ನವದೆಹಲಿ,ಮೇ.11- ಪಾಕಿಸ್ತಾನಕ್ಕೆ ಬೆಂಬಲ ನೀಡಿದ ಟರ್ಕಿ ಮತ್ತು ಅಜೆರ್ಬೈಜಾನ್‌ಗೆ ಭಾರತ ಪೆಟ್ಟು ನೀಡಿದೆ. ಪ್ರಮುಖ ಪ್ರಯಾಣ ಕಂಪನಿಗಳು ಈ ಎರಡೂ ದೇಶಗಳಿಗೆ ಎಲ್ಲಾ ಪ್ಯಾಕೇಜ್‌ಗಳನ್ನು ಸ್ಥಗಿತಗೊಳಿಸಿವೆ ಉಗ್ರರ ಬೆಂಬಲಿಸುವ ಪಾಕಿಸ್ತಾನಕ್ಕೆ ಈ ಎರಡು ದೇಶಗಳು ಬೆಂಬಲ ಘೋಷಿಸಿವೆ. ಅದರ ಬೆನ್ನಲ್ಲೇ ಈ ಕ್ರಮಕೈಗೊಳ್ಳಲಾಗಿದೆ.
ಈಸ್‌ಮೈಟ್ರಿಪ್, ಕಾಕ್ಸ್‌ಕಿಂಗ್ಸ್ ಹಾಗೂ ಟ್ರಾವೊಮಿಂಟ್, ಟರ್ಕಿ ಮತ್ತು ಅಜೆರ್ಬೈಜಾನ್‌ಗೆ ಬುಕಿಂಗ್‌ಗಳನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸುವುದಾಗಿ ಭಾರತ ಘೋಷಿಸಿವೆ. ಇದು ರಾಷ್ಟ್ರೀಯ ಭಾವನೆಗೆ ಅನುಗುಣವಾಗಿ ಮತ್ತು ಸುರಕ್ಷತೆ ಮತ್ತು ರಾಜತಾಂತ್ರಿಕ ಪರಿಣಾಮಗಳ ಬಗ್ಗೆ ಹೆಚ್ಚುತ್ತಿರುವ ಕಳವಳವನ್ನು ಪ್ರತಿಬಿಂಬಿಸುತ್ತದೆ.
ಇತ್ತೀಚಿನ ಬೆಳವಣಿಗೆಗಳನ್ನು ಗಮನದಲ್ಲಿಟ್ಟುಕೊಂಡು ಅಜೆರ್ಬೈಜಾನ್, ಉಲ್ಲೇಕಿಸ್ತಾನ್ ಮತ್ತು ಟರ್ಕಿಗೆ ಎಲ್ಲಾ ಹೊಸ ಪ್ರಯಾಣ ಕೊಡುಗೆಗಳನ್ನು ಸ್ಥಗಿತಗೊಳಿಸಲು ನಾವು ನಿರ್ಧರಿಸಿದ್ದೇವೆ. ನಮಗೆ ಮತ್ತು ನಮ್ಮ ದೇಶದ ಜನರಿಗೆ ಬದ್ದತೆಯಿಂದ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆಲಿಲಿ ಎಂದು ಕಾಕ್ಸ್ ಕಿಂಗ್ಸ್ ನ ನಿರ್ದೇಶಕ ಕರಣ್ ಅಗರ್ವಾಲ್ ಹೇಳಿದ್ದಾರೆ.