Friday, November 22, 2024
Homeಅಂತಾರಾಷ್ಟ್ರೀಯ | Internationalಚರ್ಚ್‌ಗೆ ಗ್ರಾಸವಾಗಿದೆ ಭಾರತ-ಬ್ರಿಟನ್‌ ಮುಕ್ತ ವ್ಯಾಪಾರ ಒಪ್ಪಂದ

ಚರ್ಚ್‌ಗೆ ಗ್ರಾಸವಾಗಿದೆ ಭಾರತ-ಬ್ರಿಟನ್‌ ಮುಕ್ತ ವ್ಯಾಪಾರ ಒಪ್ಪಂದ

ಲಂಡನ್‌,ಮೇ24- ಬ್ರಿಟನ್‌ನ ಪ್ರಧಾನಿ ರಿಷಿ ಸುನಕ್‌ ಅವರು ಜು.4ರಂದು ಸಾರ್ವತ್ರಿಕ ಚುನಾವಣೆ ಘೋಷಿಸಿ ಅಚ್ಚರಿ ಮೂಡಿಸಿರು ನಡುವೆಯೇ ಭಾರತ-ಬ್ರಿಟನ್‌ ಮುಕ್ತ ವ್ಯಾಪಾರ ಒಪ್ಪಂದದ ವಿಷಯ ಚರ್ಚೆಗೆ ಗ್ರಾಸವಾಗಿದೆ.

ಉಭಯ ರಾಷ್ಟ್ರಗಳ ಚುನಾವಣಾ ಫಲಿತಾಂಶ ಏನೇ ಇರಲಿ ದ್ವಿಪಕ್ಷೀಯ ಸಂಬಂಧಗಳಲ್ಲಿ ಅತ್ಯಲ್ಪ ಬದಲಾವಣೆ ಮಾತ್ರ ಆಗಬಹುದು ಎಂದು ರಾಜಕೀಯ ಪಂಡಿತರು ವಿಶ್ಲೇಷಿಸಿದ್ದಾರೆ.

ಬಹುತೇಕ ಚುನಾವಣಾ ಪೂರ್ವ ಸಮೀಕ್ಷೆಗಳು ಪ್ರತಿಪಕ್ಷ ಲೇಬರ್‌ ಪಾರ್ಟಿ ಅಧಿಕಾರಕ್ಕೆ ಬರಬಹುದೆಂಬ ಭವಿಷ್ಯ ನಡೆದಿದ್ದು, ತಾನು ಅಧಿಕಾರಕ್ಕೆ ಬಂದಲ್ಲಿ ಸಾಧಕ-ಬಾಧಕ ಪರಿಶೀಲಿಸಿ ಭಾರತ-ಬ್ರಿಟನ್‌ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಚಾಲನೆ ನೀಡುವುದಾಗಿ ಲೇಬರ್‌ ಪಾರ್ಟಿ ತಿಳಿಸಿದೆ.

ಬಹುನಿರೀಕ್ಷಿತ ಲೇಬರ್‌ ಪಕ್ಷದ ಬ್ರಿಟನ್‌ ಸರ್ಕಾರ ಮತ್ತು ಮೂರನೇ ಅವಧಿಯ ಮೋದಿ ಸರ್ಕಾರ ಅಸ್ತಿತ್ವಕ್ಕೆ ಬಂದಲ್ಲಿ ಈ ವ್ಯಾಪಾರ ಸಂಬಂಧ ಮತ್ತಷ್ಟು ಸದೃಢವಾಗಲಿದೆ ಎಂದು ಲಂಡನ್‌ ಮೂಲದ ಇಂಟರ್‌ ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಫಾರ್‌ ಸ್ಟ್ರಾಟೆಜಿಕ್‌ ಸ್ಟಡೀಸ್‌‍(ಐಐಎಸ್‌‍ಎಸ್‌‍) ಸಂಸ್ಥೆಯ ದಕ್ಷಿಣ ಮತ್ತು ಮಧ್ಯ ಏಷ್ಯಾ ರಕ್ಷಣಾ, ಕಾರ್ಯತಂತ್ರ ಮತ್ತು ರಾಜತಾಂತ್ರಿಕ ಸೀನಿಯರ್‌ ಫೆಲೋ ಆಗಿರುವ ರಾಹುಲ್‌ ರಾಯ್‌ಗೆ ಚೌಧುರಿ ತಿಳಿಸಿದ್ದಾರೆ.

ಛಾಧಮ್‌ ಹೌಸ್‌‍ನ ದಕ್ಷಿಣ ಏಷ್ಯಾ , ಏಷ್ಯಾ-ಫೆಸಿಫಿಕ್‌ ಕಾರ್ಯಕ್ರಮದ ಸೀನಿಯರ್‌ ರಿಸರ್ಚ್‌ ಫೆಲೋ ಆಗಿರುವ ಡಾ.ಚೀಡಿಡ್‌್ಜ ಬಾಜಪೇಯಿ ಅವರು ಮುಕ್ತವ್ಯಾಪಾರ ಒಪ್ಪಂದವನ್ನು ದ್ವಿಪಕ್ಷೀಯ ಸಂಬಂಧ ಸುಧಾರಣೆಯಲ್ಲಿ ಕಣ್ಗಾವಲು ಬಿಂದು ಎಂದು ಬಣ್ಣಿಸಿದ್ದಾರೆ.

RELATED ARTICLES

Latest News