Monday, February 24, 2025
Homeರಾಷ್ಟ್ರೀಯ | Nationalಹಲವು ಏರಿಳಿತಗಳ ನಡುವೆಯೂ ಭಾರತದ ಆರ್ಥಿಕತೆಯು ಸುರಕ್ಷಿತ : ಎಕ್ಸಸ್ ಸೆಕ್ಯೂರಿಟಿಸ್‌ ವರದಿ

ಹಲವು ಏರಿಳಿತಗಳ ನಡುವೆಯೂ ಭಾರತದ ಆರ್ಥಿಕತೆಯು ಸುರಕ್ಷಿತ : ಎಕ್ಸಸ್ ಸೆಕ್ಯೂರಿಟಿಸ್‌ ವರದಿ

Indian Economy In Very Stable Political Regime, Structural Story Remains Intact

ನವದೆಹಲಿ, ಫೆ.17- ಹಲವು ಏರಿಳಿತಗಳ ನಡುವೆಯೂ ಭಾರತದ ಆರ್ಥಿಕತೆಯು ಸುರಕ್ಷಿತ ವಾತಾವರಣದಲ್ಲಿ ಇದೆ ಎಂದು ಎಕ್ಸಸ್ ಸೆಕ್ಯೂರಿಟಿಸ್‌ ವರದಿಯಲ್ಲಿ ಬಹಿರಂಗಗೊಂಡಿದೆ. ದೇಶದಲ್ಲಿ ಬಂಡವಾಳ ವೆಚ್ಚ ಹೆಚ್ಚಾಗುತ್ತಿದ್ದು, ಕಾರ್ಪೋರೇಟ್ ಕಂಪನಿಗಳ ತ್ರೈಮಾಸಿಕ ಆದಾಯಗಳು ಉತ್ತಮಗೊಳ್ಳುತ್ತಿವೆ.

ಬೇಡಿಕೆಗೆ ತಕ್ಕಂತೆ ಕೊಳ್ಳುವವರ ಪ್ರಮಾಣವೂ ಹೆಚ್ಚಾಗುತ್ತಿರುವುದರಿಂದ ಇತರೆ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತದ ಆರ್ಥಿಕತೆ ಉತ್ತಮ ವಾತಾವರಣದಲ್ಲಿದೆ ಎಂದು ಎಕ್ಸಿಸ್ ಸೆಕ್ಯೂರಿಟಿಸ್‌ನ ಸಿಐಒ ಮೆಮೊದಲ್ಲಿ ಉಲ್ಲೇಖವಾಗಿದೆ.

ಲೋಕಸಭೆ ಚುನಾವಣೆ ನಂತರ ಹರಿಯಾಣ, ಮಹಾರಾಷ್ಟ್ರ, ಜಾರ್ಖಂಡ್, ದೆಹಲಿ ವಿಧಾನಸಭೆ ಚುನಾವಣೆಯ ಫಲಿತಾಂಶದ ನಂತರ ಬಹುತೇಕ ಎಲ್ಲ ಕಡೆ ರಾಜಕೀಯ ಪರಿಸ್ಥಿತಿ ಸ್ಥಿರವಾಗಿದೆ. ಇತ್ತೀಚೆಗೆ ಮಂಡನೆಯಾದ 2025-26ನೇ ಸಾಲಿನ ಆಯವ್ಯಯದಲ್ಲಿ 12 ಲಕ್ಷದವರೆಗೂ ತೆರಿಗೆ ವಿನಾಯ್ತಿ ನೀಡಿರುವುದು ಉತ್ತಮವಾದ ಬೆಳವಣಿಗೆ.ಹೀಗಾಗಿ ಬಂಡವಾಲ ವೆಚ್ಚ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ಎಂದು ಅಭಿಪ್ರಾಯಪಟ್ಟಿದೆ.

ಮಾರುಕಟ್ಟೆ ಸಾಕಷ್ಟು ಮಾರಾಟ ಕಂಡಿದೆ. ದೇಶೀಯ ಸಾಂಸ್ಥಿಕ ಹೂಡಿಕೆದಾರರಿಂದ ಜನವರಿಯಲ್ಲಿ ಮಾರುಕಟ್ಟೆಗೆ ಒಳ ಹರಿವು ಉತ್ತಮ ರೀತಿಯಲ್ಲಿ ಮುಂದುವರಿದಿದೆ. ಮಾರುಕಟ್ಟೆ ಯಾವ ಕ್ಷಣದಲ್ಲಾದರೂ ಸಕಾರಾತ್ಮಕ ಸ್ಥಿತಿಗೆ ಬರಬಹುದು. ಈ ವರ್ಷಾಂತ್ಯದೊಳಗೆ ಷೇರು ಮಾರುಕಟ್ಟೆ ಹೊಸ ಎತ್ತರ ತಲುಪಬಹುದು ಎಂದು ಸಿಐಒ ಮೆಮೋದಲ್ಲಿ ಹೇಳಲಾಗಿದೆ.

ಒಟ್ಟಾರೆ ಆರ್ಥಿಕತೆಯ ರಚನೆ ಭದ್ರವಾಗಿದೆ. ಮಾರುಕಟ್ಟೆಯ ಈಗಿನ ಸ್ಥಿತಿ ಗಮನಿಸಿದರೆ ಹೂಡಿಕೆಗೆ ಒಳ್ಳೆಯ ಅವಕಾಶ ಸಿಕ್ಕಿದೆ. ಈಕ್ವಿಟಿಗಳಿಂದ ಒಳ್ಳೆಯ ರಿಟರ್ನ್ಸ್ ನಿರೀಕ್ಷಿಸಬಹುದು ಎಂದು ಎಕ್ಸಿಸ್ ಸೆಕ್ಯೂರಿಟೀಸ್ ಸಂಸ್ಥೆಯ ಈ ವರದಿಯಲ್ಲಿ ತಿಳಿಸಲಾಗಿದೆ.

ಸದ್ಯದ ಜಾಗತಿಕ ಸ್ಕೂಲ ಆರ್ಥಿಕ ವಾತಾವರಣವು ಡೊನಾಲ್ಡ್ ಟ್ರಂಪ್ ಅವರಿಂದ ಪ್ರಭಾವಿತವಾಗದ್ದಂತಿದೆ. ಸದ್ಯೋಭವಿಷ್ಯದಲ್ಲಿ ಟ್ಯಾರಿಫ್ ಪರಿಣಾಮವಾಗಿ ಮಾರುಕಟ್ಟೆಯ ಅಲುವಾಟು ಮುಂದುವರಿಯಲಿದೆ. ಆದರೆ ಮಧ್ಯಮಾವಧಿಯಿಂದ ದೀರ್ಘಾವಧಿಯವರೆಗೆ ಈಕ್ವಿಟಿಗಳು ಚೇತರಿಕೆ ಪಡೆಯಲಿವೆ ಎಂದು ಹೇಳಿದೆ.

ಈಗಾಗಲೇ ಸಾಕಷ್ಟು ಮಾರ್ಕೆಟ್ ಕರೆಕ್ಷನ್ ಆಗಿದೆ. ನಮ್ಮ ಹೆಚ್ಚಿನ ಷೇರುಗಳಲ್ಲಿ ಉತ್ತಮ ಮೌಲ್ಯ ಕಾಣುತ್ತಿದೆ. ಈ ಕಂಪನಿಗಳೂ ಕೂಡ ಉತ್ತಮ ಆದಾಯ ತೋರಿಸಿವೆ ಎಂದು ಎಕ್ಸಿಸ್ ಸೆಕ್ಯೂರಿಟೀಸ್ ಸಂಸ್ಥೆಯ ವರದಿಯು ಅಭಿಪ್ರಾಯಪಟ್ಟಿದೆ.

RELATED ARTICLES

Latest News