ಬ್ಲ್ಯಾಕ್‍ವುಡ್ ಆಕರ್ಷಕ ಶತಕ, ಕಿವೀಸ್‍ಗೆ ಇನ್ನಿಂಗ್ಸ್ ಗೆಲುವು

Spread the love

goಹ್ಯಾಮಿಲ್ಟನ್, ಡಿ.6- ಚುಟುಕು ಕ್ರಿಕೆಟ್‍ನಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ಹೀನಾಯ ಸೋಲು ಕಂಡಿದ್ದ ವೆಸ್ಟ್‍ಇಂಡೀಸ್ ಇಂದಿಲ್ಲಿ ಮುಕ್ತಾಯಗೊಂಡ ಮೊದಲ ಟೆಸ್ಟ್‍ನಲ್ಲಿ ಇನ್ನಿಂಗ್ಸ್ ಹಾಗೂ 134 ರನ್‍ಗಳಿಂದ ಹೀನಾಯ ಸೋಲು ಕಂಡಿದೆ. ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಇನ್ನೂ ಒಂದು ಪಂದ್ಯ ಬಾಕಿ ಇರುವಂತೆಯೇ ಕೇನ್ ವಿಲಿಯಮ್ಸ್ ಪಡೆ 1-0ಯಿಂದ ಸರಣಿ ವಶಪಡಿಸಿಕೊಂಡಿದೆ.

#ಬ್ಲ್ಯಾಕ್‍ವುಡ್ ಶತಕ ವ್ಯರ್ಥ: ನ್ಯೂಜಿಲ್ಯಾಂಡ್‍ನ ಬೌಲರ್‍ಗಳ ಜಾದೂಗೆ ತಲೆಬಾಗಿ 89 ರನ್‍ಗಳಿಗೆ 6 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ ಕೆರಿಬಿಯನ್ ತಂಡಕ್ಕೆ ಆಸರೆಯಾಗಿ ನಿಂತವರು ಬ್ಲ್ಯಾಕ್‍ವುಡ್. ನಿನ್ನೆ ದಿನದಾಟದ ಅಂತ್ಯಕ್ಕೆ ಅಜೇಯ 80 ರನ್ ಗಳಿಸಿದ್ದ ಬ್ಲ್ಯಾಕ್‍ವುಡ್ ಇಂದು ಕೂಡ ಅಲ್ಜಾರಿ ಜೋಸೆಫ್‍ರೊಂದಿಗೆ ಆಕ್ರಮಣಕಾರಿ ಆಟ ನಡೆಸಿದರೆ 125 ಎಸೆತಗಳಲ್ಲೇ 11 ಬೌಂಡರಿ ಹಾಗೂ 2 ಬೌಂಡರಿ ನೆರವಿನಿಂದ 104 ಗಳಿಸಿ ವ್ಯಾಗನರ್ ಬೌಲಿಂಗ್‍ನಲ್ಲಿ ಸೌಥಿ ಹಿಡಿದ ಕ್ಯಾಚಿಗೆ ಬಲಿಯಾದರು.

#ಅಲ್ಜರಿ ಜೋಸೆಫ್-ಬ್ಲ್ಯಾಕ್‍ವುಡ್ ಶಾನ್‍ದಾರ್ ಆಟ:
ಪ್ರಮುಖ ಆಟಗಾರರ ಅನುಪಸ್ಥಿತಿಯಲ್ಲಿ ಅಖಾಡಕ್ಕಿಳಿದಿದ್ದ ಕೆರಿಬಿಯನ್ ತಂಡಕ್ಕೆ ನೆರವಾಗಿದ್ದು ಅಲ್ಜರಿ ಜೋಸೆಫ್ ಹಾಗೂ ಬ್ಲ್ಯಾಕ್‍ವುಡ್‍ರ ಶಾನ್‍ದಾರ್ ಆಟ.
ನಿನ್ನೆ ದಿನದ ಬಹುತೇಕ ಕಾಲ ನ್ಯೂಜಿಲ್ಯಾಂಡ್ ಬೌಲರ್‍ಗಳನ್ನು ಕಾಡಿದ ಈ ಜೋಡಿಯು ದಿನದಾಟದ ಅಂತ್ಯಕ್ಕೆ ತಂಡದ ಮೊತ್ತವನ್ನು 196 ರನ್‍ಗಳಿಗೆ ಮುಟ್ಟಿಸಿದ್ದರು. ಇಂದು ಕೂಡ ಅಕ್ರಮಣಕಾರಿ ಆಟವಾಡಿದ ಅಲ್ಜರಿ ಜೋಸೆಫ್ 9 ಬೌಂಡರಿ ಹಾಗೂ 3 ಸಿಕ್ಸರ್ ನೆರವಿನಿಂದ 86 ರನ್ ಗಳಿಸಿ ಶತಕದತ್ತ ಮುನ್ನುಗ್ಗುತ್ತಿದ್ದಾಗಲೇ ಜೆಮ್ಮಿಸನ್ ಬೌಲಿಂಗ್‍ನಲ್ಲಿ ಬದಲಿ ಆಟಗಾರ ಸ್ಯಾನಿಟೇರ್ ಹಿಡಿದ ಅದ್ಭುತ ಕ್ಯಾಚಿಗೆ ಬಲಿಯಾಗುವ ಮೂಲಕ 7 ವಿಕೆಟ್‍ಗೆ 155 ರನ್‍ಗಳ ಜೊತೆಯಾಟ ನೀಡಿದ್ದರು.

#3 ರನ್‍ಗೆ 3 ವಿಕೆಟ್:
ಕಿವೀಸ್‍ನ ವೇಗದ ಬೌಲರ್‍ಗಳಾದ ಜೆಮ್ಮಿಸನ್ ಹಾಗೂ ವ್ಯಾಗ್‍ನರ್‍ರ ಆಕ್ರಮಣಕಾರಿ ಬೌಲಿಂಗ್‍ಗೆ ನಲುಗಿದ ವೆಸ್ಟ್‍ಇಂಡೀಸ್ ಆಟಗಾರರು 3 ರನ್‍ಗಳ ಅಂತರದಲ್ಲಿ 3 ವಿಕೆಟ್‍ಗಳನ್ನು ಕಳೆದುಕೊಂಡು 247 ರನ್‍ಗಳಿಗೆ ಸರ್ವಪತನವಾಯಿತು. ವೆಸ್ಟ್‍ಇಂಡೀಸ್ ಮೊತ್ತ 244 ರನ್‍ಗಳಾಗಿದ್ದಾಗ ಅಲ್ಜಾರಿ ಜೋಸೆಫ್, 247 ಕ್ಕೆ ಬ್ಲ್ಯಾಕ್‍ವುಡ್ ಹಾಗೂ ಗ್ಯಾಬ್ರಿಯಲ್ ವಿಕೆಟ್ ಪಡೆಯುವಲ್ಲಿ ಕಿವೀಸ್ ಬೌಲರ್‍ಗಳು ಯಶಸ್ವಿಯಾದರು. ಗಾಯಗೊಂಡಿದ್ದ ವಿಕೆಟ್‍ಕೀಪರ್ ಡೋರ್ವಿಚ್ ಎರಡು ಇನ್ನಿಂಗ್ಸ್‍ನಲ್ಲೂ ಮೈದಾನಕ್ಕಿಳಿಯದಿರುವುದು ವೆಸ್ಟ್‍ಇಂಡೀಸ್‍ಗೆ ಹೊರೆ ಯಾಯಿತು.

ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ಪರ ವ್ಯಾಗ್‍ನರ್ 6 ವಿಕೆಟ್ ಕಬಳಿಸಿ ಯಶಸ್ವಿ ಬೌಲರ್ ಎನಿಸಿಕೊಂಡರು. 251 ರನ್ ಗಳಿಸಿದ ಕಿವೀಸ್ ನಾಯಕ ಕೇನ್ ವಿಲಿಯಮ್ಸನ್ ಪಂದ್ಯ ಪುರುಷೋತ್ತಮರಾದರು.

ಸಂಕ್ಷಿಪ್ತ ಸ್ಕೋರ್:
ನ್ಯೂಜಿಲ್ಯಾಂಡ್: 519/7
ವೆಸ್ಟ್‍ಇಂಡೀಸ್ ಪ್ರಥಮ ಇನ್ನಿಂಗ್ಸ್:138
ದ್ವಿತೀಯ ಇನ್ನಿಂಗ್ಸ್:
ಬ್ಲ್ಯಾಕ್‍ವುಡ್:(ಸಿ)ಸೌಥಿ (ಬಿ)ವ್ಯಾಗ್‍ನರ್- 104ರನ್- 11 ಬೌಂಡರಿ 2 ಸಿಕ್ಸರ್
ಅಲ್ಜಾರಿ ಜೋಸೆಫ್:(ಸಿ)ಸ್ಯಾನಿಟೇರ್ (ಬಿ) ಜೆಮ್ಮಿಸನ್- 86ರನ್-9 ಬೌಂಡರಿ, 3 ಸಿಕ್ಸರ್
ನ್ಯೂಜಿಲ್ಯಾಂಡ್ ಬೌಲಿಂಗ್:
ವ್ಯಾಗ್‍ನರ್:13.5-0-66-4 ವಿಕೆಟ್
ಜೆಮ್ಮಿಸನ್:12-2- 42-2ವಿಕೆಟ್

Facebook Comments