ಸಿಂಗಾಪುರ, ಡಿ 21 (ಪಿಟಿಐ) ಸಿಂಗಾಪುರದಲ್ಲಿ 25 ವರ್ಷದ ಭಾರತೀಯ ಮೂಲದ ವ್ಯಕ್ತಿಯೊಬ್ಬರು ತಮ್ಮ ತಂದೆಯ ಮೇಲೆ ಹಲ್ಲೆ ಮಾಡಿದ ಮತ್ತು ಪ್ರತ್ಯೇಕವಾಗಿ ಮಹಿಳೆಗೆ ಕಿರುಕುಳ ನೀಡಿದ ಆರೋಪದಲ್ಲಿ ಜೈಲು ಶಿಕ್ಷೆಗೆ ಗುರಿಯಾಗಿದ್ದಾರೆ.
ಆರೋಪಿ ತಪ್ಪೊಪ್ಪಿಕೊಂಡ ನಂತರ ಒಂದು ವರ್ಷದ ಐದು ತಿಂಗಳು ಮತ್ತು ಆರು ವಾರಗಳ ಜೈಲು ಶಿಕ್ಷೆಯನ್ನು ವಿಧಿಸಲಾಗಿದೆ ಎಂದು ವರದಿಯಾಗಿದೆ.ಶಿಕ್ಷೆಗೊಳಗಾದ ವ್ಯಕ್ತಿಯನ್ನು ಅರ್ಜುನ್ ರವಿ ಎಂದು ಗುರುತಿಸಲಾಗಿದೆ. ಈತ ಕಳೆದ ಮೇ 10 ರಂದು ತನ್ನ ತಂದೆಯ ಮೇಲೆ ಹಲ್ಲೆ ನಡೆಸಿದ್ದ.
ಅದೇ ರೀತಿ ಸಂಬಂಧವಿಲ್ಲದ ಘಟನೆಯಲ್ಲಿ, ಅರ್ಜುನ್ ನವೆಂಬರ್ 2023 ರಲ್ಲಿ ಲಿಟಲ್ ಇಂಡಿಯಾ ಎನ್‌ಕ್ಲೇವ್‌ನಲ್ಲಿ 24 ವರ್ಷದ ಮಹಿಳೆಗೆ ಕಿರುಕುಳ ನೀಡಿದ್ದ ಆರೋಪ ಎದುರಿಸುತ್ತಿದ್ದರು.
ಡೆಪ್ಯುಟಿ ಪಬ್ಲಿಕ್ ಪ್ರಾಸಿಕ್ಯೂಟರ್ (ಡಿಪಿಪಿ) ಝೌ ಯಾಂಗ್ ಈ ಎರಡು ಘಟನೆ ಕುರಿತಂತೆ ನ್ಯಾಯಾಲಯಕ್ಕೆ ಸಲ್ಲಿಸಿದ ಸಾಕ್ಷಿ ಮೇರೆಗೆ ಅರ್ಜುನ್‌ಗೆ ಶಿಕ್ಷೆ ವಿಧಿಸಲಾಗಿದೆ.