ಸಿಂಗಾಪುರ, ಜು. 31-ಅಪ್ರಾಪ್ತ ಬಾಲಕಿಯ ಮೇಲೆ ಎರಡು ಬಾರಿ ಲೈಂಗಿಕ ದೌರ್ಜನ್ಯ ಎಸಗಿದ ಭಾರತೀಯ ಪ್ರಜೆಗೆ ಸಿಂಗಾಪುರ ಹೈಕೋರ್ಟ್ 14 ವರ್ಷ ಹೆಚ್ಚು ಜೈಲು ಶಿಕ್ಷೆ ವಿಧಿಸಲಾಗಿದೆ.
ಅಪರಾಧಿ ರಾಮಲಿಂಗಂ ಸೆಲ್ವಶೇಖರನ್(58)ಗೆ ಶಿಕ್ಷೆಗೆ ಒಳಗಾದ ಭಾರತೀಯ.
50 ವರ್ಷಕ್ಕಿಂತ ಮೇಲ್ಪಟ್ಟವರಾಗಿರುವುದರಿಂದ ಅವರಿಗೆ ಛಡಿಯೇಟು ನೀಡಲಾಗುವುದಿಲ್ಲ. ಆದಾಗ್ಯೂ, ಅವರು 14 ವರ್ಷ, ಮೂರು ತಿಂಗಳು ಮತ್ತು ಎರಡು ವಾರಗಳ ಜೈಲು ಶಿಕ್ಷೆ ಅನುಭವಿಸಬೇಕು . 15 ಛಡಿಯೇಟುಗಳ ಬದಲಿಗೆ ಹೆಚ್ಚುವರಿ ಜೈಲು ಶಿಕ್ಷೆಯನ್ನು ಒಳಗೊಂಡಿದೆ ಎಂದು ಸಿಂಗಾಪುರ ದಿ ಸ್ಟ್ರೈಟ್‌್ಸಟೈಮ್ಸೌವರದಿ ಮಾಡಿದೆ.
ಕಳೆದ ಜು. 7 ರಂದು ಅವರು ಮೂರು ಆರೋಪಗಳಲ್ಲಿ ತಪ್ಪಿತಸ್ಥರೆಂದು ಸಾಬೀತಾಯಿತು.ಅವರು ಸ್ವತಃ ಪ್ರತಿನಿಧಿಸಿದ ವಿಚಾರಣೆಯ ನಂತರ ಜು. 30 ರಂದು ಶಿಕ್ಷೆ ವಿಧಿಸುವ ವಾದಗಳ ಸಮಯದಲ್ಲಿ, ರಾಮಲಿಂಗಂ ತಮ ಮುಗ್ಧತೆಯನ್ನು ಸಮರ್ಥಿಸಿಕೊಂಡರು ಮತ್ತು ತಮ ಅಪರಾಧದ ವಿರುದ್ಧ ಮೇಲನವಿ ಸಲ್ಲಿಸುವುದಾಗಿ ಹೇಳಿದರು.
ಎಲೆಕ್ಟ್ರಾನಿಕ್ ಟ್ಯಾಗ್ ತೆಗೆದುಹಾಕಲು ಮತ್ತು ಪೊಲೀಸ್ ಕಂಟೋನೆಂಟ್ ಸಂಕೀರ್ಣದಲ್ಲಿ ನಿಯಮಿತ ಚೆಕ್-ಇನ್‌ಗಳನ್ನು ತ್ಯಜಿಸಲು ಮಾಡಿದ ಮನವಿಗಳನ್ನು ನ್ಯಾಯಮೂರ್ತಿ ಐದನ್ ಕ್ಸುತಿರಸ್ಕರಿಸಿದರು.
ಕಳೆದ ಅಕ್ಟೋಬರ್ 28, 2021 ರಂದು ಸುಮಾರು ಸಂಜೆ 4.50 ರಿಂದ 5.5 ರ ನಡುವೆ ಸಿಂಗಾಪುರದ ಪಶ್ಚಿಮ ಕರಾವಳಿಯ ಜುರಾಂಗ್ ವೆಸ್ಟ್‌ನಲ್ಲಿರುವ ಅವರ ದಿನಸಿ ಅಂಗಡಿಯಲ್ಲಿ ಹುಡುಗಿ ಮೇಲೆ ದೌರ್ಜನ್ಯ ನಡೆದಿದೆ ಎಂಬ ಆರೋಪವಿತ್ತು, ಸುಧೀರ್ಘ ವಿಚಾರಣೆ ನಂತರ ಆರೋಪ ಸಾಭೀತಾಗಿದೆ ಎಂದು ನ್ಯಾಯಾಧೀಶರು ತೀರ್ಪು ನೀಡಿದ್ದರು.