ರಾಷ್ಟ್ರಗಳ ನಡುವೆ ಯುದ್ದದ ಕಾರ್ಮೋಡ ಆವರಿಸಿರುವ ಬೆನ್ನಲ್ಲೇ, ಭಾರತ ಮತ್ತು ಫ್ರಾನ್ಸ್ ನಡುವೆ 26 ರಫೇಲ್‌ ಮೆರೈನ್‌ ಯುದ್ಧ ವಿಮಾನಗಳ ಖರೀದಿಗೆ ಸಂಬಂಧಿಸಿದ 63,000 ಕೋಟಿ ರೂಪಾಯಿಗಳ ಒಪ್ಪಂದಕ್ಕೆ ಇಂದು ಸಹಿ ಹಾಕಲಾಗಿದೆ.

ಈ ಬೆಳವಣಿಗೆಯಿಂದಾಗಿ ಭಾರತದ ರಕ್ಷಣಾ ಬಲ ಮತ್ತಷ್ಟು ಹೆಚ್ಚಳವಾಗಿದ್ದು, ಅಣುಬಾಂಬ್‌ ಹಾಕುತ್ತೇವೆ ಎಂದು ವಿಶ್ವದ ಮುಂದೆ ಕೊಚ್ಚಿಕೊಂಡಿದ್ದ ಪಾಕಿಸ್ತಾನಕ್ಕೆ ಮತ್ತಷ್ಟು ಮರ್ಮಾಘಾತ ಉಂಟು ಮಾಡಿದೆ.

ಒಪ್ಪಂದದ ಸಹಿ ಕಾರ್ಯಕ್ರಮದಲ್ಲಿ ಭಾರತದ ರಕ್ಷಣಾ ಇಲಾಖೆಯ ಪ್ರತಿನಿಧಿಗಳು ಮತ್ತು ಭಾರತದಲ್ಲಿರುವ ಫ್ರ್ಸ್‌ಾ ರಾಯಭಾರಿ ಭಾಗವಹಿಸಿದ್ದರು. ಭಾರತದ ರಕ್ಷಣಾ ಕಾರ್ಯದರ್ಶಿ ರಾಜೇಶ್‌ ಕುಮಾರ್‌ ಸಿಂಗ್‌ ಭಾರತದ ಪರವಾಗಿ ಪ್ರತಿನಿಧಿಯಾಗಿ ಭಾಗವಹಿಸಿದರೆ, ಫ್ರ್ಸ್‌ಾ ಮತ್ತು ಭಾರತದ ರಕ್ಷಣಾ ಸಚಿವರು ವಿಡಿಯೋ ಕಾನ್ಫರ್ಸೆ್‌ ಮೂಲಕ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಈ ಒಪ್ಪಂದವು ಭಾರತದ ರಕ್ಷಣಾ ವಲಯದಲ್ಲಿ ಮಹತ್ವದ ಹೆಜ್ಜೆಯಾಗಲಿದೆ. ಇದು ಭಾರತದ ಸಾಗರ ಭದ್ರತೆಯನ್ನು ಬಲಪಡಿಸುವ ಜೊತೆಗೆ ಪ್ರಾದೇಶಿಕ ಭದ್ರತೆಯನ್ನು ಕಾಪಾಡಲು ಸಹಾಯ ಮಾಡಲಿದೆ.

ಈ ಹಿಂದಿನ ರಫೇಲ್‌ ಯುದ್ಧ ವಿಮಾನ ಖರೀದಿಯು ಭಾರೀ ವಿವಾದಕ್ಕೆ ಸಿಲುಕಿತ್ತು. ಪ್ರಧಾನಿ ನರೇಂದ್ರ ಮೋದಿ ನೇತತ್ವದ ಕೇಂದ್ರ ಸರಕಾರದವು ಈ ಸಂಬಂಧ ಭ್ರಷ್ಟಾಚಾರದ ಆರೋಪಗಳಿಗೆ ಗುರಿಯಾಗಿತ್ತು. ಇದೀಗ ಮತ್ತೆ 26 ರಫೇಲ್‌ ಯುದ್ಧ ವಿಮಾನಗಳನ್ನು ಖರೀದಿಸಲು ಸರಕಾರ ಮುಂದಾಗಿದೆ.

ಭಾರತವು ಫ್ರಾನ್‌್ಸನಿಂದ 63,000 ಕೋಟಿ ರೂಪಾಯಿ ವೆಚ್ಚದಲ್ಲಿ 26 ರಫೇಲ್‌ ಎಂ ಯುದ್ಧ ವಿಮಾನಗಳನ್ನು ಖರೀದಿಸಲು ಮುಂದಾಗಿದೆ. ಈ ಒಪ್ಪಂದವು ಭಾರತದ ನೌಕಾಪಡೆಯನ್ನು ಬಲಪಡಿಸಲಿದ್ದು, ಮತ್ತು ಹಿಂದೂ ಮಹಾಸಾಗರದಲ್ಲಿ ಚೀನಾದ ಹೆಚ್ಚುತ್ತಿರುವ ಪ್ರಭಾವವನ್ನು ಎದುರಿಸಲು ಸಹಾಯ ಮಾಡಲಿದೆ. ಈ ವಿಮಾನಗಳನ್ನು ಐಎನ್‌ಎಸ್‌‍ ವಿಕ್ರಾಂತ್ನಲ್ಲಿ ನಿಯೋಜಿಸಲು ಉದ್ದೇಶಿಸಲಾಗಿದ್ದು, ಒಪ್ಪಂದಕ್ಕೆ ಸಹಿ ಹಾಕಿದ ನಂತರ 3-5 ವರ್ಷಗಳಲ್ಲಿ ವಿತರಣೆ ಆರಂಭವಾಗಲಿದೆ.

ಈ 26 ರಫೇಲ್‌ ಮೆರೈನ್‌ ಯುದ್ಧ ವಿಮಾನಗಳು ಭಾರತದ ವಿಮಾನವಾಹಕ ನೌಕೆಗಳಾದ ಐಎನ್‌ಎಸ್‌‍ ವಿಕ್ರಾಂತ್‌ನಲ್ಲಿ ನಿಯೋಜನೆಗೆ ತುರ್ತು ಅಗತ್ಯವಾಗಿವೆ. ಪ್ರಸ್ತುತ ಐಎನ್‌ಎಸ್‌‍ ವಿಕ್ರಾಂತ್‌ ನಲ್ಲಿ ಬಳಕೆಯಲ್ಲಿರುವ ಮಿಗ್‌-29ಕೆ ಯುದ್ಧ ವಿಮಾನಗಳು ನಿರ್ವಹಣೆಗೆ ಸಂಬಂಧಿಸಿದ ಸಮಸ್ಯೆಗಳಿಂದ ಕಾರ್ಯಕ್ಷಮತೆಯಲ್ಲಿ ಕುಸಿತ ಕಂಡಿವೆ. ಸ್ವದೇಶಿ ವಿಮಾನವಾಹಕ ಯುದ್ಧ ವಿಮಾನದ ಅಭಿವೃದ್ಧಿಯಾಗುವವರೆಗೆ ಈ ವಿಮಾನಗಳನ್ನು ತಾತ್ಕಾಲಿಕ ಪರಿಹಾರವಾಗಿ ಖರೀದಿಸಲಾಗುತ್ತಿದೆ.

ಭಾರತೀಯ ವಾಯುಪಡೆಯು ನೌಕಾಪಡೆಯು 22 ಸಿಂಗಲ್‌ ಸೀಟರ್‌ ಮತ್ತು ನಾಲ್ಕು ಟ್ವಿನ್‌ ಸೀಟರ್‌ ವಿಮಾನಗಳನ್ನು ಈ ಒಪ್ಪಂದದ ಭಾಗವಾಗಿ ಪಡೆಯಲಿದೆ.ಈ ಒಪ್ಪಂದವು ಭಾರತದ ಸಾಗರ ಸಾಮರ್ಥ್ಯವನ್ನು ಹೆಚ್ಚಿಸಲಿದೆ. ಹಿಂದೂ ಮಹಾಸಾಗರದಲ್ಲಿ ಚೀನಾ ತನ್ನ ಪ್ರಭಾವವನ್ನು ಹೆಚ್ಚಿಸುತ್ತಿರುವ ಹಿನ್ನೆಲೆಯಲ್ಲಿ ಭಾರತವು ಈ ನಿರ್ಧಾರವನ್ನು ತೆಗೆದುಕೊಂಡಿದೆ. ಜುಲೈ 2023ರಲ್ಲಿ, ರಕ್ಷಣಾ ಸಚಿವಾಲಯವು ಫ್ರಾನ್‌್ಸನಿಂದ ರಫೇಲ್‌‍-ಎಂ ಜೆಟ್‌ಗಳನ್ನು ಖರೀದಿಸಲು ಅನುಮೋದನೆ ನೀಡಿತ್ತು.

ಭಾರತೀಯ ವಾಯುಪಡೆ ಈಗಾಗಲೇ ಅಂಬಾಲಾ ಮತ್ತು ಹಶಿಮಾರಾದಲ್ಲಿರುವ ತನ್ನ ನೆಲೆಗಳಲ್ಲಿ 36 ರಫೇಲ್‌ ಜೆಟ್‌ಗಳನ್ನು ನಿರ್ವಹಿಸುತ್ತಿದೆ. ಹೊಸ ರಫೇಲ್‌ ಮೆರೈನ್‌ ಒಪ್ಪಂದವು ಭಾರತೀಯ ವಾಯುಪಡೆಯ ಸಾಮರ್ಥ್ಯಗಳನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ, ಇದರಲ್ಲಿ ವೈಮಾನಿಕ ಇಂಧನ ತುಂಬುವ ವ್ಯವಸ್ಥೆಯನ್ನು ನವೀಕರಿಸುವುದು ಸೇರಿದೆ. ಸುಮಾರು 10 ಭಾರತೀಯ ವಾಯುಪಡೆಯ ರಫೇಲ್‌ ವಿಮಾನಗಳು ಇತರ ವಿಮಾನಗಳಿಗೆ ಮಧ್ಯ-ಗಾಳಿಯಲ್ಲಿ ಇಂಧನ ತುಂಬಲು ಅವಕಾಶವಿರುತ್ತದೆ, ಹೀಗಾಗಿ ಅವುಗಳ ಕಾರ್ಯಾಚರಣೆಯ ವ್ಯಾಪ್ತಿಯನ್ನು ವಿಸ್ತರಿಸುತ್ತದೆ.

ಏಪ್ರಿಲ್‌ 9 ರಂದು, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟದ ಭದ್ರತಾ ಸಮಿತಿಯ ಸಭೆಯಲ್ಲಿ 26 ರಫೇಲ್‌ ಮೆರೈನ್‌ ಯುದ್ಧ ವಿಮಾನಗಳ ಖರೀದಿಗೆ ಭಾರತದ ಇತಿಹಾಸದಲ್ಲೇ ಅತಿದೊಡ್ಡ ರಕ್ಷಣಾ ಒಪ್ಪಂದಕ್ಕೆ ಅನುಮೋದನೆ ನೀಡಲಾಗಿತ್ತು. ಈ ಉ2ಉ 22 ಏಕ-ಆಸನ ಮತ್ತು 4 ಡಬಲ್‌‍-ಆಸನ ವಿಮಾನಗಳನ್ನು ಒಳಗೊಂಡಿದ್ದು, ಇದರ ಜೊತೆಗೆ ವಿಮಾನಗಳ ನಿರ್ವಹಣೆ, ಲಾಜಿಸ್ಟಿಕ್‌ ಬೆಂಬಲ, ಸಿಬ್ಬಂದಿ ತರಬೇತಿ ಮತ್ತು ಸ್ವದೇಶಿ ಘಟಕಗಳ ಉತ್ಪಾದನೆಗೆ ಸಂಬಂಧಿಸಿದ ಸಮಗ್ರ ಪ್ಯಾಕೇಜ್‌ ಸೇರಿದೆ.

ಭಾರತೀಯ ವಾಯುಸೇನೆ ಈಗಾಗಲೇ 2016 ರಲ್ಲಿ ಸಹಿ ಮಾಡಲಾದ ಪ್ರತ್ಯೇಕ ಒಪ್ಪಂದದಡಿ 36 ರಫೇಲ್‌ ವಿಮಾನಗಳ ಸಂಪೂರ್ಣ ಫ್ಲೀಟ್‌ ಅನ್ನು ಹೊಂದಿದೆ. ಈ ವಿಮಾನಗಳು ಅಂಬಾಲಾ ಮತ್ತು ಹಾಸಿಮಾರಾದಲ್ಲಿವೆ. ರಫೇಲ್‌ ಎಂ ವಿಮಾನಗಳು ಐಎನ್‌ಎಸ್‌‍ ವಿಕ್ರಾಂತ್ನಿಂದ ಕಾರ್ಯಾಚರಣೆ ನಡೆಸಲಿದ್ದು, ಇದರೊಂದಿಗೆ ಪ್ರಸ್ತುತ ಮಿಗ್‌-29ಕೆ ಫ್ಲೀಟ್‌ಗೆ ಬೆಂಬಲ ನೀಡಲಿವೆ.
ಡಸಾಲ್ಟ್‌‍ ಏವಿಯೇಷನ್‌ ನಿರ್ಮಿಸಲಿರುವ 26 ರಫೇಲ್‌‍-ಎಂ ಯುದ್ಧವಿಮಾನಗಳು ಐಎನ್‌ಎಸ್‌‍ ವಿಕ್ರಾಂತ್‌ನಲ್ಲಿ ಕಾರ್ಯನಿರ್ವಹಿಸಲು ಬೇಕಾದ ನಿರ್ದಿಷ್ಟ ವರ್ಧನೆಗಳನ್ನು ಹೊಂದಿವೆ. ಒಪ್ಪಂದಕ್ಕೆ ಸಹಿ ಹಾಕಿದ ನಂತರ 37 ರಿಂದ 65 ತಿಂಗಳುಗಳಲ್ಲಿ ವಿಮಾನಗಳ ವಿತರಣೆಯಾಗುವ ನಿರೀಕ್ಷೆ ಇದೆ.

ಯುದ್ಧ ವಿಮಾನಗಳ ನಿರ್ವಹಣೆ, ವ್ಯವಸ್ಥಾಪನಾ ಬೆಂಬಲ, ಸಿಬ್ಬಂದಿ ತರಬೇತಿ ಮತ್ತು ಹೊಣೆಗಾರಿಕೆಯನ್ನು ಸರಿದೂಗಿಸುವ ಬಾಧ್ಯತೆಗಳ ಅಡಿಯಲ್ಲಿ ಸ್ಥಳೀಯ ಉತ್ಪಾದನಾ ಘಟಕಗಳಿಗೆ ಸಮಗ್ರ ಪ್ಯಾಕೇಜ್‌ ನ್ನು ಸಹ ಒಳಗೊಂಡಿದೆ.ಐಎನ್‌ಎಸ್‌‍ ವಿಕ್ರಾಂತ್ನಲ್ಲಿ ರಫೇಲ್‌ ಯುದ್ಧ ವಿಮಾನಗಳನ್ನು ಅಳವಡಿಸಿದ ಬಳಿಕ, ಮಿಗ್‌-29ಕೆ ವಿಮಾನಗಳು ಐಎನ್‌ಎಸ್‌‍ ವಿಕ್ರಮಾದಿತ್ಯದಲ್ಲಿ ನಿಯೋಜಿಸಲಾಗುವುದು. ಇದರಿಂದ ನೌಕಾಪಡೆಯ ಶಕ್ತಿಯೂ ಹೆಚ್ಚಲಿದೆ.

RELATED ARTICLES

Latest News