ನ್ಯೂಯಾರ್ಕ್.ಏ.13- ಭಾರತಕ್ಕೆ ಪರಮಾಣು ಇಂಧನ ಪುನರುಜ್ಜಿವನದ ಅಗತ್ಯವಿದೆ ಮತ್ತು ಪರಮಾಣು ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸಲು ದೇಶಕ್ಕೆ ಸಹಾಯ ಮಾಡಲು ಅಮೆರಿಕ ಆಸಕ್ತಿ ಹೊಂದಿದೆ ಎಂದು ಹೊಲೈಕ್ ಸಿಇಒ ಡಾ.ಕ್ರಿಸ್ ಸಿಂಗ್ ಹೇಳಿದ್ದಾರೆ.
ಭಾರತ ಮತ್ತು ಅಮೆರಿಕ ಶುದ್ಧ ಇಂಧನದಲ್ಲಿ ಕಾರ್ಯತಂತ್ರದ ಆಸಕ್ತಿಯನ್ನು ಹಂಚಿಕೊಂಡಿವೆ. ಪರಮಾಣು ಶಕ್ತಿಯು ಏಕೀಕೃತವಾಗಿರಬೇಕು ಮತ್ತು ಭಾರತವು ಸ್ವಾಭಾವಿಕವಾಗಿ ಅಲ್ಲಿ ಮುಂದಾಳತ್ವ ವಹಿಸಬೇಕು. ಅದಕ್ಕಾಗಿ, ಭಾರತವು ರಫ್ತು ಮಾಡಬಹುದಾದ ತಂತ್ರಜ್ಞಾನವನ್ನು ಹೊಂದಿರಬೇಕು ಎಂದು ಸಿಂಗ್ ನ್ಯೂಜಿರ್ಸಿಯ ಕ್ಯಾಮೈನ್ ನಲ್ಲಿರುವ ಕೃಷ್ಣ ಪಿ ಸಿಂಗ್ ಟೆಕ್ನಾಲಜಿ ಕ್ಯಾಂಪನ್ ನಲ್ಲಿ ಪಿಟಿಐಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಹೇಳಿದ್ದಾರೆ.
ಹೋಲ್ವೆಕ್ ಇಂಟರ್ನ್ಯಾಷನಲ್ ಒಂದು ವೈವಿಧ್ಯಮಯ ಇಂಧನ ತಂತ್ರಜ್ಞಾನ ಕಂಪನಿಯಾಗಿದ್ದು, ಇಂಗಾಲ ಮುಕ್ತ ವಿದ್ಯುತ್ ಉತ್ಪಾದನೆಯ ಕ್ಷೇತ್ರದಲ್ಲಿ, ನಿರ್ದಿಷ್ಟವಾಗಿ ವಾಣಿಜ್ಯ ಪರಮಾಣು ಮತ್ತು ಸೌರ ಶಕ್ತಿಯ ಕ್ಷೇತ್ರದಲ್ಲಿ ಪ್ರಮುಖ ತಂತ್ರಜ್ಞಾನ ಅವಿಷ್ಕಾರಕರಾಗಿ ಗುರುತಿಸಲ್ಪಟ್ಟಿದೆ.
ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಯುಎನ್ ಜನರಲ್ ಅಸೆಂಬ್ಲಿಯ ಉನ್ನತ ಮಟ್ಟದ ಅಧಿವೇಶನಕ್ಕಾಗಿ ಪ್ರಧಾನಿ ಭೇಟಿಯ ಸಮಯದಲ್ಲಿ ಸಿಂಗ್ ಪ್ರಧಾನಿ ಮೋದಿಯವರನ್ನು ಭೇಟಿ ಮಾಡಿದ್ದರು.