ಪಾಟ್ನಾ,ಜ.28-ಕಾಂಗ್ರೆಸ್ ನಾಯಕತ್ವದ ಒಂದು ವರ್ಗ ಮುಖ್ಯಮಂತ್ರಿ ನಿತೀಶ್‍ಕುಮಾರ್ ಅವರನ್ನು ಪದೇಪದೇ ಅವಮಾನ ಇಂಡಿಯಾ ಮೈತ್ರಿಕೂಟ ಪತನವಾಯಿತು ಎಂದು ಜೆಡಿಯು ರಾಜಕೀಯ ಸಲಹೆಗಾರ ಹಾಗೂ ಪಕ್ಷದ ವಕ್ತಾರ ಕೆ.ಸಿ.ತ್ಯಾಗಿ ಹೇಳಿದ್ದಾರೆ. ಬಿಹಾರದಲ್ಲಿ ಮಹಾಘಟಬಂಧನ್ ಸರ್ಕಾರ ಬಹುತೇಕ ಪತನವಾಗಿದೆ. ಇಂಡಿಯಾ ಮೈತ್ರಿಕೂಟ ಕೂಡ ಪತನದ ಅಂಚಿನಲ್ಲಿದೆ. ಪಂಜಾಬ್ ಪಶ್ಚಿಮ ಬಂಗಾಳ ಮತ್ತು ಬಿಹಾರದಲ್ಲಿ ಇಂಡಿಯಾ ಕೂಟ ಪಕ್ಷಗಳ ಮೈತ್ರಿ ಬಹುತೇಕ ಮುಗಿದುಹೋಗಿದೆ ಎಂದು ಹೇಳಿದರು.
ಕಾಂಗ್ರೆಸೇತರ ಪಕ್ಷಗಳನ್ನು ಕಾಂಗ್ರೆಸ್‍ನೊಂದಿಗೆ ಕರೆತರುವಲ್ಲಿ ಜೆಡಿಯು ಅಧ್ಯಕ್ಷರಾದ ನಿತೀಶ್‍ಕುಮಾರ್‍ರವರು ಗುರಿ ಮತ್ತು ಸ್ಪಷ್ಟ ಉದ್ದೇಶಗಳನ್ನು ಹೊಂದಿದ್ದರೂ ಕಾಂಗ್ರೆಸ್ ನಾಯಕರು ತಪ್ಪಾಗಿ ಅರ್ಥೈಸಿದರು. ಇಂಡಿಯಾ ಮೈತ್ರಿಕೂಟದಲ್ಲಿ ನಿತೀಶ್‍ರವರು ಸ್ಥಾನಮಾನಕ್ಕಾಗಿ ಎಂದಿಗೂ ಹಾತೊರೆಯಲಿಲ್ಲ. ಆದರೆ ಕಾಂಗ್ರೆಸ್ ನಾಯಕತ್ವದ ಒಂದು ವಿಭಾಗ ಅವರನ್ನು ಪದೇಪದೇ ಅವಮಾನಿಸಿತು. ಈ ಕಾರಣದಿಂದ ಮೈತ್ರಿಕೂಟ ಪತನಕ್ಕೆ ನಾಂದಿಯಾಯಿತು ಎಂದು ಹೇಳಿದರು.
ಕುತೂಹಲ ಕೆರಳಿಸಿದ ಸಿಎಂ ಸಿದ್ದರಾಮಯ್ಯ ಜತೆ ಎಸ್.ಟಿ.ಸೋಮಶೇಖರ್ ಚರ್ಚೆ
ಇಂಡಿಯಾ ಮೈತ್ರಿಕೂಟ ಪ್ರಬಲ ಭಾರತೀಯ ಜನತಾಪಕ್ಷದ ವಿರುದ್ಧ ಹೇಗೆ ಹೋರಾಟ ಮಾಡಬಹುದೆಂಬುದನ್ನು ಅವರು ಊಹಿಸಲೇ ಇಲ್ಲ. ಪಾಟ್ನಾದಲ್ಲಿ ಹಲವಾರು ಪಕ್ಷಗಳನ್ನು ಒಗ್ಗೂಡಿಸುವಲ್ಲಿ ನಿತೀಶ್ ಯಶಸ್ವಿಯಾದರು.
ಆದರೆ ಚುನಾವಣೆ ಹತ್ತಿರದಲ್ಲಿದ್ದರೂ ನಾಯಕತ್ವ ಹಾಗೂ ಕಾರ್ಯಸೂಚಿ ಬಗ್ಗೆ ಇಂಡಿಯಾ ಮೈತ್ರಿಕೂಟ ಯಾವುದೇ ಜಂಟಿ ಸಭೆ ನಡೆಸಲಿಲ್ಲ. ಇದರಿಂದ ಇಡೀ ಪ್ರಕ್ರಿಯೆ ವ್ಯರ್ಥವಾಯಿತು ಎಂದು ತ್ಯಾಗಿ ಹೇಳಿದ್ದಾರೆ.