Friday, August 29, 2025
Homeಅಂತಾರಾಷ್ಟ್ರೀಯ | Internationalಆರ್ಥಿಕ ಸ್ಥಿರತೆಯಲ್ಲಿ ಭಾರತ 3ನೇ ಅತಿದೊಡ್ಡ ರಾಷ್ಟ್ರ : ಪ್ರಧಾನಿ ಮೋದಿ

ಆರ್ಥಿಕ ಸ್ಥಿರತೆಯಲ್ಲಿ ಭಾರತ 3ನೇ ಅತಿದೊಡ್ಡ ರಾಷ್ಟ್ರ : ಪ್ರಧಾನಿ ಮೋದಿ

India is the 3rd largest country in economic stability: PM Modi

ಟೋಕಿಯೋ(ಜಪಾನ್‌), ಆ.29- ಭಾರತವು ರಾಜಕೀಯ ಹಾಗೂ ಆರ್ಥಿಕ ಸ್ಥಿರತೆಗಳಲ್ಲಿ ಪಾರ ದರ್ಶಕತೆ ಹೊಂದಿದ್ದು ವಿಶ್ವದಲ್ಲೇ ಮೂರನೇ ಅತಿದೊಡ್ಡ ಆರ್ಥಿಕ ರಾಷ್ಟ್ರವಾಗಿ ಹೊರಹೊಮ್ಮಲಿದೆ ಎಂದು ಪ್ರಧಾನಿ ನರೇಂದ್ರಮೋದಿ ತಿಳಿಸಿದರು. ಭಾರತ ಮತ್ತು ಜಪಾನ್‌ ನಡುವಿನ ಆರ್ಥಿಕ ವೇದಿಕೆಯಲ್ಲಿ ಮಾತನಾಡಿದ ಅವರು, ದೇಶದ ರಾಜಕೀಯ, ಆರ್ಥಿಕ ಸ್ಥಿರತೆ ನೀತಿಗಳಲ್ಲಿ ಪಾರದರ್ಶಕತೆ ಮತ್ತು ಭವಿಷ್ಯವಾಣಿಯನ್ನು ಹೊಂದಿದೆ. ಭಾರತ ಇಂದು ವಿಶ್ವದಲ್ಲೇ 3ನೇ ಅತಿದೊಡ್ಡ ರಾಷ್ಟ್ರವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬಂಡವಾಳವು ಕೇವಲ ಬೆಳೆಯುವುದಿಲ್ಲ. ಅದು ಗುಣಿಸುತ್ತದೆ. ಕಳೆದ 12 ವರ್ಷಗಳಲ್ಲಿ ಆಗಿರುವ ಬೆಳವಣಿಗೆ ಮತ್ತು ಪರಿವರ್ತನೆ ಬಗ್ಗೆ ನಿಮಗೆಲ್ಲರಿಗೂ ತಿಳಿದಿದೆ. ನಾವು ಜಾಗತಿಕ ಜಿಡಿಪಿಗೆ ಶೇ.18ರಷ್ಟು ಕೊಡುಗೆ ನೀಡುತ್ತೇವೆ. ಮಾರುಕಟ್ಟೆಗಳು ಬಲವಾದ ಆದಾಯವನ್ನು ನೀಡುತ್ತದೆ. ಸುಧಾರಣೆ, ರೂಪಾಂತರ, ಕಾರ್ಯಕ್ಷಮತೆಯ ನಮ ವಿಧಾನವು ಪ್ರಗತಿಗೆ ಪೂರಕವಾಗಿದೆ ಎಂದು ಅಭಿಪ್ರಾಯಪಟ್ಟರು.

ಜೆಟ್ರೊ ಹೇಳುವಂತೆ ಶೇ.80ರಷ್ಟು ಕಂಪನಿಗಳು ಭಾರತದಲ್ಲಿ ವಿಸ್ತರಿಸಲು ಬಯಸುತ್ತಿವೆ. ಶೇ.75ರಷ್ಟು ಕಂಪನಿಗಳು ಲಾಭ ಗಳಿಸುತ್ತಿವೆ. ನಮಲ್ಲಿ ಬಂಡವಾಳ ಹೂಡಿದರೆ ಅದು ಕೇವಲ ಬೆಳೆಯುವುದಲ್ಲ ಗುಣಿಸುತ್ತಾ ಹೋಗುತ್ತದೆ. ಅಂದರೆ ನಿಮ ಹೂಡಿಕೆಗೆ ಲಾಭ ಬರುತ್ತದೆ ಎಂದು ಹೇಳಿದರು.

ಭಾರತ-ಜಪಾನ್‌ ಪಾಲುದಾರಿಕೆಯನ್ನು ಕಾರ್ಯತಂತ್ರ ಮತ್ತು ಬುದ್ಧಿವಂತ ಎಂದು ಬಣ್ಣಿಸಿದ ಮೋದಿ, ಆರ್ಥಿಕ ತರ್ಕದಿಂದ ಬಲಗೊಂಡು, ನಾವು ಹಂಚಿಕೆಯ ಹಿತಾಸಕ್ತಿಗಳನ್ನು ಹಂಚಿಕೆಯ ಸಮೃದ್ಧಿಯನ್ನಾಗಿ ಪರಿವರ್ತಿಸಿದ್ದೇವೆ. ಜಾಗತಿಕ ದಕ್ಷಿಣಕ್ಕೆ ಜಪಾನಿನ ವ್ಯವಹಾರಕ್ಕೆ ಭಾರತವು ಚಿಮುವ ಹಲಗೆಯಾಗಿದೆ. ಒಟ್ಟಾಗಿ ನಾವು ಸ್ಥಿರತೆ, ಬೆಳವಣಿಗೆ ಮತ್ತು ಸಮೃದ್ಧಿಗಾಗಿ ಏಷ್ಯನ್‌ ಶತಮಾನವನ್ನು ರೂಪಿಸುತ್ತೇವೆ ಎಂದು ಹೇಳಿದರು.

ಭಾರತದ ಅಭಿವೃದ್ಧಿಯ ಪಯಣದಲ್ಲಿ ಜಪಾನ್‌ ಯಾವಾಗಲೂ ಪ್ರಮುಖ ಪಾಲುದಾರ. ಮೆಟ್ರೋದಿಂದ ಉತ್ಪಾದನೆಯವರೆಗೆ, ಸೆಮಿಕಂಡಕ್ಟರ್‌ನಿಂದ ಸ್ಟಾರ್ಟ್‌-ಅಪ್‌ಗಳವರೆಗೆ ನಮ ಪಾಲುದಾರಿಕೆಯು ನಂಬಿಕೆಯ ಸಂಕೇತವಾಗಿದೆ. ಜಪಾನಿನ ಕಂಪನಿಗಳು ಭಾರತದಲ್ಲಿ 40 ಶತಕೋಟಿ ಡಾಲರ್‌ಗಳಿಗಿಂತ ಹೆಚ್ಚು ಹೂಡಿಕೆ ಮಾಡಿವೆ. ಕಳೆದ ಎರಡು ವರ್ಷಗಳಲ್ಲಿ 13 ಶತಕೋಟಿ ಡಾಲರ್‌ಗಳಷ್ಟು ಖಾಸಗಿ ಹೂಡಿಕೆಯಾಗಿದೆ ಎಂದು ತಿಳಿಸಿದರು.

ಭಾರತದಲ್ಲಿನ ಈ ಬದಲಾವಣೆಯ ಹಿಂದೆ ಸುಧಾರಣೆ, ಕಾರ್ಯಕ್ಷಮತೆ ಮತ್ತು ರೂಪಾಂತರದ ನಮ ವಿಧಾನವಿದೆ ಎಂದ ಅವರು, ಭಾರತದ ಪ್ರಗತಿಗೆ ಅದರ ಸುಧಾರಣೆಗೆ ಮನ್ನಣೆ ನೀಡಿದರು. ರಕ್ಷಣೆ ಮತ್ತು ಬಾಹ್ಯಾಕಾಶದಲ್ಲಿನ ಹಿಂದಿನ ಸುಧಾರಣೆಗಳ ಮೇಲೆ ನಿರ್ಮಿಸುವ ಪರಮಾಣು ಇಂಧನದಂತಹ ಕ್ಷೇತ್ರಗಳನ್ನು ಖಾಸಗಿ ವಲಯದ ಭಾಗವಹಿಸುವಿಕೆಗೆ ತೆರೆಯುವ ಸರ್ಕಾರದ ನಿರ್ಧಾರವನ್ನು ಘೋಷಿಸಿದರು.

ಏಳು ವರ್ಷಗಳ ನಂತರ ಜಪಾನ್‌ ರಾಜಧಾನಿ ಟೋಕಿಯೋಗೆ ಮೋದಿ ಅವರು, ತಾವು ಗುಜರಾತ್‌ ಮುಖ್ಯಮಂತ್ರಿಯಾಗಿದ್ದ ಅವಧಿಯಿಂದಲೂ ಅನೇಕ ಜಪಾನಿನ ವ್ಯಾಪಾರ ನಾಯಕರೊಂದಿಗಿನ ತಮ ವೈಯಕ್ತಿಕ ಸಂಬಂಧಗಳನ್ನು ನೆನಪಿಸಿಕೊಂಡರು. ಜಪಾನಿನ ವ್ಯಾಪಾರ ಸಮುದಾಯವನ್ನು ಉದ್ದೇಶಿಸಿ ಮಾತನಾಡಿದ ಮೋದಿ, ಬನ್ನಿ ಮೇಕ್‌ ಇನ್‌ ಇಂಡಿಯಾ, ಮೇಕ್‌ ಫಾರ್‌ ದಿ ವರ್ಲ್ಡ್ ಎಂಬ ಆತೀಯ ಆಹ್ವಾನ ನೀಡಿದರು.

ಜಾಗತಿಕವಾಗಿ ಉತ್ಪಾದನೆ ಮತ್ತು ನಾವೀನ್ಯತೆ ಹೆಚ್ಚಿಸಲು ಭಾರತದ ಪಾರದರ್ಶಕ ಆಡಳಿತ ಮತ್ತು ಬಲವಾದ ನೀತಿ ವಾತಾವರಣವನ್ನು ಬಳಸಿಕೊಳ್ಳುವಂತೆ ಕಂಪನಿಗಳನ್ನು ಒತ್ತಾಯಿಸಿದರು.ಪ್ರಧಾನಿಯವರ ಎರಡು ದಿನಗಳ ಭೇಟಿಯಲ್ಲಿ 15ನೇ ಭಾರತ-ಜಪಾನ್‌ ವಾರ್ಷಿಕ ಶೃಂಗಸಭೆಯಲ್ಲಿ ಭಾಗವಹಿಸುವುದು ಮತ್ತು ಜಪಾನಿನ ಪ್ರಧಾನಿ ಶಿಗೇರು ಇಶಿಬಾ ಅವರೊಂದಿಗೆ ಉನ್ನತ ಮಟ್ಟದ ಚರ್ಚೆಗಳು ಸೇರಿವೆ. ಜಪಾನ್‌ ಭಾರತದಲ್ಲಿ ತನ್ನ ಹೂಡಿಕೆ ಗುರಿಗಳನ್ನು ದ್ವಿಗುಣಗೊಳಿಸುವುದಾಗಿ ಘೋಷಿಸುವ ಮತ್ತು ವ್ಯಾಪಾರ, ರಕ್ಷಣೆ, ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಸಹಕಾರವನ್ನು ಹೆಚ್ಚಿಸಲು ಹೊಸ ಒಪ್ಪಂದಗಳನ್ನು ಅನಾವರಣಗೊಳಿಸುವ ನಿರೀಕ್ಷೆಯಿದೆ.

RELATED ARTICLES

Latest News