ನ್ಯೂಯಾರ್ಕ್, ಮಾ 23-ಅಮೆರಿಕದ ವರ್ಜೀನಿಯಾ ರಾಜ್ಯದ ಕನಿಯನ್ಸ್ ಮಳಿಗೆಯಲ್ಲಿ ನುಗ್ಗಿದ ಬಂಧೂಕುಧಾರಿ ಭಾರತ ಮೂಲದ ತಂದೆ -ಮಗಳನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾನೆ. ಪೊಲೀಸರು ಗುಂಡಿನ ದಾಳಿಗೆ ಸಂಬಂಧಿಸಿದಂತೆ ಒಬ್ಬನನ್ನು ಬಂಧಿಸಿದ್ದಾರೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.
ಗುಂಡಿನ ದಾಳಿಲ್ಲಿ ಗುಜರಾಜ್ ಮೂಲದ ಪ್ರದೀಪ್ ಕುಮಾರ್ ಪಟೇಲ್ (54) ಮತ್ತು ಅವರ ಮಗಳು ಉರ್ವಿ ಪಟೇಲ್ (24)ಇದ್ದರು ಇವರು ವರ್ಜೀನಿಯಾದ ಪೂರ್ವದಲ್ಲಿರುವ ಅಕೋಮಾಕ್ ಕೌಂಟಿಯ ಲ್ಯಾಂಕ್‌ಫೋರ್ಡ್ ಹೆದ್ದಾರಿಯಲ್ಲಿ ಮಳಿಗೆ ಹೊಂದಿದ್ದರು.
ಕಳೆದ ಮಾರ್ಚ್ 20 ರಂದು ಬೆಳಿಗ್ಗೆ 5:30ಕ್ಕೆ ಈ ಘಟನೆ ನಡೆದಿದೆ.ಏಕಾಏಕಿ ಅಂಗಡಿಯೊಳಗೆ ನುಗ್ಗಿ ತನ್ನ ಬಂಧೂಕಿನಿಂದ ಯುವಕ ಮನಬಂದಂತೆ ಗುಂಡು ಹರಿಸಿದ್ದಾನೆ. ತಲೆಗೆ ಗುಂಡುಹೊಕ್ಕಿ ಪ್ರದೀಪ್ ಕುಮಾರ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ, ಗಾಯಗೊಂಡಿದ್ದ ಮಗಳನ್ನು ಸೆಂಟಾರಾ ನಾರ್ಫೋಕ್ ಜನರಲ್ ಆಸ್ಪತ್ರೆಗೆ ಸಾಗಿಸಲಾಯಿತು, ಅಲ್ಲಿ ಆಕೆ ಸಾವನ್ನಪ್ಪಿದರು ಎಂದು ಪೊಲೀಸರು ತಿಳಿಸಿದರು.
ಪೊಲೀಸರ ಪ್ರಕಾರ ಓನಾನ್‌ಕಾಕ್ ಜಾರ್ಜ್ ಫ್ರೀಜಿಯರ್ ಡೆವೊನ್ ವಾರ್ಟನ್ ( 44) ಎಂಬಾತನನ್ನು ಅಕೋಮಾಕ್ ಜೈಲಿನಲ್ಲಿಡಲಾಗಿದೆ. ಗುಂಡಿನ ದಾಳಿಯ ಉದ್ದೇಶವನ್ನು ತಕ್ಷಣವೇ ಬಹಿರಂಗಪಡಿಸಲಾಗಿಲ್ಲ. ತನ್ನನ್ನು ಅಂಗಡಿಯ ಮಾಲೀಕ ಎಂದು ಗುರುತಿಸಿಕೊಂಡಿರುವ ಪರೇಶ್ ಪಟೇಲ್‌ಗೆ ಕುಟುಂಬ ಸದಸ್ಯರು ನೆರವಾಗುತ್ತಿದ್ದರು. ಈ ಘಟನೆಯು ಫೇಸ್‌ಬುಕ್ ಮೂಲಕ ಸುದ್ದಿ ಹರಡಿದ ನಂತರ ಅಮೆರಿಕದಲ್ಲಿರುವ ಭಾರತೀಯ ಸಮುದಾಯದ ಸದಸ್ಯರಲ್ಲಿ ಆಘಾತ ವ್ಯಕ್ತಪಡಿಸಿದ್ದಾರೆ