ನವದೆಹಲಿ, ಸೆ.28- ನಮೀಬಿಯಾ (ದಕ್ಷಿಣ ಆಫ್ರಿಕಾದ) ನಮೀಬಿಯಾ ದೇಶವು ಭೀಕರ ಕ್ಷಾಮ ಎದುರಿಸುತ್ತಿದ್ದು, ಹಸಿವು ವ್ಯಾಪಕವಾಗಿದ್ದು ಜನರ ಆಹಾರಕ್ಕಾಗಿ 200 ಆನೆ ಸೇರಿದಂತೆ 700 ಕಾಡುಪ್ರಾಣಿಗಳನ್ನು ಕೊಲ್ಲಲು ನಮೀಬಿಯಾ ಸರ್ಕಾರ ಆದೇಶಿಸಿದೆ.
ಈ ಹಿನ್ನಲೆಯಲ್ಲಿ ಅಹಮದಾಬಾದ್‌ನ ಜೈನ ಸಂಘಟನೆ 27 ಮೆಟ್ರಿಕ್ ಟನ್ ಆಹಾರ ಧಾನ್ಯವನ್ನು ನಮೀಬಿಯಾಕ್ಕೆ ಕಳುಹಿಸಿಕೊಟ್ಟಿದೆ. ತಪೋವನ್ ಯೂತ್ ಹೆಸರಿನ ಜೈನ ಸಂಘಟನೆಯು ನಮೀಬಿಯಾ ರಾಯಭಾರ ಕಚೇರಿಯೊಂದಿಗೆ ಈ ಕುರಿತು ಮಾತುಕತೆ ನಡೆಸಿ. ಮನುಷ್ಯರ ಆಹಾರಕ್ಕಾಗಿ ಕಾಡು ಪ್ರಾಣಿಗಳನ್ನು ಕೊಲ್ಲುವುದಿಲ್ಲ ಎಂದು ಲಿಖಿತ ಭರವಸೆ ಪಡೆದುಕೊಂಡಿದೆ.
ಇದಲ್ಲದೇ, ಮುಂದೆ ಇಂತಹ ಆದೇಶ ಗಳನ್ನು ನೀಡುವುದಿಲ್ಲ ಎಂದು ನಮೀಬಿಯಾ ಸರ್ಕಾರ ಖಾತರಿ ನೀಡಿದ್ದು, ನಾವು 500 ಮೆಟ್ರಿಕ್ ಟನ್ ಹೆಚ್ಚುವರಿ ಧಾನ್ಯವನ್ನು ಕಳುಹಿಸುತ್ತೇವೆ ಎಂದು ತಿಳಿಸಿದೆ.
ಇಂದು ಸ್ವತಃ ಗುಜರಾತ್ ಮುಖ್ಯ ಮಂತ್ರಿಯೇ ಈ ಬಗ್ಗೆ ಟ್ವೀಟ್ ಮಾಡಿದ್ದು, ತಪೋವನ ಯುವ ಸಂಘಟನೆಯ ಉದಾತ್ತ ಕಾರ್ಯಕ್ಕೆ ಗುಜರಾತ್ ಸರ್ಕಾರವೂ ಸಂಪೂರ್ಣ ಸಹಕಾರ ನೀಡಲಿದೆ ಎಂದು ಹೇಳಿದ್ದಾರೆ.