Friday, July 25, 2025
Homeಅಂತಾರಾಷ್ಟ್ರೀಯ | Internationalಪ್ರಧಾನಿ ಮೋದಿಗೆ ಲಂಡನ್‌ನಲ್ಲಿ ಅದ್ಧೂರಿ ಸ್ವಾಗತ

ಪ್ರಧಾನಿ ಮೋದಿಗೆ ಲಂಡನ್‌ನಲ್ಲಿ ಅದ್ಧೂರಿ ಸ್ವಾಗತ

Indian diaspora in London gives PM Modi a grand welcome

ಲಂಡನ್, ಜು. 24- ನಾಲ್ಕು ದಿನಗಳ ಲಂಡನ್, ಮಾಲೀನ್ಸ್ ಪ್ರವಾಸದ ಅಂಗವಾಗಿ ಲಂಡನ್ಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬ್ರಿಟನ್ ಪ್ರಧಾನಿ ಕೀರ್ ಸ್ಟಾಮರ್ ಸಾಂಪ್ರದಾಯಿಕ ಸ್ವಾಗತ ಕೋರಿದ್ದಾರೆ.

ಇದೇ ವೇಳೆ ಅಲ್ಲಿನ ಭಾರತೀಯ ಸಮೂಹವನ್ನು ಭೇಟಿಯಾದ ಮೋದಿ ಹರ್ಷ ವ್ಯಕ್ತಪಡಿಸಿದ್ದಾರೆ. ಈ ಪ್ರವಾಸದಲ್ಲಿ ಮೋದಿ ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧಗಳನ್ನು ಬಲಪಡಿಸುವ ಗುರಿ ಹೊಂದಿದ್ದಾರೆ. ಈ ನಿಟ್ಟಿನಲ್ಲಿ ಇಂದು ಕೀರ್ ಸ್ಟಾಮರ್ ಅವರೊಂದಿಗೆ ಮಾತುಕತೆ ನಡೆಸಲಿದ್ದಾರೆ. ಈ ವೇಳೆ ಭಾರತ-ಯುಕೆ ದ್ವಿಪಕ್ಷೀಯ ವಾಣಿಜ್ಯ ಒಪ್ಪಂದಕ್ಕೆ ಅಂತಿಮ ಸಹಿ ಹಾಕುವ ಸಾಧ್ಯತೆ ಇದೆ.

ಮೂರು ವರ್ಷಗಳ ಚರ್ಚೆಯ ಬಳಿಕ ಮೇ ತಿಂಗಳಲ್ಲಿ ಒಪ್ಪಂದಕ್ಕೆ ಅಂತಿಮ ರೂಪ ನೀಡಲಾಗಿದ್ದು, ಇದು ಭಾರತದ ಶೇ.99 ರಷ್ಟು ರಫ್ತುಗಳ ಮೇಲಿನ ಸುಂಕವನ್ನು ತೆಗೆದುಹಾಕಲಿದೆ. ಮುಖ್ಯವಾಗಿ ಭಾರತ-ಯುಕೆ ದ್ವಿಪಕ್ಷೀಯ ವಾಣಿಜ್ಯ ಒಪ್ಪಂದರಿಂದ ಪ್ರಸ್ತುತ ಇರುವ 60 ಶತಕೋಟಿ ಡಾಲರ್‌ನಿಂದ ವಹಿವಾಟು ದ್ವಿಗುಣಗೊಳ್ಳುವ ಸಾಧ್ಯತೆಗಳಿವೆ. ಜೊತೆಗೆ ಬ್ರಿಟನ್ ಉತ್ಪನ್ನಗಳಾದ ವಿಸ್ಕಿ ಮತ್ತು ಆಟೋಮೊಬೈಲ್ಗಳಿಗೆ ಭಾರತದ ಮಾರುಕಟ್ಟೆಯಲ್ಲಿ ಸುಲಭ ಪ್ರವೇಶ ಸಿಗಲಿದೆ. ಇದರೊಂದಿಗೆ ರಕ್ಷಣಾ ವಲಯ, ಶಿಕ್ಷಣ, ಸಂಶೋಧನೆ ಸೇರಿದಂತೆ ಹಲವು ಮಹತ್ವದ ವಿಷಯಗಳ ಕುರಿತು ಮಾತುಕತೆ ನಡೆಸಲಿದ್ದಾರೆ.

ಇನ್ನೂ ಬ್ರಿಟನ್‌ಗೆ ಭೇಟಿ ನೀಡಿದ ಸಂದರ್ಭದಲ್ಲಿ ಅಲ್ಲಿನ ಭಾರತೀಯ ಸಮೂಹವನ್ನು ಭೇಟಿ ಮಾಡಿದ ಪ್ರಧಾನಿ ಮೋದಿ ಭಾವುಕರಾದರು. ಸಾಂಪ್ರದಾಯಿಕ ಸ್ವಾಗತಕ್ಕಾಗಿ ಅಲ್ಲಿನ ಭಾರತೀಯ ಸಮೂಹಕ್ಕೆ ಧನ್ಯವಾದ ಸಲ್ಲಿಸಿದರಲ್ಲದೇ ಭಾರತದ ಪ್ರಗತಿಗೆ ನಿಮ್ಮ ಪ್ರೀತಿ ಮತ್ತು ಬದ್ಧತೆ ನೋಡಿ ಹೃದಯ ತುಂಬಿಬರುತ್ತಿದೆ ಎಂದು ಭಾವುಕರಾದರು. ಗ್ಲೋಬಲ್ ಮಾರ್ಕೆಟ್ ಇಂಟೆಲಿಜೆನ್ಸ್ ಪ್ರಕಾರ, ಈ ಒಪ್ಪಂದವು ಭಾರತಕ್ಕೆ ಗಣನೀಯ ಆರ್ಥಿಕ ಉತ್ತೇಜನ ನೀಡಲಿದೆ.

2024ರಲ್ಲಿ ಯುಕೆಯಿಂದ ಭಾರತಕ್ಕೆ 130 ಬಿಲಿಯನ್ ಡಾಲರ್ ನಷ್ಟು (ಭಾರತದ ಜಿಡಿಪಿಯ 3.3%) ವಿದೇಶಿ ವಿನಿಮಯ ಹರಿವು ದಾಖಲಾಗಿದ್ದು, ಈ ಒಪ್ಪಂದದಿಂದ ಈ ಹರಿವು ಮತ್ತಷ್ಟು ಹೆಚ್ಚಲಿದೆ.

ವಿಶೇಷವಾಗಿ, ಯುಕೆಯಲ್ಲಿ ಕೆಲಸ ಮಾಡುವ ಭಾರತೀಯ ಐಟಿ ವೃತ್ತಿಪರರಿಗೆ ಮೂರು ವರ್ಷಗಳವರೆಗೆ ರಾಷ್ಟ್ರೀಯ ವಿಮೆಯಿಂದ ವಿನಾಯಿತಿ ನೀಡುವ ನಿಬಂಧನೆಯು ಅವರ ಉಳಿತಾಯ ಮತ್ತು ವಿದೇಶಿ ವಿನಿಮಯ ಹರಿವನ್ನು ಹೆಚ್ಚಿಸಲಿದೆ. 2024ರಲ್ಲಿ 56.7 ಬಿಲಿಯನ್ ಡಾಲರ್ ಆಗಿರುವ ದ್ವಿಪಕ್ಷೀಯ ವಾಣಿಜ್ಯವನ್ನು 2030ರ ವೇಳೆಗೆ ದ್ವಿಗುಣಗೊಳಿಸುವ ಗುರಿಯನ್ನು ಈ ಒಪ್ಪಂದ ಹೊಂದಿದೆ.

ಬ್ರಿಟನ್ ಭೇಟಿಯ ಬಳಿಕ, ಪ್ರಧಾನಿ ಮೋದಿ ಜುಲೈ 25-26ರಂದು ಮಾಲ್ಮೀಮ್ಸ್ ಗೆ ತೆರಳಲಿದ್ದಾರೆ. ಅಲ್ಲಿ ಅವರು ಮಾಲ್ವಿನ್ಸ್ ನ ಸ್ಥಾತಂತ್ರ್ಯ ದಿನಾಚರಣೆಯ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. 1965ರಲ್ಲಿ ಬ್ರಿಟಿಷರಿಂದ ಸ್ವಾತಂತ್ರ್ಯ ಪಡೆದ 60ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿರುವ ಮಾಲ್ಮೀಮ್ಸ್, ಈ ಸಂದರ್ಭದಲ್ಲಿ ಮೋದಿಯವರಿಗೆ ಗೌರವಾನ್ವಿತ ಸ್ವಾಗತವನ್ನು ನೀಡಲಿದೆ. ಮಾಲ್ಮೀನ್ಸ್ ನ ರಾಷ್ಟ್ರಪತಿ ಮೊಹಮ್ಮದ್ ಮುಯಿಝು ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿರುವ ಮೋದಿ, ಎರಡೂ ದೇಶಗಳ ನಡುವಿನ ಸಹಕಾರವನ್ನು ಗಾಢವಾಗಿಸುವ ಬಗ್ಗೆ ಚರ್ಚಿಸಲಿದ್ದಾರೆ.

RELATED ARTICLES

Latest News