Monday, March 10, 2025
Homeಕ್ರೀಡಾ ಸುದ್ದಿ | SportsBIG NEWS : ಚಾಂಪಿಯನ್ಸ್ ಟ್ರೋಫಿ ಗೆದ್ದು ಇತಿಹಾಸ ಬರೆದ ಟೀಂ ಇಂಡಿಯಾ

BIG NEWS : ಚಾಂಪಿಯನ್ಸ್ ಟ್ರೋಫಿ ಗೆದ್ದು ಇತಿಹಾಸ ಬರೆದ ಟೀಂ ಇಂಡಿಯಾ

India win Champions Trophy 2025: Team India by 4 wickets

ಸ್ಕೋರ್ :
ನ್ಯೂಜಿಲೆಂಡ್ 251/7 (50)
ಭಾರತ 254/6 (49)

Champions Trophy 2025: ದುಬೈ : ಇಲ್ಲಿನ ಅಂತರರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆದ ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ 2025 ರ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದಲ್ಲಿ ರೋಹಿತ್ ಶರ್ಮಾ ನಾಯಕತ್ವದ ಟೀಂ ಇಂಡಿಯಾ ಅಮೋಘ ಗೆಲುವು ಸಾಧಿಸಿದೆ. ತೀರ ರೋಚಕತೆಯಿಂದ ಕೂಡಿದ್ದ ಈ ಪಂದ್ಯದಲ್ಲಿ ಬಲಿಷ್ಠ ಕಿವೀಸ್ ತಂಡವನ್ನು 5 ವಿಕೆಟ್​ಗಳಿಂದ ಮಣಿಸಿದ ರೋಹಿತ್ ಪಡೆ ಚಾಂಪಿಯನ್ಸ್ ಟ್ರೋಫಿಯನ್ನು ಎತ್ತಿಹಿಡಿದಿದೆ.

ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ತಂಡ 7 ವಿಕೆಟ್‌ಗಳನ್ನು ಕಳೆದುಕೊಂಡು 251 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಟೀಂ ಇಂಡಿಯಾ ಸುಲಭವಾಗಿ ಗೆಲುವಿನ ದಡ ಮುಟ್ಟಿತು. ಭಾರತ 2013ರ ಬಳಿಕ ಎರಡನೇ ಬಾರಿ ಭಾರತ ಚಾಂಪಿಯನ್ಸ್ ಟ್ರೋಫಿಯನ್ನು ಮುಡಿಗೇರಿಸಿಕೊಂಡಿದೆ. ನ್ಯೂಜಿಲೆಂಡ್ ವಿರುದ್ಧದ ಫೈನಲ್ ಪಂದ್ಯದಲ್ಲಿ ಭಾರತ 4 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಭಾರತ ಒಟ್ಟಾರೆ ಮೂರನೇ ಬಾರಿಗೆ ಚಾಂಪಿಯನ್ಸ್ ಟ್ರೋಫಿ ಗೆದ್ದ ಸಾಧನೆ ಮಾಡಿದೆ.

ನ್ಯೂಜಿಲೆಂಡ್ ನೀಡಿದ 252 ರನ್‌ಗಳ ಗುರಿಗೆ ಉತ್ತರವಾಗಿ, ಟೀಂ ಇಂಡಿಯಾ ಉತ್ತಮ ಆರಂಭವನ್ನು ಪಡೆಯಿತು. ತಂಡದ ಪರ ನಾಯಕ ರೋಹಿತ್ ಶರ್ಮಾ ಸ್ಫೋಟಕ ಆರಂಭ ನೀಡಿ ಬೇಗನೆ ಅರ್ಧಶತಕ ಗಳಿಸಿದರು. ಮತ್ತೊಂದೆಡೆ, ಅವರಿಗೆ ಶುಭ್‌ಮನ್ ಗಿಲ್ ಅವರಿಂದ ಉತ್ತಮ ಬೆಂಬಲ ದೊರೆಯುತ್ತಿತ್ತು. ಇವರಿಬ್ಬರ ನಡುವೆ 18 ಓವರ್‌ಗಳಲ್ಲಿ 100 ರನ್‌ಗಳ ಪಾಲುದಾರಿಕೆ ಇತ್ತು. ಹೀಗಾಗಿ ಟೀಂ ಇಂಡಿಯಾ ಸುಲಭವಾಗಿ ಗೆಲುವಿನತ್ತ ಸಾಗುತ್ತಿರುವಂತೆ ತೋರುತ್ತಿತ್ತು. ಇತ್ತ ನ್ಯೂಜಿಲೆಂಡ್ ಕೂಡ ಮೊದಲ ವಿಕೆಟ್‌ಗಾಗಿ ಕಾಯುತ್ತಿತ್ತು. ಇದಕ್ಕೆ ಪೂರಕವಾಗಿ ಕಿವೀಸ್ ತಂಡದ ಸೂಪರ್​ಮ್ಯಾನ್ ಫಿಲಿಪ್ಸ್ ಮತ್ತೊಂದು ಅದ್ಭುತ ಫ್ಲೈಯಿಂಗ್ ಕ್ಯಾಚ್ ಹಿಡಿಯುವ ಮೂಲಕ ಭಾರತಕ್ಕೆ ಮೊದಲ ಶಾಕ್ ನೀಡಿದರು.

ರೋಹಿತ್ ಗೇರ್ ಬದಲಾಯಿಸದೆ 83 ಎಸೆತಗಳಲ್ಲಿ 76 ರನ್ ಗಳಿಸಿದರು. ಏಕದಿನ ಕ್ರಿಕೆಟ್ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಭಾರತೀಯ ನಾಯಕರ ಪಟ್ಟಿಯಲ್ಲಿ 37 ವರ್ಷದ ಧೋನಿ ಈಗ ಸಚಿನ್ ತೆಂಡೂಲ್ಕರ್ ಅವರನ್ನು ಹಿಂದಿಕ್ಕಿದ್ದಾರೆ.

ಭಾರತದ ಪರ ರೋಹಿತ್ ಶರ್ಮಾ : 76, ಶುಭಮನ್ ಗಿಲ್ : 31, ವಿರಾಟ್ ಕೊಹ್ಲಿ : 01, ಶ್ರೇಯಸ್ ಅಯ್ಯರ್ : 48, ಅಕ್ಸರ್ ಪೇಟ್ : 29, ಕೆಎಲ್ ರಾಹುಲ್ : 34, ಹಾರ್ದಿಕ್ ಪಾಂಡಿ : 18 ಮತ್ತು ರವೀಂದ್ರ ಜಡೇಜಾ : 9 ಗಳಿಸಿದರು.

ವಿಶ್ವದಾಖಲೆ ಬರೆದ ರೋಹಿತ್- ಕೊಹ್ಲಿ :
ಟೀಂ ಇಂಡಿಯಾ ಪರ ಕಣಕ್ಕಿಳಿದ ಮಾಜಿ ನಾಯಕ ಹಾಗೂ ಹಾಲಿ ನಾಯಕರಾದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಇತಿಹಾಸ ನಿರ್ಮಿಸಿದರು. ಈ ಇಬ್ಬರೂ ಆಟಗಾರರು ಈಗ ವಿಶ್ವದಲ್ಲೇ ಅತಿ ಹೆಚ್ಚು ಐಸಿಸಿ ಫೈನಲ್‌ಗಳನ್ನು ಆಡಿದ ಆಟಗಾರರೆಂಬ ದಾಖಲೆ ಬರೆದಿದ್ದಾರೆ. ಭಾರತವನ್ನು ಹೊರತುಪಡಿಸಿ ವಿಶ್ವದಲ್ಲಿ ಅತಿ ಹೆಚ್ಚು ಐಸಿಸಿ ಫೈನಲ್‌ಗಳನ್ನು ಆಡಿದ ಆಟಗಾರರ ಪಟ್ಟಿಯಲ್ಲೂ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಜಂಟಿಯಾಗಿ ಮೊದಲ ಸ್ಥಾನ ಪಡೆದಿದ್ದಾರೆ. ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಇದುವರೆಗೆ ಭಾರತ ಪರ 9 ಐಸಿಸಿ ಫೈನಲ್ ಪಂದ್ಯಗಳನ್ನು ಆಡಿದ್ದಾರೆ.

ಇನ್ನು ಅತಿ ಹೆಚ್ಚು ಐಸಿಸಿ ಫೈನಲ್‌ಗಳನ್ನು ಆಡಿದ ಆಟಗಾರರ ಪಟ್ಟಿಯಲ್ಲಿ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಮೊದಲೆರಡು ಸ್ಥಾನಗಳಲ್ಲಿ ಇದ್ದರೆ, ಇದೀಗ ಯುವರಾಜ್ ಸಿಂಗ್ ಮೂರನೇ ಸ್ಥಾನದಲ್ಲಿದ್ದಾರೆ. ಇದಲ್ಲದೆ, ರವೀಂದ್ರ ಜಡೇಜಾ 8 ಫೈನಲ್‌ಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದ್ದಾರೆ. ಐದನೇ ಸ್ಥಾನದಲ್ಲಿ ಕುಮಾರ್ ಸಂಗಕ್ಕಾರ ಮತ್ತು ಆರನೇ ಸ್ಥಾನದಲ್ಲಿ ಮಹೇಲ್ ಜಯವರ್ಧನೆ ತಲಾ 7 ಫೈನಲ್‌ಗಳೊಂದಿಗೆ ಪಟ್ಟಿಯಲ್ಲಿದ್ದಾರೆ.

RELATED ARTICLES

Latest News