ನ್ಯೂಯಾರ್ಕ್,ಫೆ.4– ವಿಶ್ವಸಂಸ್ಥೆಯ 2025ರ ನಿಯಮಿತ ಬಜೆಟ್‌ಗೆ ಭಾರತವು 37.64 ಮಿಲಿಯನ್ ಡಾಲರ್‌ಗಳನ್ನು ಪಾವತಿಸಿದೆ.ವಿಶ್ವಸಂಸ್ಥೆಯಲ್ಲಿ 35 ಸದಸ್ಯ ರಾಷ್ಟ್ರಗಳು ಗೌರವ ಪಟ್ಟಿಗೆ ಸೇರಿದ್ದು ಅವರು ತಮ ನಿಯಮಿತ ಬಜೆಟ್ ಮೌಲ್ಯಮಾಪನಗಳನ್ನು ಪೂರ್ಣವಾಗಿ ಮತ್ತು ಸಮಯಕ್ಕೆ ಸರಿಯಾಗಿ ಪಾವತಿಸಿದ್ದಾರೆ.
ಕೊಡುಗೆಗಳ ಸಮಿತಿಯ ಪ್ರಕಾರ, ಜನವರಿ 31 2025 ರಂತೆ, ಮೂವತ್ತೈದು ಸದಸ್ಯ ರಾಷ್ಟ್ರಗಳು ತಮ ನಿಯಮಿತ ಬಜೆಟ್ ಮೌಲ್ಯಮಾಪನಗಳನ್ನು ಹಣಕಾಸು ನಿಯಮಗಳಲ್ಲಿ ನಿರ್ದಿಷ್ಟಪಡಿಸಿದ 30-ದಿನಗಳ ಅವಧಿಯೊಳಗೆ ಪೂರ್ಣವಾಗಿ ಪಾವತಿಸಿವೆ.ಭಾರತವು 2025 ರ ವಿಶ್ವಸಂಸ್ಥೆಯ ನಿಯಮಿತ ಬಜೆಟ್‌ಗೆ 37.64 ಮಿಲಿಯನ್ ಕೊಡುಗೆ ನೀಡಿದೆ.
ತಮ್ಮ ನಿಯಮಿತ ಬಜೆಟ್ ಮೌಲ್ಯಮಾಪನಗಳನ್ನು ಪೂರ್ಣವಾಗಿ ಪಾವತಿಸಿದ ಸದಸ್ಯ ರಾಷ್ಟ್ರಗಳ ಗೌರವ ಪಟ್ಟಿಗೆ ಸೇರ್ಪಡೆಗೊಳ್ಳುವ ದೇಶಗಳನ್ನು ಹೆಸರಿಸುತ್ತಾ, ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರಸ್ ಅವರ ವಕ್ತಾರ ಸ್ಟೀಫನ್ ಡುಜಾರಿಕ್ ಅವರು ದೈನಂದಿನ ಪತ್ರಿಕಾಗೋಷ್ಠಿಯಲ್ಲಿ ಭಾರತದಲ್ಲಿರುವ ನಮ ಸ್ನೇಹಿತರಿಗೆ ನಾವು ಧನ್ಯವಾದಗಳನ್ನು ಅರ್ಪಿಸುತ್ತೇವೆ ಎಂದಿದ್ದಾರೆ.
ಯುಎನ್ ಬಜೆಟ್‌ಗೆ ತನ್ನ ಕೊಡುಗೆಗಳನ್ನು ಸಮಯಕ್ಕೆ ಮತ್ತು ಪೂರ್ಣವಾಗಿ ಪಾವತಿಸುವ ದೇಶಗಳಲ್ಲಿ ಭಾರತವು ಮುಂದಿದೆ.ಕಳೆದ ವಾರ, ಭಾರತಕ್ಕೆ ಭೇಟಿ ನೀಡಲಿರುವ ಅಸೆಂಬ್ಲಿ ಅಧ್ಯಕ್ಷ ಫಿಲೆಮನ್ ಯಾಂಗ್, ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಭಾರತವು ಯುಎನ್‌ನ ಸದಸ್ಯ ರಾಷ್ಟ್ರವಾಗಿ ತನ್ನ ಬಾಧ್ಯತೆಯನ್ನು ಪೂರ್ಣವಾಗಿ ಮತ್ತು ಪಾವತಿಸುವ ಮೂಲಕ ಪೂರೈಸುವುದನ್ನು ಮುಂದುವರೆಸಿದೆ ಎಂದು ಹೇಳಿದ್ದರು