Tuesday, August 5, 2025
Homeರಾಷ್ಟ್ರೀಯ | Nationalಅಮೆರಿಕ ಸುಂಕ ವಿಧಿಸಿದ ಬೆನ್ನಲ್ಲೇ ಡೇರಿ ಉತ್ಪನ್ನಗಳ ಆಮದಿಗೆ ನಿರ್ಬಂಧ ವಿಧಿಸಿದ ಭಾರತ

ಅಮೆರಿಕ ಸುಂಕ ವಿಧಿಸಿದ ಬೆನ್ನಲ್ಲೇ ಡೇರಿ ಉತ್ಪನ್ನಗಳ ಆಮದಿಗೆ ನಿರ್ಬಂಧ ವಿಧಿಸಿದ ಭಾರತ

India to boycott US cow products, GM crops face hurdles

ಬೆಂಗಳೂರು/ನವದೆಹಲಿ,ಆ.2– ಹಠಾತ್‌ ಭೌಗೋಳಿಕ ಪ್ರಚೋದ ನಾತಕವಾಗಿ ಅಮೆರಿಕವು ಭಾರತದ ಎಲ್ಲಾ ರಫ್ತು ಉತ್ಪನ್ನಗಳ ಮೇಲೆ 2025ರ ಆಗಸ್ಟ್‌ 1 ರಿಂದ ಜಾರಿಗೆ ಬರುವಂತೆ ಶೇ.25 ರಷ್ಟು ಭಾರಿ ಸುಂಕ ವಿಧಿಸಿದೆ.

ಇದೇ ಸಂದರ್ಭದಲ್ಲಿ ಭಾರತ ಮತ್ತು ಅಮೆರಿಕ ವ್ಯಾಪಾರ ಮಾತುಕತೆಗಳಲ್ಲಿ ಅಡ್ಡಿಯಾಗುತ್ತಿರುವ ಒಂದು ಪ್ರಮುಖ ವಿಷಯವೆಂದರೆ ಭಾರತವು ಅಮೆರಿಕದ ಡೇರಿ ಉತ್ಪನ್ನಗಳ ಆಮದನ್ನು ನಿರಾಕರಿಸುತ್ತಿರುವುದಾಗಿದೆ. ಅಮೆರಿಕದ ಹಸು-ಕರುಗಳಿಗೆ ನೀಡಲಾಗುತ್ತಿರುವ ಆಹಾರದ ಬಗ್ಗೆ ಆತಂಕ ವ್ಯಕ್ತಪಡಿಸಿರುವ ಭಾರತ ಅಲ್ಲಿನ ಡೇರಿ ಉತ್ಪನ್ನಗಳ ಆಮದಿಗೆ ನಿರಾಕರಿಸುತ್ತಿದೆ.

ಈ ವಿವಾದವು ಒಂದು ತಾಂತ್ರಿಕ ನಿರ್ಬಂಧ ಸಮಸ್ಯೆಯಂತೆ ಕಂಡುಬಂದರೂ ಇದು ಭಾರತದ ಸಾಂಸ್ಕೃತಿಕ ಮೌಲ್ಯಗಳು, ಆಹಾರ ಸಾರ್ವಭೌಮತ್ವ ಮತ್ತು ದೀರ್ಘಕಾಲಿಕ ಬಾಳಿಕೆಯೋಗ್ಯ ಗುರಿಗಳನ್ನು ಕುರಿತದ್ದಾಗಿದೆ. ಈ ನಿರಾಕರಣೆಯು ವ್ಯವಸಾಯ ಪದ್ಧತಿಗಳು ಮತ್ತು ನೈತಿಕ ಚೌಕಟ್ಟಿನಲ್ಲಿ ಭಾರತದ ಮೂಲಭೂತ ಭಿನ್ನಾಭಿಪ್ರಾಯವನ್ನು ಪ್ರತಿಬಿಂಬಿಸುತ್ತದೆ.

ಭಾರತದ ಡೇರಿ ಕ್ಷೇತ್ರವು ಪ್ರಪಂಚದಲ್ಲಿಯೇ ಅತಿ ದೊಡ್ಡದಾಗಿದ್ದು 80 ದಶಲಕ್ಷಕ್ಕೂ ಹೆಚ್ಚು ಸಣ್ಣ ರೈತರನ್ನು ಪ್ರೋತ್ಸಾಹಿಸುತ್ತದೆ. ಅಂದಾಜುಗಳ ಪ್ರಕಾರ, ಅಮೆರಿಕದ ಉತ್ಪನ್ನಗಳಿಗೆ ಡೇರಿ ಕ್ಷೇತ್ರವನ್ನು ತೆರೆಯುವುದು ವಾರ್ಷಿಕವಾಗಿ 1.03 ಲಕ್ಷ ಕೋಟಿ ರೂ.ಗಳ ದೇಶೀಯ ಆದಾಯಕ್ಕೆ ಬಾಧಕವಾಗಿ ಪರಿಣಮಿಸುತ್ತದೆ.

ಭಾರತ-ಅಮೆರಿಕ ವ್ಯಾಪಾರ ಮಾತುಕತೆಗಳಲ್ಲಿ ಡೇರಿ ವಿಷಯ ಪ್ರಮುಖ ಸ್ಥಾನ ಪಡೆದಿದೆ. ಅಮೆರಿಕನ್‌ ಡೇರಿಯ ಅತ್ಯಂತ ವಿವಾದಾತಕ ವರ್ಗೀಕರಣಗಳಲ್ಲೊಂದೆಂದರೆ ಅಲ್ಲಿನ ಹಸುಗಳ ಹಾಲು ಮಾಂಸಾಹಾರಿ ಹಾಲು ಎನ್ನುವುದಾಗಿದೆ. ಅಮೆರಿಕದಲ್ಲಿ ಜಾನುವಾರುಗಳಿಗೆ ಪ್ರಾಣಿ ಮೂಲದ ಉತ್ಪನ್ನಗಳನ್ನು ತಿನ್ನಿಸಲಾಗುತ್ತಿದೆ ಎಂಬ ಕಾರಣಕ್ಕೆ ಭಾರತ ಈ ಪದ ಬಳಸಿ ಆಕ್ಷೇಪ ವ್ಯಕ್ತಪಡಿಸುತ್ತಿದೆ.

ಅಮೆರಿಕದಲ್ಲಿ ಜಾನುವಾರುಗಳಿಗೆ ರಕ್ತ, ಮಾಂಸದ ತುಂಡುಗಳು, ಕುಕ್ಕುಟ ತ್ಯಾಜ್ಯ ಮತ್ತು ಇತರ ಪ್ರಾಣಿಗಳ ಅವಶೇಷಗಳನ್ನು ಕೂಡ ಉಣಿಸುವುದು ಸಾಮಾನ್ಯವಾಗಿದೆ. ಇದು ಅಮೆರಿಕದಲ್ಲಿ ಕಾನೂನುಬದ್ಧವಾಗಿದೆ ಕೂಡ. ಆದರೆ ಭಾರತಕ್ಕೆ ಇದು ಸಮತಾರ್ಹವಾಗಿಲ್ಲ.

ಸಸ್ಯ ಮೂಲದ ಮೇವು ತಿನ್ನಿಸಿದ ಹಸುಗಳಿಂದ ಕರೆದ ಹಾಲನ್ನು ಮತ್ತು ಹಾಲಿನ ಉತ್ಪನ್ನಗಳನ್ನು ಮಾತ್ರ ಆಮದು ಮಾಡಿಕೊಳ್ಳುವುದಾಗಿ ಭಾರತ ಒತ್ತಾಯಿಸುತ್ತಿದೆ. ಅಮೆರಿಕವು ಈ ವರ್ಗೀಕರಣದ ಅಗತ್ಯವನ್ನು ಆಕ್ಷೇಪಿಸಿದ್ದು ಇದು ಏಕಪಕ್ಷೀಯ ಮತ್ತು ನಿರ್ಬಂಧಾತಕ ನಿಲುವಾಗಿದೆ ಹಾಗೂ ಸುಂಕರಹಿತ ವ್ಯಾಪಾರ ವ್ಯಾಪ್ತಿಯಲ್ಲಿ ಅಸಮರ್ಥನೀಯವಾಗಿದೆ ಎಂದು ಹೇಳುತ್ತಿದೆ.

ತಾನು ಈ ವಿಷಯದಲ್ಲಿ ವಿಶ್ವ ವ್ಯಾಪಾರ ಸಂಘಟನೆ (ಡಬ್ಲ್ಯೂಟಿಓ) ವೇದಿಕೆಯಲ್ಲಿ ದೂರು ನೀಡುವುದಾಗಿ ಬೆದರಿಕೆ ಹಾಕುತ್ತಿದೆ.ಭಾರತದ ನಿಲುವು ಕೇವಲ ಧಾರ್ಮಿಕವಲ್ಲದೆ ಸಾಮಾಜಿಕ, ಆರ್ಥಿಕ ಮತ್ತು ಪರಿಸರ ಕಾಳಜಿಯಿಂದ ಕೂಡಿದೆ. ಇಂಥ ಹಸುಗಳಿಂದ ಉತ್ಪಾದಿಸಲಾದ ಹಾಲು ಭಾರತೀಯ ಮಾನದಂಡಗಳಿಗೆ ಸಮತಾರ್ಹವಾಗಿಲ್ಲ.

ಈ ನಿಲುವಿನ ಹಿಂದೆ ಸ್ಪಷ್ಟವಾದ ಧಾರ್ಮಿಕ ಕಾರಣಗಳಿವೆ. ಕ್ಷೀರ ಮತ್ತು ಕ್ಷೀರೋತ್ಪನ್ನಗಳು ಪವಿತ್ರವಾಗಿದ್ದು ಆಧ್ಯಾತಿಕ ಮತ್ತು ಸಾಂಸ್ಕೃತಿಕ ಮಹತ್ವ ಪಡೆದಿವೆ ಎನ್ನುವುದು ಭಾರತದ ನಿಲುವಾಗಿದೆ. ಹಸುಗಳಿಗೆ ಅವುಗಳ ನೈಸರ್ಗಿಕ ವರ್ತನೆಗೆ ವಿರುದ್ಧವಾಗಿ ಆಹಾರ ಉಣಿಸಿದರೆ ಅದರ ಹಾಲು ಕೂಡ ಸಾಂಪ್ರದಾಯಿಕ ಬಳಕೆಗೆ ಅನರ್ಹವಾಗುತ್ತದೆ ಎಂದು ಭಾರತ ವಾದಿಸುತ್ತಿದೆ.

RELATED ARTICLES

Latest News