ಹೂಸ್ಟನ್, ಸೆ.18-ಭಾರತ ಮತ್ತು ಅಮೆರಿಕ ಬಾಹ್ಯಾಕಾಶ ಪಾಲುದಾರಿಕೆ ಹೊಸ ಹಂತದ ಆರಂಭವನ್ನು ಸೂಚಿಸಿದೆ.ವಾಷಿಂಗ್ಟನ್ ಡಿಸಿಯಲ್ಲಿ ಭಾರತದ ರಾಯಭಾರ ಕಚೇರಿ ಆಯೋಜಿಸಿದ್ದ ವಿಶೇಷ ಕಾರ್ಯಕ್ರಮದಲ್ಲಿ ಬಾಗಿಯಾಗಿದ್ದ ಅಧಿಕಾರಿಗಳು ಮತ್ತು ಗಗನಯಾತ್ರಿಗಳು ಎರಡು ದೇಶಗಳ ಸಹಕಾರವು ಈಗ ಚಂದ್ರ ಮತ್ತು ಮಂಗಳ ಗ್ರಹಕ್ಕೆ ಕಾರ್ಯಾಚರಣೆಗಳಿಗೆ ಹೇಗೆ ಎಂಬುದರ ಬಗ್ಗೆ ಬೆಳಕು ಚಲ್ಲಿದೆ.
ಭವಿಷ್ಯದ ಪಾಲುದಾರಿಕೆಯ ಗಡಿಗಳು ಎಂಬ ಕಾರ್ಯಕ್ರಮ ಇಲ್ಲಿನ ಇಂಡಿಯಾ ಹೌಸ್ನಲ್ಲಿ ನಡೆಸಲಾಯಿತು ಈ ವೇಳೆ ನಾಸಾ-ಇಸ್ರೋ ಜಂಟಿಯಾಗಿ ನಿಸಾರ್ ಉಪಗ್ರಹ ಯಶಸ್ವಿ ಉಡಾವಣೆ ಮತ್ತು ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಅವರನ್ನು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಕಳುಹಿಸಿದ ಆಕ್ಸಿಯಮ್ ಮಿಷನ್ -4 ಸೇರಿದಂತೆ ಇತ್ತೀಚಿನ ಮೈಲಿಗಲ್ಲುಗಳ ಬಗ್ಗೆ ಹರ್ಷ ವ್ಯಕ್ತವಾಯಿತು.
ಅಮೆರಿಕದಲ್ಲಿನ ಭಾರತದ ರಾಯಭಾರಿ ವಿನಯ್ ಕ್ವಾತ್ರಾ ಮಾತನಾಡಿ ಎರಡೂ ದೇಶಗಳ ಪಾಲುದಾರಿಕೆಯನ್ನು ವೈಜ್ಞಾನಿಕ ಪರಿಶೋಧನೆ, ತಂತ್ರಜ್ಞಾನ ಅಭಿವೃದ್ಧಿ ಮತ್ತು ವಾಣಿಜ್ಯ ಸಹಕಾರವನ್ನು ಮುಂದುವರಿಸಲು ಒಂದು ಕ್ರಿಯಾತಕ ವೇದಿಕೆ ಎಂದು ಬಣ್ಣಿಸಿದರು.
ಭಾರತದ ಬಾಹ್ಯಾಕಾಶ ಕಾರ್ಯಕ್ರಮವು ಪರಿಣಾಮಕಾರಿ ಪರಿಶೋಧನೆಯಲ್ಲಿ ಜಾಗತಿಕ ನಾಯಕನಾಗಿ ಹೊರಹೊಮಿದೆ ಮತ್ತು ಅಮೆರಿಕ ಜೊತೆಗಿನ ಜಂಟಿ ಪ್ರಯತ್ನಗಳು ಮುಂದಿನ ದಶಕಗಳಲ್ಲಿ ಬಾಹ್ಯಾಕಾಶಕ್ಕೆ ಮಾನವ ಮಿಷನ್ಗೆ ವೇಗ ಸಿಗಲಿದೆ ಎಂದು ಅವರು ಹೇಳಿದರು. ನಾಸಾದ ಭೂ ವಿಜ್ಞಾನ ವಿಭಾಗದ ನಿರ್ದೇಶಕಿ ಡಾ. ಕರೆನ್ ಸೇಂಟ್ ಜರ್ಮೈನ್ ತಮ ಭಾಷಣದಲ್ಲಿ ಇದು ಪರಿಣತರನ್ನು ಒಟ್ಟುಗೂಡಿಸುವುದು,ವೈಜ್ಞಾನಿಕ ಪ್ರಗತಿಯನ್ನು ಹೇಗೆ ವೇಗಗೊಳಿಸುತ್ತದೆ ಎಂಬುದನ್ನು ಪ್ರದರ್ಶಿಸಿದೆ ಎಂದರು.
ನಾಸಾ ಗಗನಯಾತ್ರಿಗಳಾದ ಸುನೀತಾ ವಿಲಿಯಮ್ಸೌ, ನಿಕ್ ಹೇಗ್ ಮತ್ತು ಬುಚ್ ವಿಲೋರ್ ಶುಕ್ಲಾ ಜೊತೆಗೆ ವರ್ಚುವಲ್ ಪ್ಯಾನೆಲ್ಗೆ ಸೇರಿದರು. ಕಕ್ಷೆಯಲ್ಲಿ ಕ್ಷಣಗಳು ಎಂಬ ಶೀರ್ಷಿಕೆಯ ಪ್ಯಾನಲ್ ಚರ್ಚೆಯ ಸಮಯದಲ್ಲಿ, ಅವರು ತರಬೇತಿ, ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿನ ಜೀವನ ಮತ್ತು ಮಾನವ ಬಾಹ್ಯಾಕಾಶ ಹಾರಾಟದ ಬದಲಾಗುತ್ತಿರುವ ಮುಖದ ಬಗ್ಗೆ ಪ್ರಾಮಾಣಿಕ ಕಥೆಗಳನ್ನು ಹಂಚಿಕೊಂಡರು.
ಶುಕ್ಲಾ ಅವರ ಪ್ರಯಾಣವು ಅಂತರರಾಷ್ಟ್ರೀಯ ಪಾಲುದಾರಿಕೆಗಳ ಬಲ ಮತ್ತು ಜಾಗತಿಕ ಬಾಹ್ಯಾಕಾಶ ಪರಿಶೋಧನೆಯಲ್ಲಿ ಭಾರತದ ಬೆಳೆಯುತ್ತಿರುವ ಪಾತ್ರಕ್ಕೆ ಸಾಕ್ಷಿಯಾಗಿದೆ ಎಂದು ಹೇಳಿದರು.