Saturday, December 28, 2024
Homeಉದ್ಯೋಗ | Job newsಭಾರತೀಯ ಕೋಸ್ಟ್ ಗಾರ್ಡ್​​ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ

ಭಾರತೀಯ ಕೋಸ್ಟ್ ಗಾರ್ಡ್​​ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ

indian coast guard recruitment

ಬೆಂಗಳೂರು,ಡಿ.10– ಭಾರತೀಯ ಕೋಸ್ಟ್ ಗಾರ್ಡ್ ಹುದ್ದೆಗಳ ನೇಮಕಾತಿಗೆ ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ. ಡಿ.5ರಿಂದ ಡಿಸೆಂಬರ್ 24ರವರೆಗೆ ಅರ್ಜಿ ಸಲ್ಲಿಕೆಗೆ ಅವಕಾಶವಿದೆ.
2026ರ ಬ್ಯಾಚ್ಗಾಗಿ ಈಗಲೇ ಉದ್ಯೋಗಗಳನ್ನು ತುಂಬಲಾಗುತ್ತಿದೆ. ಈ ನೇಮಕಾತಿ ಅಭಿಯಾನದಡಿ ಪರೀಕ್ಷೆಯ ಮೂಲಕ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ.

ಜನರಲ್ ಡ್ಯೂಟಿ (ಜಿಡಿ) ಮತ್ತು ತಾಂತ್ರಿಕ (ಎಂಜಿನಿಯರಿಂಗ್ ಮತ್ತು ಎಲೆಕ್ಟ್ರಿಕಲ್/ಎಲೆಕ್ಟ್ರಾನಿಕ್ಸ್ ) ಸೇರಿದಂತೆ ವಿವಿಧ ಶಾಖೆಗಳಲ್ಲಿ ಆಯ್ಕೆಯಾದವರನ್ನು ನೇಮಕಾತಿ ಮಾಡಲಾಗುತ್ತದೆ.

ಹುದ್ದೆಗಳು: ಜನರಲ್ ಡ್ಯುಟಿ (ಜಿಡಿ)- 110 ಉದ್ಯೋಗಗಳು, ತಾಂತ್ರಿಕ (ಇಂಜಿನಿಯರ್)- 30 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ.

21 ರಿಂದ 25 ವರ್ಷದೊಳಗಿನ ಜನರಲ್ ಡ್ಯುಟಿ (ಜಿಡಿ) ಹುದ್ದೆಗೆ ದ್ವಿತೀಯ ಪಿಯುಸಿ (ಗಣಿತ ಮತ್ತು ಭೌತಶಾಸ್ತ್ರ ಅಧ್ಯಯನ ಮಾಡಿರಬೇಕು). ತಾಂತ್ರಿಕ (ಇಂಜಿನಿಯರ್- ತಾಂತ್ರಿಕ ಶಾಖೆ (ಎಂಜಿನಿಯರಿಂಗ್/ಎಲೆಕ್ಟ್ರಿಕಲ್) ವಿದಾರ್ಹತೆ ಹೊಂದಿರಬೇಕು.

ಅರ್ಜಿ ಶುಲ್ಕ : ಜನರಲ್, ಒಬಿಸಿ, ಇಡಬ್ಲುಎಸ್ಗೆ 300 ರೂ. ಹಾಗೂ ಎಸ್ಸಿ, ಎಸ್ಟಿ, ವಿಶೇಷ ಚೇತನರಿಗೆ ವಿನಾಯ್ತಿ ನೀಡಲಾಗಿದೆ. ಆನ್ಲೈನ್ ಮೂಲಕ ಹಣ ಪಾವತಿ ಮಾಡತಕ್ಕದ್ದು.
ಆಸಕ್ತ ಅಭ್ಯರ್ಥಿಗಳು https://joinindiancoastguard.cdac.in/ ನಲ್ಲಿ ಅರ್ಜಿ ಸಲ್ಲಿಸಬಹುದು.

RELATED ARTICLES

Latest News