Sunday, July 7, 2024
Homeರಾಷ್ಟ್ರೀಯ"ಹುತಾತ್ಮ ಅಗ್ನಿವೀರ್‌ ಕುಟುಂಬಕ್ಕೆ 98 ಲಕ್ಷ ರೂ. ಪರಿಹಾರ ನೀಡಲಾಗಿದೆ" : ರಾಹುಲ್‌ ಆರೋಪಕ್ಕೆ ಸೇನೆ...

“ಹುತಾತ್ಮ ಅಗ್ನಿವೀರ್‌ ಕುಟುಂಬಕ್ಕೆ 98 ಲಕ್ಷ ರೂ. ಪರಿಹಾರ ನೀಡಲಾಗಿದೆ” : ರಾಹುಲ್‌ ಆರೋಪಕ್ಕೆ ಸೇನೆ ಸ್ಪಷ್ಟನೆ

ನವದೆಹಲಿ,ಜು.4- ಕರ್ತವ್ಯದ ವೇಳೆ ಮೃತಪಟ್ಟ ಅಗ್ನಿವೀರ್‌ ಅಜಯ್‌ಕುಮಾರ್‌ ಕುಟುಂಬಕ್ಕೆ 98 ಲಕ್ಷ ರೂ. ಪರಿಹಾರ ನೀಡಲಾಗಿದೆ ಎಂದು ಭಾರತೀಯ ಸೇನೆ ತಿಳಿಸಿದೆ. ಅಜಯ್‌ಕುಮಾರ್‌ ಕುಟುಂಬಕ್ಕೆ ಸರ್ಕಾರದಿಂದ ಯಾವುದೇ ಪರಿಹಾರ ಸಿಕ್ಕಿಲ್ಲ ಎಂದು ಕಾಂಗ್ರೆಸ್‌‍ ನಾಯಕ ಹಾಗೂ ಲೋಕಸಭೆಯ ಪ್ರತಿ ಪಕ್ಷದ ನಾಯಕ ರಾಹುಲ್‌ ಗಾಂಧಿ ಸಾಮಾಜಿಕ ಮಾಧ್ಯಮ ಪೋಸ್ಟ್‌‍ನಲ್ಲಿ ಕೇಂದ್ರ ಸರ್ಕಾರದ ಗಮನ ಸೆಳೆದಿದ್ದರು.

ಕರ್ತವ್ಯದ ವೇಳೆ ಪ್ರಾಣ ಕಳೆದುಕೊಂಡ ಅಗ್ನಿವೀರ್‌ ಅಜಯ್‌ಕುಮಾರ್‌ ಅವರ ಸಂಬಂಧಿಕರಿಗೆ ಪರಿಹಾರವನ್ನು ಪಾವತಿಸಲಾಗಿಲ್ಲ ಎಂದು ಸಾಮಾಜಿಕ ಮಾಧ್ಯಮದಲ್ಲಿ ಕೆಲವು ಪೋಸ್ಟ್‌‍ಗಳು ಹೊರಬಂದಿವೆ. ಬಾಕಿಯಿರುವ ಒಟ್ಟು ಮೊತ್ತದಲ್ಲಿ ಅಗ್ನಿವೀರ್‌ ಅಜಯ್‌ ಅವರ ಕುಟುಂಬಕ್ಕೆ ಈಗಾಗಲೇ 98.39 ಲಕ್ಷ ಪಾವತಿಸಲಾಗಿದೆ ಎಂದು ಸೇನೆಯ ಹೇಳಿಕೆ ತಿಳಿಸಿದೆ.

ಅಗ್ನಿವೀರ್‌ ಯೋಜನೆಯ ನಿಬಂಧನೆಗಳ ಪ್ರಕಾರ ಅನ್ವಯವಾಗುವಂತೆ ಅಂದಾಜು 67 ಲಕ್ಷ ಮೊತ್ತದ ಎಕ್‌್ಸ -ಗ್ರೇಷಿಯಾ ಮತ್ತು ಇತರ ಪ್ರಯೋಜನಗಳನ್ನು ಪೋಲೀಸ್‌‍ ಪರಿಶೀಲನೆಯ ನಂತರ ಅಂತಿಮ ಖಾತೆಯ ಇತ್ಯರ್ಥಕ್ಕೆ ಪಾವತಿಸಲಾಗುವುದು. ಒಟ್ಟು ಮೊತ್ತವು ಸರಿಸುಮಾರು 1.65 ಕೋಟಿ ರೂ.ಗಳಾಗಿರುತ್ತದೆ ಎಂದು ಹೇಳಿದೆ.

ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವರು, ಅಗ್ನಿವೀರ್‌ ಅಜಯ್‌ ಕುಮಾರ್‌ ಕುಟುಂಬಕ್ಕೆ ನೀಡಿದ ಪರಿಹಾರದ ಬಗ್ಗೆ ಸುಳ್ಳು ಹೇಳಿದ್ದಾರೆ ಎಂದು ರಾಹುಲ್‌ ಗಾಂಧಿ ತಮ್ಮ ಎಕ್‌್ಸ ಖಾತೆಯಲ್ಲಿ ವೀಡಿಯೊವನ್ನು ಪೋಸ್ಟ್‌ ಮಾಡಿದ ಬೆನ್ನಲ್ಲೇ ಸೇನೆಯಿಂದ ಈ ಹೇಳಿಕೆ ಹೊರಬಿದ್ದಿದೆ.

ವಿಡಿಯೋದಲ್ಲಿ ಅಜಯ್‌ಕುಮಾರ್‌ ಅವರ ತಂದೆ ಕೇಂದ್ರ ಸರ್ಕಾರದಿಂದ ಯಾವುದೇ ಪರಿಹಾರವನ್ನು ಪಡೆದಿಲ್ಲ ಎಂದು ಹೇಳಿದ್ದರು. ಸೋಮವಾರ ಲೋಕಸಭೆಯಲ್ಲಿ ಮಾತನಾಡಿದ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ, ಸರ್ಕಾರ ಅಗ್ನಿವೀರರನ್ನು ಯುಸ್‌‍ ಅಂಡ್‌ ಥ್ರೋ ಕಾರ್ಮಿಕರು ಎಂದು ಪರಿಗಣಿಸುತ್ತದೆ ಮತ್ತು ಅವರಿಗೆ ಶಹೀದ್‌‍ (ಹುತಾತ್ಮ) ಸ್ಥಾನಮಾನವನ್ನು ಸಹ ನೀಡುವುದಿಲ್ಲ ಎಂದು ಆರೋಪಿಸಿದ್ದರು.

ಇದಕ್ಕೆ ರಾಜನಾಥ್‌ ಸಿಂಗ್‌, ರಾಹುಲ್‌ ಗಾಂಧಿ ಸಂಸತ್ತಿನ ದಿಕ್ಕು ತಪ್ಪಿಸಬಾರದು, ಕರ್ತವ್ಯದ ವೇಳೆ ಪ್ರಾಣತ್ಯಾಗ ಮಾಡುವ ಅಗ್ನಿವೀರನಿಗೆ 1 ಕೋಟಿ ರೂ. ಪರಿಹಾರ ಸಿಗುತ್ತದೆ ಎಂದರು.ಜೂನ್‌ 14, 2022ರಂದು ಘೋಷಿಸಲಾದ ಅಗ್ನಿಪಥ್‌ ಯೋಜನೆಯು 17 ಮತ್ತು 21 ವರ್ಷ ವಯಸ್ಸಿನ ಯುವಕರನ್ನು ಕೇವಲ ನಾಲ್ಕು ವರ್ಷಗಳವರೆಗೆ ನೇಮಕ ಮಾಡಿಕೊಳ್ಳಲು ಒದಗಿಸುತ್ತದೆ, ಅವರಲ್ಲಿ ಶೇಕಡಾ 25 ರಷ್ಟು ಜನರನ್ನು ಇನ್ನೂ 15 ವರ್ಷಗಳವರೆಗೆ ಉಳಿಸಿಕೊಳ್ಳುವ ಅವಕಾಶವಿದೆ. ಆ ವರ್ಷದ ನಂತರ ಸರ್ಕಾರವು ಗರಿಷ್ಠ ವಯಸ್ಸಿನ ಮಿತಿಯನ್ನು 23 ವರ್ಷಗಳಿಗೆ ವಿಸ್ತರಿಸುತ್ತದೆ.

RELATED ARTICLES

Latest News