ನವದೆಹಲಿ,ಅ.3-ಭಾರತದಲ್ಲಿರುವ ಕೆನಡಾದ ರಾಜತಾಂತ್ರಿಕ ಸಿಬ್ಬಂದಿಗಳನ್ನು ತಕ್ಷಣವೇ ಸ್ವದೇಶಕ್ಕೆ ಕರೆಸಿಕೊಳ್ಳಬೇಕೆಂದು ಅಲ್ಲಿನ ಸರ್ಕಾರಕ್ಕೆ ನವದೆಹಲಿ ಸೂಚನೆ ಕೊಟ್ಟಿದೆ. ಕಳೆದ ಎರಡು ವಾರಗಳಿಂದ ಭಾರತ ಮತ್ತು ಕೆನಡಾ ನಡುವಿನ ಸಂಬಂಧ ಹಾವು-ಮುಂಗುಸಿಯಂತೆ ಎಂಬಂತಾಗಿರುವ ಸಂದರ್ಭದಲ್ಲಿ ದೆಹಲಿಯಲ್ಲಿರುವ ರಾಜತಾಂತ್ರಿಕ ಸಿಬ್ಬಂದಿಗಳನ್ನು ಹಿಂಪಡೆಯುವಂತೆ ತಾಕೀತು ಮಾಡಿದೆ.
ಮೂಲಗಳ ಪ್ರಕಾರ ನವದೆಹಲಿಯಲ್ಲಿ ಕೆನಡಾದ ರಾಜತಾಂತ್ರಿಕ ಸಿಬ್ಬಂದಿಯು ಒಟ್ಟು 40 ಮಂದಿ ಇದ್ದಾರೆ ಎನ್ನಲಾಗಿದೆ. ಭಾರತದ ರಾಯಭಾರಿಯನ್ನು ಅಮಾನತು ಮಾಡಿದ ನಂತರ ಇಲ್ಲಿನ ರಾಯಭಾರಿ ಹಾಗೂ ಸಿಬ್ಬಂದಿಯನ್ನು ವಾಪಸ್ ಕರೆಸಿಕೊಳ್ಳುವಂತೆ ಭಾರತ ಸೂಚನೆ ಕೊಟ್ಟಿತ್ತು.
ಕೆಲ ದಿನಗಳ ಹಿಂದೆ 62 ರಾಜತಾಂತ್ರಿಕ ಸಿಬ್ಬಂದಿಗಳಿದ್ದರು. ಅದನ್ನು ಗಣನೀಯ ಪ್ರಮಾಣದಲ್ಲಿ ಕಡಿತ ಮಾಡಬೇಕೆಂದು ಭಾರತ ಒತ್ತಡ ಹಾಕಿತ್ತು. ಮೊದಲ ಹಂತದಲ್ಲಿ 20 ಸಿಬ್ಬಂದಿಗಳನ್ನು ಕರೆಸಿಕೊಳ್ಳಲಾಗಿತ್ತು. ಪ್ರಸ್ತುತ 40 ಸಿಬ್ಬಂದಿಗಳಿರುವುದರಿಂದ ಇಷ್ಟು ದೊಡ್ಡ ಮೊತ್ತದ ರಾಜತಾಂತ್ರಿಕರು ಇರುವ ಅಗತ್ಯವಿಲ್ಲ ಎಂದು ಭಾರತ ಪ್ರತಿಪಾದಿಸಿದೆ.
ಹಾವು-ಮುಂಗುಸಿಗಳ ಒಗ್ಗೂಡುವಿಕೆಯೇ ಇಂಡಿಯಾ ಮೈತ್ರಿಕೂಟ ; ತೇಜಸ್ವಿ ಸೂರ್ಯ
ಖಲಿಸ್ತಾನ ಪರ ಉಗ್ರ ನಿಜ್ಜರ್‍ಸಿಂಗ್ ಹತ್ಯೆ ನಂತರ ಉಭಯ ರಾಷ್ಟ್ರಗಳ ನಡುವೆ ರಾಜತಾಂತ್ರಿಕರ ಬಿಕ್ಕಟ್ಟು ಮುಂದುವರೆದಿದೆ. ಭಾರತ ಏಜೆನ್ಸಿಯವರೇ ಕೆನಡಾದ ಪ್ರಜೆಯಾಗಿದ್ದ ನಿಜ್ಜರ್ ಸಿಂಗ್‍ನನ್ನು ಹತ್ಯೆ ಮಾಡಿವೆ ಎಂದು ಅವರ ಆರೋಪವಾಗಿತ್ತು. ಅಲ್ಲಿನ ಪ್ರಧಾನಿ ಜಸ್ಟಿನ್ ಟ್ರುಡೊ ಅವರು ರಾಜತಾಂತ್ರಿಕ ಮಾರ್ಗದ ಮೂಲಕ ಭಾರತವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಪರಾ ಸ್ಥಾನದಲ್ಲಿ ನಿಲ್ಲಿಸುವ ಹುನ್ನಾರ ನಡೆಸಿದ್ದರು.
ಇದಕ್ಕೆ ತಿರುಗೇಟು ಕೊಟ್ಟಿದ್ದ ಭಾರತ, ದೆಹಲಿಯಲ್ಲಿರುವ ಕೆನಡಾದ ಎಲ್ಲಾ ರಾಜತಾಂತ್ರಿಕ ರಾಯಭಾರಿ ಹಾಗೂ ಸಿಬ್ಬಂದಿಗಳು 5 ದಿನದಲ್ಲೇ ಖಾಲಿ ಮಾಡುವಂತೆ ತಾಕೀತು ಮಾಡಿತ್ತು. ಅಲ್ಲದೇ ಕೆನಡಾ ಪ್ರಜೆಗಳಿಗೆ ಭಾರತದಲ್ಲಿ ವೀಸಾ ನೀಡುವುದನ್ನು ಕೆಲದಿನಗಳ ಮಟ್ಟಿಗೆ ತಡೆಹಿಡಿದಿತ್ತು.