Sunday, November 24, 2024
Homeಕ್ರೀಡಾ ಸುದ್ದಿ | Sportsಟಿ20 ಕ್ಲೈಮ್ಯಾಕ್ಸ್ : ವಿಶ್ವಕಪ್ ಮುಕುಟ ಯಾರ ಮುಡಿಗೆ…?

ಟಿ20 ಕ್ಲೈಮ್ಯಾಕ್ಸ್ : ವಿಶ್ವಕಪ್ ಮುಕುಟ ಯಾರ ಮುಡಿಗೆ…?

ಜಯಪ್ರಕಾಶ್
ಬಾರ್ಬಡೋಸ್, ಜೂ.29- ವೆಸ್ಟ್ ಇಂಡೀಸ್ ಹಾಗೂ ಅಮೇರಿಕಾದ ಜಂಟಿ ಆತಿಥ್ಯದಲ್ಲಿ ನಡೆಯುತ್ತಿರುವ ಒಂಭತ್ತನೇ ಆವೃತ್ತಿಯ ಟಿ20 ವಿಶ್ವಕಪ್ ಟೂರ್ನಿಯು ಕ್ಲೈಮ್ಯಾಕ್ಸ್ ಹಂತಕ್ಕೆ ಬಂದು ನಿಂತಿದೆ. ಒಂದೆಡೆ ಇದೇ ಮೊದಲ ಬಾರಿ ಐಸಿಸಿ ವಿಶ್ವಕಪ್ ಟೂರ್ನಿಯ ಟ್ರೋಫಿ ಸುತ್ತು ಪ್ರವೇಶಿಸಿ ಚಾಂಪಿಯನ್ ಪಟ್ಟ ಅಲಂಕರಿಸುವ ಮೂಲಕ ಚೋಕರ್ಸ್ ಎಂಬ ಹಣೆಪಟ್ಟಿಯನ್ನು ಶಾಶ್ವತವಾಗಿ ಅಳಿಸಿ ಹಾಕುವತ್ತ ಐಡೆನ್ ಮಾರ್ಕಮ್ ಸಾರಥ್ಯದ ದಕ್ಷಿಣ ಆಫ್ರಿಕಾ ಸಜ್ಜಾಗಿದ್ದರೆ, ಮತ್ತೊಂದೆಡೆ ಹರಿಣಗಳ ಬೇಟೆ ಯಾಡುವ ಮೂಲಕ 2013ರ ನಂತರ ಐಸಿಸಿ ಟ್ರೋಫಿ ಗೆದ್ದು ಅಭಿಮಾನಿಗಳನ್ನು ಆನಂದದ ಕಡಲಿನಲ್ಲಿ ತೇಲಿಸಲು ರೋಹಿತ್ ಶರ್ಮಾ ಕ್ಯಾಪ್ಟನ್ಸಿಯ ಭಾರತ ತಂಡ ಎದುರು ನೋಡುತ್ತಿದೆ.

ಚುಟುಕು ವಿಶ್ವಕಪ್ ಟೂರ್ನಿ ಯಲ್ಲೇ ಅಜೇಯ ತಂಡಗಳು ಫೈನಲ್ ತಲುಪಿರುವುದು ಇದೇ ಮೊದಲ ಬಾರಿ ಎಂಬ ಇತಿಹಾಸ ಹೊಂದಿರುವ ಒಂಬತ್ತನೇ ವಿಶ್ವಕಪ್ ಟೂರ್ನಿಯಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಲು ದಕ್ಷಿಣ ಆಫ್ರಿಕಾ ಹಾಗೂ ಭಾರತ ತಂಡಗಳು ಸಮಾನ ಅರ್ಹತೆ ಹೊಂದಿವೆ. ಎರಡು ತಂಡಗಳಲ್ಲೂ ವಿಶ್ವಶ್ರೇಷ್ಠ ಬೌಲರ್ ಗಳು ಹಾಗೂ ಎದುರಾಳಿ ತಂಡದ ಬೌಲರ್ ಗಳ ಎದೆಯಲ್ಲಿ ನಡುಕ ಹುಟ್ಟಿಸಬಲ್ಲಂತಹ ಬಲಿಷ್ಠ ಬ್ಯಾಟಿಂಗ್ ಲೈನ್ ಅಪ್ ಅನ್ನು ಹೊಂದಿದ್ದು, ಇಡೀ ಟೂರ್ನಿಯಲ್ಲಿ ಮಿಂಚಿನ ಸಂಚಲನ ಮೂಡಿಸಿದ್ದಾರೆ.

ಪ್ರಾಬಲ್ಯ ಮೆರೆದಿರುವ ಟೀಮ್ ಇಂಡಿಯಾ:
ಐಸಿಸಿ ವಿಶ್ವಕಪ್ ಟೂರ್ನಿಗಳಲ್ಲಿ ಟೀಮ್ ಇಂಡಿಯಾ 2007ರ ಚೊಚ್ಚಲ ಆವೃತ್ತಿಯಿಂದಲೂ ಪ್ರಾಬಲ್ಯ ಸಾಸಿದೆ. ಇದುವರೆಗೂ ಆಡಿರುವ 6 ಚುಟುಕು ವಿಶ್ವಕಪ್ ಪಂದ್ಯಗಳಲ್ಲಿ ಭಾರತ ತಂಡ 4 ಬಾರಿ ಗೆಲುವು ಸಾಸಿದೆ. ಈ ಆಧಾರದ ಮೇಲೆ ಹೇಳುವುದಾದರೆ ಮೇಲ್ನೋಟಕ್ಕೆ ರೋಹಿತ್ ಶರ್ಮಾ ಪಡೆಯೇ ಟ್ರೋಫಿ ಗೆಲ್ಲುವ ಬಲಿಷ್ಠ ತಂಡವಾಗಿದೆ ಅಲ್ಲದೆ ಟಿ20 ಇತಿಹಾಸದತ್ತ ಒಮ್ಮೆ ಇಣುಕಿ ನೋಡಿದರೆ ಅಲ್ಲೂ ಕೂಡ ಟೀಮ್ ಇಂಡಿಯಾ ಪ್ರಾಬಲ್ಯ ಮೆರೆದಿದ್ದು, 14ರಲ್ಲಿ ಗೆಲುವು ಹಾಗೂ 11 ಪಂದ್ಯಗಳಲ್ಲಿ ಸೋಲು ಕಂಡಿದೆ.

ಹರಿಣಗಳ ಪ್ರಾಬಲ್ಯ:
ಆದರೆ ಕಳೆದ 5 ಪಂದ್ಯಗಳ ಪ್ರದರ್ಶನದ ಲೆಕ್ಕಾಚಾರ ನೋಡಿದರೆ ದಕ್ಷಿಣ ಆಫ್ರಿಕಾ ಚಾಂಪಿಯನ್ ಪಟ್ಟ ಗೆಲ್ಲಬಹುದು. ಏಕೆಂದರೆ ಇತ್ತೀಚೆಗೆ ಆಡಿರುವ 5 ಪಂದ್ಯಗಳಲ್ಲಿ ದಕ್ಷಿಣ ಆಫ್ರಿಕಾ 3 ಪಂದ್ಯಗಳಲ್ಲಿ ಗೆಲುವು ಸಾಸಿದ್ದರೆ, ಒಂದು ಪಂದ್ಯದಲ್ಲಿ ಮಾತ್ರ ಭಾರತ ಗೆಲುವು ದಕ್ಕಿಸಿಕೊಂಡಿದೆ. ಆದರೆ ಈ ಸರಣಿಯಲ್ಲಿ ವರ್ಕ್ ಮ್ಯಾನೇಜ್ಮೆಂಟ್ ದೃಷ್ಟಿಯಿಂದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಸೇರಿದಂತೆ ಹಲವು ಸ್ಟಾರ್ ಆಟಗಾರರಿಗೆ ವಿಶ್ರಾಂತಿ ನೀಡಲಾಗಿತ್ತು. ಆದರೆ ಇಂದು ಬಾರ್ಬಡೋಸ್ ನ ಕ್ಲೆನ್ಸಿಂಗ್ಟನ್ ಓವಲ್ ಕ್ರೀಡಾಂಗಣದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಫೈನಲ್ ನಲ್ಲಿ ಭಾರತ ತಂಡ ತನ್ನ ಸಂಪೂರ್ಣ ಪ್ಲೇಯಿಂಗ್ XI ನೊಂದಿಗೆ ಅಖಾಡಕ್ಕಿಳಿಯುವುದರಿಂದ ಹರಿಣಗಳಿಗೆ ಸುಲಭವಾಗಿ ಜಯ ದಕ್ಕಿಸಿಕೊಂಡು ಚೊಚ್ಚಲ ಐಸಿಸಿ ಟ್ರೋಫಿ ಗೆಲ್ಲುವುದು ಸುಲಭದ ಮಾತಲ್ಲ.

2022ರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಏನಾಗಿತ್ತು?
30 ಅಕ್ಟೋಬರ್ 2022ರಲ್ಲಿ ನಡೆದಿದ್ದ ಚುಟುಕು ವಿಶ್ವಕಪ್ ಟೂರ್ನಿಯ ಸೂಪರ್ 12 ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವು ಭಾರತ ತಂಡವನ್ನು 5 ವಿಕೆಟ್ ಗಳಿಂದ ಮಣಿಸಿತ್ತು. ಅಂದಿನ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ್ದ ಭಾರತ ತಂಡ, ಸೂರ್ಯಕುಮಾರ್ ಯಾದವ್ ಅವರ ಅರ್ಧಶತಕ (68 ರನ್) ಹೊರತಾಗಿಯೂ133/9 ರನ್ ಗಳಿಸಲಷ್ಟೇ ಶಕ್ತವಾಗಿತ್ತು. ಈ ಗುರಿ ಹಿಂಬಾಲಿಸಿದ ದಕ್ಷಿಣ ಆಫ್ರಿಕಾ ಅರ್ಷದೀಪ್ ಸಿಂಗ್ (25ಕ್ಕೆ2) ಅವರ ಬೌಲಿಂಗ್ ದಾಳಿಯ ನಡುವೆಯೂ ಡೇವಿಡ್ ಮಿಲ್ಲರ್ (59* ರನ್) ಹಾಗೂ ಐಡೆನ್ ಮಾರ್ಕಮ್ (52 ರನ್) ಅವರ ಅರ್ಧಶತಕಗಳ ಬಲದಿಂದ 19.4 ಓವರ್ ಗಳಲ್ಲಿ 137/5 ಗೆಲುವಿನ ದಡ ತಲುಪಿತ್ತು. ಅದೇ ಗೆಲುವಿನ ಲೆಕ್ಕಾಚಾರದಲ್ಲಿರುವ ದಕ್ಷಿಣ ಆಫ್ರಿಕಾಕ್ಕೆ ಈ ಬಾರಿ ಸೋಲಿನ ಕಹಿ ನೀಡಲು ರೋಹಿತ್ ಶರ್ಮಾ ಬಳಗ ಸಜ್ಜಾಗಿದೆ.

ಪ್ಲೇಯಿಂಗ್ XI ನಲ್ಲಿ ಬದಲಾವಣೆ ಇಲ್ಲ:
9ನೇ ಆವೃತ್ತಿಯ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಐಪಿಎಲ್ ಟೂರ್ನಿಯಲ್ಲಿ ಮಿಂಚು ಹರಿಸಿದ್ದ ಕ್ಲಾಸ್ ಆಟಗಾರ ವಿರಾಟ್ ಕೊಹ್ಲಿ ಹಾಗೂ ಯುವ ಆಲ್ ರೌಂಡರ್ ಶಿವಂ ದುಬೇರಿಂದ ನಿರೀಕ್ಷಿತ ಪ್ರದರ್ಶನ ಹೊರಬರದಿದ್ದರೂ, ಈ ಆಟಗಾರರು ಫೈನಲ್ ನಲ್ಲಿ.

ಸೋಟಿಸುತ್ತಾರೆ ಎಂಬ ನಂಬಿಕೆ ಯಿಂದಲೇ ಅವರಿಗೆ ಪ್ಲೇಯಿಂಗ್ XI ನಲ್ಲಿ ಸ್ಥಾನ ನೀಡಲಿದ್ದಾರೆ. ಶಿವಂ ದುಬೇ ದಕ್ಷಿಣ ಆಫ್ರಿಕಾದ ಸ್ಪಿನ್ನರ್ ಗಳಾದ ಕೇಶವ್ ಮಹಾರಾಜ್ ಹಾಗೂ ತರ್ಬೇಜ್ ಶಂಸಿ ವಿರುದ್ಧ ಶರವೇಗದಲ್ಲಿ ರನ್ ಗಳಿಸುವ ಭರವಸೆಯನ್ನು ನಾಯಕ ರೋಹಿತ್ ಶರ್ಮಾ ಹೊಂದಿದ್ದಾರೆ. ಅಲ್ಲದೆ ಭಾರತ ತಂಡದ ವೇಗ ಹಾಗೂ ಸ್ಪಿನ್ ಬೌಲರ್ಸ್ ಗಳು ಫೈನಲ್ ಪಂದ್ಯದಲ್ಲಿ ಉತ್ತಮ ಸಂಯೋಜನೆ ತೋರುವ ಹುಮ್ಮಸ್ಸಿನಲ್ಲಿದ್ದಾರೆ.

ದಕ್ಷಿಣ ಆಫ್ರಿಕಾ ತಂಡದಲ್ಲಿ ಸ್ಟಾರ್ ಆಟಗಾರರು
±್ರಸಕ್ತ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಅಜೇಯ ತಂಡವಾಗಿ ಉಳಿದಿರುವ ದಕ್ಷಿಣ ಆಫ್ರಿಕಾ ತಂಡದಲ್ಲಿ ಈ ಸ್ವರೂಪಕ್ಕೆ ಹೊಂದಾಣಿಕೆ ಆಗುವ ದೊಡ್ಡ ಸ್ಟಾರ್ ಬಳಗವೇ ಇದೆ. ಅನುಭವಿ ಆಟಗಾರ ಕ್ವಿಂಟನ್ ಡಿ ಕಾಕ್ ಜೊತೆಗೆ ರೇಜಾ ಹೆಂಡ್ರಿಕ್್ಸ ಪವರ್ ಪ್ಲೇ ನಲ್ಲೇ ಭಾರತದ ಬೌಲರ್ ಗಳ ವಿರುದ್ಧ ಪ್ರಾಬಲ್ಯ ಮೆರೆದು ತಂಡದ ಮೊತ್ತವನ್ನು ಹೆಚ್ಚಿಸುವ ಕೆಲಸಕ್ಕೆ ಮುಂದಾದರೆ, ರನ್ ವೇಗ ಕುಸಿಯದಂತೆ ನೋಡಿಕೊಳ್ಳಲು ಮಧ್ಯಮ ಕ್ರಮಾಂಕದಲ್ಲಿ ನಾಯಕ ಐಡೆನ್ ಮಾರ್ಕ್ರಮ್, ಹೆನ್ರಿಚ್ ಕ್ಲಾಸೆನ್, ಟ್ರಿಸ್ಟನ್ ಸ್ಟಬ್ಸ್ ರಂತಹ ಸಿಡಿಲಬ್ಬರದ ಆಟಗಾರರಿದ್ದಾರೆ.

ಆದರೆ ಇವರ ರನ್ ದಾಹಕ್ಕೆ ಸ್ಪಿನ್ನರ್ ಗಳಾದ ಕುಲ್ದೀಪ್ ಯಾದವ್, ರವೀಂದ್ರ ಜಡೇಜಾ ಹಾಗೂ ಅಕ್ಷರ್ ಪಟೇಲ್ ಲಗಾಮು ಹಾಕಬೇಕು. ಮತ್ತೊಂದೆಡೆ ಭಾರತದ ಬ್ಯಾಟರ್ ಗಳ ರನ್ ದಾಹಕ್ಕೆ ಬ್ರೇಕ್ ಹಾಕಲು ವೇಗಿಗಳಾದ ಎನ್ರಿಕ್ ನೊರ್ಕಿಯಾ, ಕಗಿಸೊ ರಬಾಡ, ಮಾರ್ಕೊ ಯಾನ್ಸನ್, ಸ್ಪಿನ್ನರ್ ಗಳಾದ ಕೇಶವ್ ಮಹಾರಾಜ್ ಹಾಗೂ ತರ್ಬೇಜ್ ಶಂಸಿ ಸಜ್ಜಾಗಿದ್ದು, ಟ್ರೋಫಿ ಗೆಲ್ಲುವ ಮೂಲಕ ಚೋಕರ್ಸ್ ಎಂಬ ಅಪಖ್ಯಾತಿಯಿಂದ ಪಾರಾಗುತ್ತಾರೋ? ಅಥವಾ ದಶಕದ ನಂತರ ಭಾರತ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿ ಟ್ರೋಫಿ ಕಾಯುವಿಕೆ ಅಂತ್ಯಗೊಳಿಸುತ್ತಾರೋ ಎಂಬುದನ್ನು ಕಾದು ನೋಡಬೇಕು.

ರಾಹುಲ್‌ ದ್ರಾವಿಡ್‌ಗೆ ಸಿಗುವುದೇ ಗೆಲುವಿನ ವಿದಾಯ?

ಭಾರತ ಕ್ರಿಕೆಟ್‌ ತಂಡ ಕಂಡ ಶ್ರೇಷ್ಠ ಆಟಗಾರ ಹಾಗೂ ನಾಯಕರ ಸಾಲಿನಲ್ಲಿ ನಿಂತಿರುವ ಕನ್ನಡಿಗ, ಭಾರತದ ಮಹಾಗೋಡೆ ರಾಹುಲ್‌ ದ್ರಾವಿಡ್‌, 2007ರ ಏಕದಿನ ವಿಶ್ವಕಪ್‌ ಟೂರ್ನಿಯ ಗುಂಪು ಹಂತದಲ್ಲೇ ಬಾಂಗ್ಲಾದೇಶ ವಿರುದ್ಧ ಸೋಲು ಕಂಡು ನಿರಾಸೆ ಅನುಭವಿಸಿದ್ದರು. ನಂತರ ತಮ್ಮ  ಕ್ಯಾಪ್ಟನ್ಸಿ ತೊರೆಯುವ ಮೂಲಕ ಭಾರತ ತಂಡಕ್ಕೆ ಐಸಿಸಿ ಟ್ರೋಫಿ ಗೆದ್ದು ಕೊಡುವ ಕನಸನ್ನು ಕೈಚೆಲ್ಲಿದ್ದರು.

ಆದರೆ 2018ರಲ್ಲಿ ನಡೆದ ಅಂಡರ್‌ 19 ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ  ತಮ್ಮ  ತರಬೇತಿಯಲ್ಲಿ ತಂಡಕ್ಕೆ ಚಾಂಪಿಯನ್‌ ಪಟ್ಟ ದಕ್ಕಿಸಿಕೊಟ್ಟಿ ದ್ದರು. 3  ಫೆಬ್ರವರಿ 2018ರಂದು ಆಸ್ಟ್ರೇಲಿಯಾ ವಿರುದ್ಧ ನಡೆದಿದ್ದ ಭಾರತದ ಅಂಡರ್‌ 19 ನಾಯಕ ಮಂಜೋತ್‌ ಕರ್ಲಾ (101* ರನ್‌) ಶತಕದ ನೆರವಿನಿಂದ 8 ವಿಕೆಟ್‌ ಗೆಲುವು ಸಾಸಿತ್ತು. ನಂತರ 2021ರಲ್ಲಿ ರವಿಶಾಸ್ತ್ರಿ ನಂತರ ಭಾರತ ಹಿರಿಯರ ತಂಡದ ಹೆಡ್‌ ಕೋಚ್‌ ಹುದ್ದೆ ಅಲಂಕರಿಸಿದ ರಾಹುಲ್‌ ದ್ರಾವಿಡ್‌‍,ಟಿ20 ಮಾದರಿಯಲ್ಲಿ ರೋಹಿತ್‌ ಶರ್ಮಾ ಪಡೆ ನಂಬರ್‌ 1 ಸ್ಥಾನಕ್ಕೇರಲು ಸಹಕರಿಸಿದ್ದರು.

ನ್ಯೂಜಿಲೆಂಡ್‌ ವಿರುದ್ಧ ದ್ರಾವಿಡ್‌ ಗರಡಿಯಲ್ಲಿ 3-0( ಚುಟುಕು) ಹಾಗೂ 1-0( ಟೆಸ್ಟ್‌‍) ಸರಣಿಗಳನ್ನು ವಶಪಡಿಸಿಕೊಂಡ ಭಾರತ ತಂಡ,  ವೆಸ್‌್ಟ ಇಂಡೀಸ್‌ ವಿರುದ್ಧ   ಚುಟುಕು ಹಾಗೂ  ಏಕದಿನ  ಸರಣಿ, ಇಂಗ್ಲೆಂಡ್‌ ವಿರುದ್ಧ ಟೆಸ್‌್ಟ ಸರಣಿಯನ್ನು ಗೆದ್ದು ಸಂಭ್ರಮಿಸಿದೆ.

ಆದರೆ  ವಿಶ್ವ ಟೆಸ್‌್ಟ ಚಾಂಪಿಯನ್‌ ಶಿಪ್‌ ಹಾಗೂ ಏಕದಿನ ವಿಶ್ವಕಪ್‌ ಟೂರ್ನಿಯ ಫೈನಲ್‌ ಪಂದ್ಯಗಳಲ್ಲಿ ಭಾರತ ತಂಡ ಸೋಲು ಕಂಡಿದೆ. 2022ರ ಚುಟುಕು ವಿಶ್ವಕಪ್‌ ಟೂರ್ನಿಯಲ್ಲಿ ದ್ರಾವಿಡ್‌ ಗರಡಿಯಲ್ಲಿ  ಇಂಗ್ಲೆಂಡ್‌ ವಿರುದ್ಧ 10 ವಿಕೆಟ್‌ಗಳ ಸೋಲು ಕಂಡಿದ್ದ ರೋಹಿತ್‌ ಶರ್ಮಾ, ವೆಸ್‌್ಟ ಇಂಡೀಸ್‌ ಹಾಗೂ ಅಮೇರಿಕಾದ ಜಂಟಿ ಆತಿಥ್ಯದಲ್ಲಿ ನಡೆಯುತ್ತಿರುವ ಟಿ20-ಐ ವಿಶ್ವಕಪ್‌ ಟೂರ್ನಿಯ ಸೆಮಿಫೈನಲ್‌ ಪಂದ್ಯದಲ್ಲಿ ಇಂಗ್ಲೆಂಡ್‌ ವಿರುದ್ಧ 68 ರನ್‌ ಗಳ ಗೆಲುವು ಸಾಸಿ ಫೈನಲ್‌ ಹಂತ ತಲುಪಿದೆ. ಈ ಪಂದ್ಯದಲ್ಲಿ ಗೆಲುವು ಸಾಸುವ ಮೂಲಕ ರಾಹುಲ್‌ ದ್ರಾವಿಡ್‌ ನಾಯಕ ಹಾಗೂ ಆಟಗಾರನಾಗಿ ನಿರ್ಮಿಸಲು ಸಾಧ್ಯವಾಗದ ಗುರಿಯನ್ನು ಹೆಡ್‌ ಕೋಚ್‌ ಆಗಿ ಸಾಸುವ ಹಂಬಲ ಹೊಂದಿದ್ದಾರೆ.

2024ರ ಟಿ20 ವಿಶ್ವಕಪ್‌ ಟೂರ್ನಿಯೊಂದಿಗೆ ಭಾರತ ತಂಡದೊಂದಿಗಿನ ರಾಹುಲ್‌ ದ್ರಾವಿಡ್‌ ಅವರ ಹೆಡ್‌ ಕೋಚ್‌ ಹುದ್ದೆಯ ಅವ  ಮುಗಿಯುವುದರಿಂದ ಅವರಿಗೆ ಗೆಲುವಿನ ವಿದಾಯ ಸಿಗಲಿದೆಯೇ ಎಂದು ಕಾದು ನೋಡಬೇಕು.

RELATED ARTICLES

Latest News