ಕ್ಯಾಲಿಫೋರ್ನಿಯಾ, ಮೇ 6- ಸ್ಯಾನ್ ಡಿಯಾಗೋ ಕರಾವಳಿಯಲ್ಲಿ ಭಾರತೀಯರು ಸೇರಿದಂತೆ ವಲಸಿಗರನ್ನು ಕರೆದೊಯ್ಯುತ್ತಿದ್ದ ಸಣ್ಣ ದೋಣಿ ಮಗುಚಿ ಮೂವರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಇದಲ್ಲದೆ, ಅಪಘಾತದಲ್ಲಿ ನಾಲ್ಕು ಜನರು ಗಾಯಗೊಂಡಿದ್ದಾರೆ. ವಿನಾಶಕಾರಿ ಘಟನೆಯಲ್ಲಿ ಭಾರತೀಯ ಕುಟುಂಬವೂ ಬಾಧಿತವಾಗಿದೆ. ಸ್ಯಾನ್ ಫ್ರಾನ್ಸಿ ಸ್ಟೋದಲ್ಲಿರುವ ಭಾರತೀಯ ಕಾನ್ಸುಲೇಟ್ ಜನರಲ್ ಪೋಸ್ಟ್‌ನಲ್ಲಿ, ಇಬ್ಬರು ಭಾರತೀಯ ಮಕ್ಕಳು ಕಾಣೆಯಾಗಿದ್ದಾರೆ ಮತ್ತು ಅವರ ಪೋಷಕರು ಲಾ ಜೊಲ್ಲಾದ ಸ್ಕಿಪ್ಸ್ ಮೆಮೋರಿಯಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಯುಎಸ್ ಕೋಸ್ಟ್ ಗಾರ್ಡ್ ಪ್ರಕಾರ, ನಾಲ್ಕು ಜನರನ್ನು ರಕ್ಷಿಸಲಾಗಿದ್ದು, ಏಳು ಜನರು ಇನ್ನೂ ಕಾಣೆಯಾಗಿದ್ದಾರೆ.ವಶಕ್ಕೆ ಪಡೆದ ಇಬ್ಬರನ್ನು ಮಾನಸ ಕಳ್ಳಸಾಗಣೆದಾರರು ಎಂದು ಶಂಕಿಸಲಾಗಿದೆ ಎಂದು ಕೋಸ್ಟ್ ಗಾರ್ಡ್ ವಕ್ತಾರ ಹಂಟರ್ ಶಾಬೆಲ್ ರಾಯಿಟರ್ಸ್ ಗೆ ತಿಳಿಸಿದ್ದಾರೆ.