ಮುಂಬೈ, ಅ.30– ಜಾಗತಿಕ ಹಣಕಾಸು ವಾಸ್ತವಿಕತೆಗಳತ್ತ ಪಲ್ಲಟಗೊಳ್ಳುತ್ತಿರುವುದರ ಕುರುಹಾಗಿ ಕಾರ್ಯತಂತ್ರಾತಕ ಕ್ರಮವೊಂದರಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್(ಆರ್‌ಬಿಐ) 2025ರ ಮಾರ್ಚ್‌ನಿಂದ ಸೆಪ್ಟೆಂಬರ್ ನಡುವೆ ಸುಮಾರು 64 ಟನ್ ಚಿನ್ನವನ್ನು ತನ್ನ ದೇಶೀಯ ಮಾರುಕಟ್ಟೆಗೆ ಹರಿಸಿದೆ.
ತನೂಲಕ ಭಾರತದೊಳಗಡೆ ಇರುವ ಚಿನ್ನದ ಪ್ರಮಾಣವನ್ನು 545.8 ಟನ್‌ಗಳಿಗೆ ಹೆಚ್ಚಿಸಿದೆ.
ವಿದೇಶಗಳಲ್ಲಿ ದಾಸ್ತಾನಿರುವ ಸಾರ್ವಭೌಮ ಆಸ್ತಿಗಳ ಭದ್ರತೆ ಕುರಿತು ಆತಂಕಗಳು ಹೆಚ್ಚುತ್ತಿರುವ ನಡುವೆ ಮತ್ತು ಭೂ ರಾಜಕೀಯ ಒತ್ತಡಗಳ ನಿವಾರಣೆಗೆ ದೇಶಗಳು ಶಸ್ತಾಸ ಹಣಕಾಸು ವ್ಯವಸ್ಥೆಯನ್ನು ಹೆಚ್ಚಿಸುತ್ತಿರುವ ನಡುವೆ ಆರ್‌ಬಿಐ ಈ ಕ್ರಮ ಕೈಗೊಂಡಿದೆ.
2025ರ ಸೆಪ್ಟೆಂಬರ್‌ನ ಕೊನೆಯಲ್ಲಿರುವಂತೆ ಭಾರತದ ಚಿನ್ನದ ದಾಸ್ತಾನು 880.8 ಟನ್‌ಗಳು. ಇವುಗಳ ಪೈಕಿ 240.3 ಟನ್‌ಗಳು ಬ್ಯಾಂಕ್ ಆ್ ಇಂಗ್ಲೆಂಡ್ ಮತ್ತು ಬ್ಯಾಂಕ್ ಆ್ ಇಂಟರ್‌ನ್ಯಾಷನಲ್ ಸೆಟಲ್‌ಮೆಂಟ್(ಬಿಐಎಸ್) ಸುಪರ್ದಿಯಲ್ಲಿದ್ದರೆ, ಇತರ 14 ಟನ್‌ಗಳು ಜಾಗತಿಕ ಠೇವಣ ಯೋಜನೆಗಳಲ್ಲಿವೆ. ಹೀಗೆ ದೇಶೀಯವಾಗಿ ಚಿನ್ನದ ದಾಸ್ತಾನು ಕಳೆದ 18 ತಿಂಗಳುಗಳಲ್ಲಿ ಗಣನೀಯವಾಗಿ ಹೆಚ್ಚಿದೆ ಎಂದು ಆರ್‌ಬಿ ಬಿಡುಗಡೆ ಮಾಡಿದ ಅಧಿಕೃತ ದತ್ತಾಂಶ ತಿಳಿಸಿದೆ.
ಈ ಪ್ರಯತ್ನವು 2023ರಲ್ಲಿ ಪ್ರಾರಂಭವಾಗಿದ್ದು 2023ರ ಮಾರ್ಚ್‌ನಿಂದೀಚೆಗೆ ಆರ್‌ಬಿಐ274 ಟನ್ ಚಿನ್ನವನ್ನು ಮರಳಿ ಭಾರತಕ್ಕೆ ತಂದಿದೆ. ಸಾಗರದಾಚೆಯ ಮೀಸಲುಗಳ ಸುರಕ್ಷತೆಯನ್ನು ಮರು ಅಂದಾಜಿಸುವ ಉದಯೋನುಖ ಆರ್ಥಿಕತೆಗಳ ವ್ಯಾಪಕ ಪ್ರವೃತ್ತಿಯ ಭಾಗ ಇದಾಗಿದೆ.
ಜಾಗತಿಕವಾಗಿ ಚಿನ್ನದ ಬೆಲೆ ಅಭೂತಪೂರ್ವವಾಗಿ ಏರಿಕೆ ಕಂಡಿರುವ ಕಾರಣ ಭಾರತದಲ್ಲಿ ದಾಸ್ತಾನಿರುವ ಚಿನ್ನದ ಬೆಲೆಯೂ ಹೆಚ್ಚಳವಾಗಿದೆ. 2025ರಲ್ಲಿ ಚಿನ್ನದ ಬೆಲೆಗಳು ಶೇ.50ಕ್ಕಿಂತ ಹೆಚ್ಚಾಗಿದ್ದು, ಔನ್‌್ಸಗೆ 4.381 ಡಾಲರ್‌ಗಳ ಸಾರ್ವಕಾಲೀಕ ಹೆಚ್ಚಳ ದಾಖಲಿಸಿದೆ. ಈ ಹೆಚ್ಚಳವು ಪ್ರಸಕ್ತ ಹಣಕಾಸು ವರ್ಷದ ಪ್ರಾರಂಭದಿಂದ ಭಾರತದ ಚಿನ್ನದ ಮೀಸಲು ಮೌಲ್ಯವನ್ನು 31 ಶತಕೋಟಿ ಡಾಲರ್‌ಗಳಿಗೊಯ್ದಿದೆ. ಮಾರ್ಚ್ ಅಂತ್ಯಕ್ಕೆ 77 ಶತಕೋಟಿ ಡಾಲರ್ ಇದ್ದ ಈ ಬೆಲೆಯನ್ನು ಅಕ್ಟೋಬರ್ ನಡುವಿನಲ್ಲಿ 108 ಶತಕೋಟಿ ಡಾಲರ್‌ಗಳಿಗೆ ಹೆಚ್ಚಿಸಿದೆ.
ಆರ್‌ಬಿಐ ಪಾವತಿ ಶಿಲ್ಕಿನ ಪ್ರಕಾರ ಈಗ ಭಾರತದ ವಿದೇಶೀ ವಿನಿಮಯದಲ್ಲಿ ಚಿನ್ನ ಶೇ.9ರಷ್ಟು ಪಾಲು ಹೊಂದಿದೆ. ಕಳೆದ ವರ್ಷ ಇದು ಶೇ.4ರಷ್ಟಿತ್ತು. ಸುಮಾರು 579 ಶತ ಕೋಟಿ ಡಾಲರ್‌ಗಳಿಷ್ಟಿದ್ದ ಆರ್‌ಬಿಐ ವಿದಶೀ ಕರೆನ್ಸಿ ಆಸ್ತಿಗಳನ್ನು ಪ್ರಾಥಮಿಕವಾಗಿ ಷೇರುಗಳು, ಇತರ ಕೇಂದ್ರ ಬ್ಯಾಂಕ್‌ಗಳು ಮತ್ತು ಬಿಐಎಸ್‌ನಲ್ಲಿ ಮತ್ತು ಇತರ ಸಾಗರೋತ್ತರ ವಾಣಿಜ್ಯ ಬ್ಯಾಂಕ್‌ಗಳಲ್ಲಿ ಠೇವಣಿ ಇಡಲಾಗಿದೆ.
ಅಧಿಕೃತ ದತ್ತಾಂಶದ ಪ್ರಕಾರ 489.54 ಶತ ಕೋಟಿ ಡಾಲರ್‌ಗಳಷ್ಟು ವಿದೇಶೀ ಆಸ್ತಿಗಳನ್ನು ಷೇರುಗಳಲ್ಲಿ ಹೂಡಿಕೆ ಮಾಡಲಾಗಿದೆ. 46.11 ಶತಕೋಟಿ ಡಾಲರ್‌ಗಳಷ್ಟು ಆಸ್ತಿಯನ್ನು ಇತರ ಕೇಂದ್ರ ಬ್ಯಾಂಕ್‌ಗಳು ಮತ್ತು ಬಿಐಎಸ್‌ನಲ್ಲಿ ಹೂಡಲಾಗಿದೆ. ಇತರ 43.53 ಶತಕೋಟಿ ಡಾಲರ್‌ಗಳನ್ನು ಸಾಗರದಾಚೆಯ ವಾಣಿಜ್ಯ ಬ್ಯಾಂಕ್‌ಗಳಲ್ಲಿ ಹೂಡಿಕೆ ಮಾಡಲಾಗಿದೆ.
ಏತನಧ್ಯೆ ಈ ಬೆಳವಣಿಗೆಗಳು ದೇಶೀಯ ಚಿನ್ನದ ಬೆಲೆಗಳ ಮೇಲೆ ಪರಿಣಾಮ ಬೀರುತ್ತವೆ. ಬಹುವಸ್ತು ವಿನಿಮಯ(ಎಂಸಿಆರ್) ಕೇಂದ್ರದಲ್ಲಿ ಅಕ್ಟೋಬರ್ ಅಂತ್ಯದ ವೇಳೆಗೆ ಚಿನ್ನದ ಬೆಲೆಗಳು 10 ಗ್ರಾಂಗೆ ಸುಮಾರು 1.20 ಲಕ್ಷ ರೂ.ಗಳ ಗಗನ ಚುಂಬಿ ದರ ದಾಖಲಿಸಿದೆ. ಬೆಳ್ಳಿ ಬೆಲೆಗಳು ಸಹ ಅಧಿಕವಾಗಿದ್ದು, ಕೆಜಿಗೆ ರೂ.1.45 ಲಕ್ಷಕ್ಕೇರಿದೆ.
