Thursday, July 4, 2024
Homeರಾಜ್ಯಭಾರತ ಯೋಗದ ಮೂಲಕ ಇಡೀ ಜಗತ್ತನ್ನು ಬೆಸೆದಿದೆ : ಹೆಚ್ಡಿಕೆ

ಭಾರತ ಯೋಗದ ಮೂಲಕ ಇಡೀ ಜಗತ್ತನ್ನು ಬೆಸೆದಿದೆ : ಹೆಚ್ಡಿಕೆ

ನವದೆಹಲಿ, ಜೂ.21- ಪ್ರತಿಯೊಬ್ಬರೂ ಯೋಗವನ್ನು ಜೀವನ ಶೈಲಿಯನ್ನಾಗಿ ಮಾಡಿಕೊಳ್ಳಬೇಕು ಎಂದು ಕೇಂದ್ರ ಭಾರೀ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರಾದ ಹೆಚ್‌.ಡಿ. ಕುಮಾರಸ್ವಾಮಿ ಅವರು ಪ್ರತಿಪಾದಿಸಿದರು.ನವದೆಹಲಿಯ ನೋಯ್ಡಾದ ಭಾರತ್‌ ಹೆವಿ ಎಲೆಕ್ಟ್ರಿಕಲ್‌ ಕಂಪನಿಯ ಸಮುಚ್ಚಯದಲ್ಲಿ ಹತ್ತನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಜಗತ್ತಿಗೆ ಭಾರತ ಕೊಟ್ಟ ಅಮೂಲ್ಯ ಕೊಡುಗೆ ಯೋಗ. ಯೋಗದ ಮೂಲಕ ಇಡೀ ಜಗತ್ತನ್ನು ಭಾರತದ ಬೆಸೆದಿದೆ. ಯೋಗವೆಂದರೆ ಜೋಡಿಸು, ಸೇರಿಸು, ಕೂಡಿಸು ಎಂಬ ಅರ್ಥ ಬರುತ್ತದೆ. ಅದಕ್ಕೆ ಸಾರ್ಥಕತೆ ತರುವ ನಿಟ್ಟಿನಲ್ಲಿ ಯೋಗ ಇಡೀ ಜಗತ್ತನ್ನು ಬೆಸೆದುಕೊಂಡು ಬೆಳಗುತ್ತಿದೆ ಎಂದು ಅವರು ಹೇಳಿದರು.

ಋಷಿ ಮುನಿಗಳು ನಮಗೆ ಯೋಗವನ್ನು ಕೊಟ್ಟು ಹೋದರು. ಪ್ರಧಾನಿ ನರೇಂದ್ರ ಮೋದಿ ಅವರು ಯೋಗವನ್ನು ಜಾಗತಿಕ ಮಟ್ಟದಲ್ಲಿ ಪ್ರಚಾರಗೊಳಿಸಿ ಭಾರತದ ನೆಲದಲ್ಲಿ ನಿಂತು ಜಗತ್ತನ್ನು ನೋಡುವ ಹಿರಿಮೆಯನ್ನು ತಂದುಕೊಟ್ಟರು. ಇದಕ್ಕಾಗಿ ನಾನು ಪ್ರಧಾನಿಗಳನ್ನು ಮನಸಾರೆ ಅಭಿನಂದಿಸುತ್ತೇನೆ ಎಂದರು.

ಯೋಗ ವಿಕಾಸಕ್ಕೆ ಪೂರಕ :
ಯೋಗದ ಮೂಲಕ ಮಾಡುವ ಸಾಧನೆ ಭವ್ಯ ಭಾರತಕ್ಕೆ ಪೂರಕ. ವಿಕಾಸಕ್ಕೆ ಪೂರಕ. ಮನುಕುಲಕ್ಕೆ ಪೂರಕ. ಸಾಧನೆಯ ಮೆಟ್ಟಿಲೇರಲು ಕೂಡ ಪೂರಕ. ಒಟ್ಟಾರೆಯಾಗಿ ಯೋಗವು ನಮನ್ನು ಸಾಧಕರನ್ನಾಗಿ ಮಾಡಿ ದೇಶವನ್ನು ರಚನಾತಕವಾಗಿ ಕಟ್ಟುತ್ತದೆ ಎಂದು ಸಚಿವ ಕುಮಾರಸ್ವಾಮಿ ಅವರು ಒತ್ತಿ
ಹೇಳಿದರು.

ಯೋಗವು ನಮ ಆತವಿಶ್ವಾಸವನ್ನು ಹೆಚ್ಚಿಸುತ್ತದೆ ಮತ್ತು ಮನಸ್ಸನ್ನು ನಿಯಂತ್ರಿಸುತ್ತದೆ. ಯೋಗವು ನಮ ಮನಸ್ಸು ಮತ್ತು ದೇಹವನ್ನು ಪುನರುಜ್ಜೀವನಗೊಳಿಸುತ್ತದೆ. ಪ್ರತಿದಿನ ಯೋಗ ಮಾಡುವ ಮೂಲಕ ನಾವೆಲ್ಲರೂ ನಮ ದೇಹ, ಮನಸ್ಸು ಚೈತನ್ಯಶೀಲವಾಗಿರುತ್ತದೆ ಎಂದು ಅವರು ನುಡಿದರು.

ಮನಸ್ಸು, ದೇಹ ಎರಡೂ ಸನಾರ್ಗದಲ್ಲಿ ನಡೆಯುವಂತೆ ಮಾಡುವ ಯೋಗಕ್ಕೆ 5,000 ವರ್ಷಗಳ ಇತಿಹಾಸವಿದೆ. ಋಗ್ವೇದದಲ್ಲಿ ಯೋಗದ ಬಗ್ಗೆ ಉಲ್ಲೇಖವಿದೆ ಎಂದು ನಾನು ಕೇಳಿದ್ದೇನೆ. ಅಂತ ಯೋಗ ನಮ ದೇಶಕ್ಕೆ ಆರೋಗ್ಯವಂತ ಮಾನವ ಸಂಪನೂಲವನ್ನು ಸೃಷ್ಟಿ ಮಾಡುತ್ತಿದೆ. ದೃಢತೆಯ ನಾಯಕತ್ವಕ್ಕೆ ಯೋಗ ದೊಡ್ಡ ಕಾಣಿಕೆ ನೀಡುತ್ತಿದೆ ಎಂದು ಕೇಂದ್ರ ಸಚಿವರು ಪ್ರತಿಪಾದಿಸಿದರು.

ಪ್ರಧಾನಿಗಳು ಯುವಕರಿಗೆ ಪ್ರೇರಣೆ :
ನಾನು ಕಂಡ ಹಾಗೆ ಪ್ರಧಾನಿ ನರೇಂದ್ರ ಮೋದಿ ಅವರು ಯೋಗವನ್ನೇ ಬದುಕು ಮಾಡಿಕೊಂಡಿರುವ ನಿಜಯೋಗಿ. ಬಹುಶಃ ಅವರ ಜೀವನ ಶೈಲಿ, ಯೋಗದ ಕಡೆಗಿನ ಒಲವು ಈ ತಲೆಮಾರಿನ ಯುವಕರಿಗೆ ಪ್ರೀರಣೆ ಎಂದು ಬಲವಾಗಿ ನಂಬಿದೇನೆ. ಐದು ಸಾವಿರ ವರ್ಷಗಳಿಂದ ಭಾರತ ನೆಲದಲ್ಲಿ ನಮ ಜೀವನ ಶೈಲಿಯೇ ಆಗಿರುವ ಯೋಗವನ್ನು ವಿಶ್ವಸಂಸ್ಥೆಗೆ ತೆಗೆದುಕೊಂಡು ಹೋದ ಪ್ರಧಾನಿಗಳಿಗೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ ಎಂದರು.

RELATED ARTICLES

Latest News