Saturday, February 22, 2025
Homeಅಂತಾರಾಷ್ಟ್ರೀಯ | Internationalಅಮೇರಿಕಾದ ಎಫ್‌ಬಿಐ ನಿರ್ದೇಶಕರಾಗಿ ಭಾರತೀಯ ಮೂಲದ ಕಾಶ್ ಪಟೇಲ್ ನೇಮಕ

ಅಮೇರಿಕಾದ ಎಫ್‌ಬಿಐ ನಿರ್ದೇಶಕರಾಗಿ ಭಾರತೀಯ ಮೂಲದ ಕಾಶ್ ಪಟೇಲ್ ನೇಮಕ

Indian-American Kash Patel Nominated As FBI Director By Donald Trump

ವಾಷಿಂಗ್ಟನ್,ಫೆ.21-ಭಾರತ ಮೂಲದ ಕಾಶ್ ಪಟೇಲ್ ಅವರನ್ನು ಅಮೆರಿಕದ ಉನ್ನತ ತನಿಖಾ ಸಂಸ್ಥೆ ಎಫ್‌ಬಿಐ ನಿರ್ದೇಶಕರನ್ನಾಗಿ ನೇಮಗೊಂಡಿದ್ದಾರೆ. ಅಮರಿಕ ಅಧ್ಯಕ್ಕೆ ಡೊನಾಲ್ಡ್ ಟ್ರಂಪ್ ಅವರ ಆಪ್ತರಾಗಿರುವ ಕಾಶ್ ಪಟೇಲ್ ಎಫ್‌ಬಿಐ ಸಾರಥ್ಯ ನೀಡಿರುವುದು ಪ್ರಮುಖ ಬದಲಾವಣೆ ಎಂದು ಪರಿಗಣಿಸಲಾಗುತ್ತಿದೆ.

ಅಮೆರಿಕ ಸೆನೆಟ್ 51-49 ಮತಗಳಿಂದ ನೇಮಕವನ್ನು ಅನುಮೋದಿಸಿದ್ದು ಇದಕ್ಕೆ ಪಟೇಲ್ ಸಾಮಾಜಿಕ ಮಧ್ಯಮದ ಮೂಲಕ ಮೂಲಕ ತಮ್ಮ ಸಂತೋಷವನ್ನು ವ್ಯಕ್ತಪಡಿಸಿದ್ದಾರೆ.ಎಫ್‌ಬಿಐನ 9ನೇ ನಿರ್ದೇಶಕರನ್ನಾಗಿ ನನ್ನನ್ನು ಆಯ್ಕೆ ಮಾಡಿರುವುದಕ್ಕೆ ತುಂಬಾ ಸಂತೋಷವಾಗಿದೆ. ನನ್ನ ಮೇಲಿಟ್ಟಿರುವ ನಿಮ್ಮ ನಂಬಿಕೆಗೆ ಧನ್ಯವಾದಗಳು. ಅಮೆರಿಕದ ಜನರಿಗೆ ಪಾರದರ್ಶಕ, ಜವಾಬ್ದಾರಿಯುತ ಮತ್ತು ನ್ಯಾಯಕ್ಕೆ ಬದ್ಧವಾಗಿರುವ ಎಫ್‌ಬಿಐ ಅಗತ್ಯವಿದೆ ಎಂದು ಅವರು ಇನ್ನಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ಪಟೇಲ್ ಈಗಾಗಲೇ ಎಫ್‌ಬಿಐನಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡುವುದಾಗಿ ಹೇಳಿದ್ದಾರೆ. ಇವುಗಳಲ್ಲಿ ವಾಷಿಂಗ್ಟನ್ ಪ್ರಧಾನ ಕಚೇರಿಯಲ್ಲಿ ಸಿಬ್ಬಂದಿ ಕಡಿತ ರಾಷ್ಟ್ರೀಯ ಭದ್ರತೆ ಜೊತೆಗೆ ಅಪರಾಧ ತಡೆದು ಎಫ್‌ ಬಿಐನ ಸಾಂಪ್ರದಾಯಿಕ ಕಾರ್ಯಗಳ ಮೇಲೆ ಒತ್ತು ನೀಡಲಿದ್ದಾರೆಕಶ್ಯಪ್ ಪಟೇಲ್ ಭಾರತ ಮೂಲದ ಅಮೇರಿಕನ್ ಪ್ರಜೆ, ಅವರು ನ್ಯೂಯಾರ್ಕ್‌ ಹ್ಯಾಗರ್ಡನ್ ನಗರದ ನಿವಾಸಿಯಾಗಿದ್ದು ಅವರ ಪೋಷಕರು ಗುಜರಾತ್‌ ನವರು. ಅವರ ಕುಟುಂಬ 1970 ರ ದಶಕದ ಆರಂಭದಲ್ಲಿ ವಿದೇಶಕ್ಕೆ ಸ್ಥಳಾಂತರಗೊಂಡಿತು.

ಅವರ ತಂದೆಗೆ ವಿಮಾನಯಾನ ಸಂಸ್ಥೆಯಲ್ಲಿ ಕೆಲಸ ಸಿಕ್ಕ ನಂತರ ಅವರ ಕುಟುಂಬ ಅಮೆರಿಕಕ್ಕೆ ಸ್ಥಳಾಂತರಗೊಂಡಿತು. ಪಟೇಲ್ ಇನ್ನೂ ಅವಿವಾಹಿತ ಎಂದು ಹೇಳಲಾಗುತ್ತದೆ. ಡೊನಾಲ್ಡ್ ಟ್ರಂಪ್ ಅವರ ಆಪ್ತ ಮಿತ್ರ ಎಂದು ಹೇಳಲಾಗುತ್ತದೆ.

ಡೊನಾಲ್ಡ್ ಟ್ರಂಪ್ ಅವರ ಮೊದಲ ಅವಧಿಯಲ್ಲಿ ಪ್ರಮುಖ ಜವಾಬ್ದಾರಿಗಳನ್ನು ನೀಡಲಾಯಿತು. ನಂತರ ಅವರು ಐಸಿಸ್, ಅಲ್-ಬಾಗ್ವಾದಿ ಮತ್ತು ಖಾಸಿಮ್ ಅಲ್-ರಿಮಿಯಂತಹ ಅಲ್-ಖೈದಾ ನಾಯಕರನ್ನು ನಿರ್ಮೂಲನೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದರು.

ಅಮೆರಿಕದ ಒತ್ತೆಯಾಳುಗಳನ್ನು ದೇಶಕ್ಕೆ ಮರಳಿ ಕರೆತರುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದರು. ಪಟೇಲ್ ರಾಷ್ಟ್ರೀಯ ಭದ್ರತಾ ಸಲಹೆಗಾರ ಮತ್ತು ಹಿರಿಯ ಸಲಹೆಗಾರರಾಗಿಯೂ ಕೆಲಸ ಮಾಡಿದ್ದಾರೆ. ಅವರು ಟ್ರಂಪ್ ಅವರ ದೊಡ್ಡ ಅಭಿಮಾನಿ ಎಂದು ಆಪ್ರ ಬಳಗ ಹೇಳಿದೆ.

RELATED ARTICLES

Latest News