Sunday, September 8, 2024
Homeಅಂತಾರಾಷ್ಟ್ರೀಯ | Internationalರಷ್ಯಾ ಸೇನೆಯಲ್ಲಿರುವ ಭಾರತೀಯರ ಬಿಡುಗಡೆಗೆ ಪುಟಿನ್‌ ಸಮ್ಮತಿ

ರಷ್ಯಾ ಸೇನೆಯಲ್ಲಿರುವ ಭಾರತೀಯರ ಬಿಡುಗಡೆಗೆ ಪುಟಿನ್‌ ಸಮ್ಮತಿ

ಮಾಸ್ಕೋ,ಜು.9- ಮೋದಿ ಮನವಿ ಮೇರೆಗೆ ರಷ್ಯಾ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಎಲ್ಲ ಭಾರತೀಯರನ್ನು ಬಿಡುಗಡೆ ಮಾಡಲು ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ ಸಮ್ಮತಿಸಿದ್ದಾರೆ. ಭಾರತದಿಂದ ಮಾನವ ಕಳ್ಳ ಸಾಗಣೆ ಮೂಲಕ ಭಾರತೀಯರನ್ನು ಅಕ್ರಮವಾಗಿ ರಷ್ಯಾಗೆ ಕರೆತಂದು ಬಲವಂತವಾಗಿ ಸೇನೆಯಲ್ಲಿ ಕೆಲಸಕ್ಕೆ ಸೇರಿಸಲಾಗುತ್ತಿದೆ ಎಂಬ ಆರೋಪಗಳು ಕೇಳಿ ಬಂದಿದ್ದವು.

ಈ ಅನುಮಾನ ಕುರಿತಂತೆ ರಷ್ಯಾ ಪ್ರವಾಸದಲ್ಲಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಪುಟಿನ್‌ ಅವರೊಂದಿಗೆ ಚರ್ಚಿಸಿದಾಗ ಸೇನೆಯಲ್ಲಿರುವ ಎಲ್ಲಾ ಭಾರತೀಯರನ್ನು ಬಿಡುಗಡೆ ಮಾಡುವ ಭರವಸೆ ನೀಡಿದ್ದಾರೆ ಎಂದು ವರದಿಯಾಗಿದೆ.

ಉಕ್ರೇನ್‌ ವಿರುದ್ಧದ ರಷ್ಯಾದ ಸಂಘರ್ಷದಲ್ಲಿ ಹೋರಾಡುತ್ತಿರುವಾಗ ಕನಿಷ್ಠ ಇಬ್ಬರು ಭಾರತೀಯ ನಾಗರಿಕರು ತಮ ಪ್ರಾಣವನ್ನು ಕಳೆದುಕೊಂಡಿದ್ದಾರೆ ಮತ್ತು ಯುದ್ಧ ವಲಯದಲ್ಲಿ ಸಿಲುಕಿಕೊಂಡಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿರುವ ಸಂದರ್ಭದಲ್ಲಿ ಮೋದಿ ಅವರ ಶ್ರಮದಿಂದಾಗಿ ಇದೀಗ ಎಲ್ಲ ಭಾರತೀಯರು ತಮ ಮನೆಗಳಿಗೆ ತೆರಳಬಹುದಾಗಿದೆ.

ತಡರಾತ್ರಿ ವ್ಲಾಡಿಮಿರ್‌ ಪುಟಿನ್‌ ಆಯೋಜಿಸಿದ್ದ ಖಾಸಗಿ ಔತಣಕೂಟದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಈ ವಿಷಯವನ್ನು ಪ್ರಸ್ತಾಪಿಸಿದ್ದಾರೆ ಎಂದು ಮೂಲಗಳು ಸೂಚಿಸಿವೆ. ಪ್ರತಿಕ್ರಿಯೆಯಾಗಿ, ತಮ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಎಲ್ಲಾ ಭಾರತೀಯರನ್ನು ಬಿಡುಗಡೆ ಮಾಡಲು ಮತ್ತು ಅವರು ಹಿಂದಿರುಗಲು ಸಹಾಯ ಮಾಡಲು ರಷ್ಯಾ ಸಮತಿಸಿತು.

ರಶಿಯಾ ಜೊತೆಗಿನ ಭಾರತದ ವ್ಯಾಪಾರ ಅಸಮತೋಲನವನ್ನು ಸರಿಪಡಿಸುವುದು ಮತ್ತು ಉಕ್ರೇನ್‌ ಯುದ್ಧದಲ್ಲಿ ಹೋರಾಡಲು ದಾರಿ ತಪ್ಪಿದ ಭಾರತೀಯ ನಾಗರಿಕರನ್ನು ಬಿಡುಗಡೆ ಮಾಡುವುದು ಮಾಸ್ಕೋದಲ್ಲಿ ಮೋದಿಯವರ ಪ್ರಮುಖ ಆದ್ಯತೆಗಳಲ್ಲಿ ಒಂದಾಗಿದೆ ಎಂದು ಭಾರತೀಯ ಉನ್ನತ ಅಧಿಕಾರಿಯೊಬ್ಬರು ಕಳೆದ ವಾರ ಸುದ್ದಿ ಸಂಸ್ಥೆಗೆ ತಿಳಿಸಿದ್ದರು.

ರಷ್ಯಾ-ಉಕ್ರೇನ್‌ ಸಂಘರ್ಷಕ್ಕೆ ನೇಮಕಗೊಂಡ ಭಾರತೀಯರ ಬಗ್ಗೆ ಮಾತನಾಡುತ್ತಾ, ಭಾರತವು ಈ ವಿಷಯವನ್ನು ಪ್ರಬಲ ಪದಗಳಲ್ಲಿ ಪ್ರಸ್ತಾಪಿಸುತ್ತದೆ ಎಂದು ಮೂಲಗಳು ತಿಳಿಸಿವೆ ಎಂದು ಸುದ್ದಿ ಸಂಸ್ಥೆ ಪಿಟಿಐ ಈ ಹಿಂದೆ ವರದಿ ಮಾಡಿತ್ತು.

ಉಕ್ರೇನ್‌ ಸಂಘರ್ಷದಲ್ಲಿ ಹೋರಾಡುತ್ತಿರುವ ಭಾರತೀಯರನ್ನು ರಷ್ಯಾದ ಮಿಲಿಟರಿಯಿಂದ ತ್ವರಿತವಾಗಿ ಬಿಡುಗಡೆ ಮಾಡಲು ನಾವು ಬಯಸುತ್ತೇವೆ ಎಂದು ಹೆಸರಿಸದ ಮೂಲವನ್ನು ಉಲ್ಲೇಖಿಸಿ ಪಿಟಿಐ ಹೇಳಿದೆ.

RELATED ARTICLES

Latest News