Monday, December 23, 2024
Homeಅಂತಾರಾಷ್ಟ್ರೀಯ | Internationalಶ್ವೇತಭವನದ AI ಸಲಹೆಗಾರರಾಗಿ ಭಾರತೀಯ-ಅಮೆರಿಕನ್ ಶ್ರೀರಾಮ ಕೃಷ್ಣನ್ ನೇಮಕ

ಶ್ವೇತಭವನದ AI ಸಲಹೆಗಾರರಾಗಿ ಭಾರತೀಯ-ಅಮೆರಿಕನ್ ಶ್ರೀರಾಮ ಕೃಷ್ಣನ್ ನೇಮಕ

Indian-American Sriram Krishnan appointed White House AI advisor by Donald Trump

ವಾಷಿಗ್ಟಂನ್‌-ಸ್ಯಾನ್‌ ಫ್ರಾನ್ಸಿಸ್ಕೋ,ಡಿ.23– ಭಾರತ ಮೂಲದ ಉದ್ಯಮಿ, ಲೇಖಕ ಶ್ರೀರಾಮ ಕೃಷ್ಣನ್‌ ಅವರನ್ನು ಶ್ವೇತಭವನದ ಕೃತಕ ಬುದ್ಧಿಮತ್ತೆ ವಿಭಾಗದ ನೀತಿ ಸಲಹೆಗಾರರನ್ನಾಗಿ ಅಮೆರಿಕದ ನಿಯೋಜಿತ ಅಧ್ಯಕ್ಷ ಡೊನಾಲ್ಡ್‌‍ ಟ್ರಂಪ್‌ ನೇಮಕ ಮಾಡಿದ್ದಾರೆ.

ಶ್ರೀರಾಮ ಕೃಷ್ಣನ್‌ ಅವರು ಶ್ವೇತಭವನದ ವಿಜ್ಞಾನ ಮತ್ತು ತಂತ್ರಜ್ಞಾನ ನೀತಿ ಕಚೇರಿಯಲ್ಲಿ ಕೃತಕ ಬುದ್ಧಿಮತ್ತೆಯ ಹಿರಿಯ ನೀತಿ ಸಲಹೆಗಾರರಾಗಿ ಸೇವೆ ಸಲ್ಲಿಸಲಿದ್ದಾರೆ ಎಂದು ಟ್ರಂಪ್‌ ಘೋಷಿಸಿದ್ದಾರೆ.

ಈ ಹಿಂದೆ ಮೈಕೋಸಾಫ್‌್ಟ, ಟ್ವಿಟ್ಟರ್‌, ಯಾಹೂ, ಫೇಸ್‌‍ಬುಕ್‌ ಮತ್ತು ಸ್ಕ್ಯಾಪ್‌ನಲ್ಲಿ ಉತ್ಪನ್ನ ತಂಡಗಳನ್ನು ಮುನ್ನಡೆಸಿರುವ ಕೃಷ್ಣನ್‌, ವೈಟ್‌ ಹೌಸ್‌‍ ಮತ್ತು ಕ್ರಿಪ್ರೋ ಮುಖ್ಯಸ್ಥರಾಗಿರುವ ಡೇವಿಡ್‌ ಸ್ಯಾಕ್‌್ಸ ಜೊತೆಗೆ ಕೆಲಸ ಮಾಡಲಿದ್ದಾರೆ.

ದೇಶಕ್ಕೆ ಸೇವೆ ಸಲ್ಲಿಸಲು ಮತ್ತು ಎಐನಲ್ಲಿ ಅಮೆರಿಕದ ನಾಯಕತ್ವವನ್ನು ಖಚಿತಪಡಿಸಿಕೊಳ್ಳಲು ಡೇವಿಡ್‌ ಸ್ಯಾಕ್‌್ಸ ಅವರೊಂದಿಗೆ ಕೆಲಸ ಮಾಡಲು ಅವಕಾಶ ಲಭಿಸಿದ್ದು ನನಗೆ ಸಿಕ್ಕಿ ಗೌರವ ಎಂದು ಕೃಷ್ಣನ್‌ ಹೇಳಿದ್ದಾರೆ.

ಕೃಷ್ಣನ್‌ ಅವರ ನೇಮಕವನ್ನು ಅಮೆರಿಕದ ಭಾರತೀಯ ಸಮುದಾಯ ಸ್ವಾಗತಿಸಿದೆ. ನಾವು ಶ್ರೀರಾಮ ಕೃಷ್ಣನ್‌ ಅವರನ್ನು ಹೃತ್ತೂರ್ವಕವಾಗಿ ಅಭಿನಂದಿಸುತ್ತೇವೆ. ಅವರನ್ನು ಶ್ವೇತಭವನದ ಕೃತಕ ಬುದ್ಧಿಮತ್ತೆ ವಿಭಾಗದ ನೀತಿ ಸಲಹೆಗಾರರನ್ನಾಗಿ ನೇಮಿಸಿರುವುದಕ್ಕೆ ಸಂತೋಷ ಪಡುತ್ತೇವೆ ಎಂದು ಇಂಡಿಯಾಸ್ಪೋರಾದ ಕಾರ್ಯನಿರ್ವಾಹಕ ನಿರ್ದೇಶಕ ತಿಳಿಸಿದ್ದಾರೆ.

ದೇಶಕ್ಕೆ ಸೇವೆ ಸಲ್ಲಿಸಲು ಮತ್ತು ಎಐನಲ್ಲಿ ಅಮೆರಿಕದ ನಾಯಕತ್ವವನ್ನು ಖಚಿತಪಡಿಸಿಕೊಳ್ಳಲು ಡೇವಿಡ್‌ ಸ್ಯಾಕ್‌್ಸ ಅವರೊಂದಿಗೆ ಕೆಲಸ ಮಾಡಲು ಅವಕಾಶ ಲಭಿಸಿದ್ದು ನನಗೆ ಸಿಕ್ಕಿ ಗೌರವ ಎಂದು ಕೃಷ್ಣನ್‌ ಹೇಳಿದ್ದಾರೆ.

RELATED ARTICLES

Latest News