Monday, November 25, 2024
Homeಅಂತಾರಾಷ್ಟ್ರೀಯ | Internationalಅಮೆರಿಕದಲ್ಲಿ ಮತ್ತೊಬ್ಬ ಭಾರತೀಯ ಗುಂಡೇಟಿಗೆ ಬಲಿ

ಅಮೆರಿಕದಲ್ಲಿ ಮತ್ತೊಬ್ಬ ಭಾರತೀಯ ಗುಂಡೇಟಿಗೆ ಬಲಿ

ವಾಷಿಂಗ್ಟನ್, ಜು.21 (ಪಿಟಿಐ) ಅಮೆರಿಕದ ಇಂಡಿಯಾನಾ ರಾಜ್ಯದಲ್ಲಿ 29 ವರ್ಷದ ನವವಿವಾಹಿತ ಭಾರತೀಯ ಮೂಲದ ವ್ಯಕ್ತಿಯೊಬ್ಬರನ್ನು ಪತ್ನಿಯ ಎದುರೇ ಗುಂಡಿನ ದಾಳಿ ನಡೆಸಿ ಹತ್ಯೆಗೈದಿದ್ದಾರೆ. ಭಾರತೀಯ ಮೂಲದ ಗವಿನ್ ದಸೌರ್ ಸಾವಿಗೀಡಾದ ವ್ಯಕ್ತಿ ಎಂದು ಗುರುತಿಸಲಾಗಿದೆ. ಆತ ತನ್ನ ಮೆಕ್ಸಿಕನ್ ಪತ್ನಿಯೊಂದಿಗೆ ಮನೆಗೆ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ.

ಆಗ್ರಾ ಮೂಲದ ದಸೌರ್ ಕೇವಲ ಎರಡು ವಾರಗಳ ಹಿಂದಷ್ಟೆ ಮೆಕ್ಸಿಕನ್ ಮಹಿಳೆ ವಿವಿಯಾನಾ ಝಮೋರಾ ಅವರನ್ನು ವಿವಾಹವಾಗಿದ್ದರು ಎಂದು ಇಂಡಿಯಾನಾಪೊಲಿಸ್ ಪೊಲೀಸ್ ಇಲಾಖೆ ಅಧಿಕಾರಿ ಅಮಂಡಾ ಹಿಬ್ಶ್‍ಮನ್ ತಿಳಿಸಿದ್ದಾರೆ. ಕಪ್ಪು ಹೋಂಡಾ ಕಾರಿನಲ್ಲಿ ತೆರಳುತ್ತಿದ್ದ ದಸೌರ್ ಟ್ರಕ್ ಚಾಲಕನೊಂದಿಗೆ ರಸ್ತೆ ಅಪಘಾತ ವಿಚಾರ ಕುರಿತಂತೆ ಮಾತಿನ ಚಕಮಕಿ ನಡೆಯುತ್ತಿದ್ದಾಗ ಚಾಲಕ ಆತನ ಮೇಲೆ ಗುಂಡು ಹಾರಿಸಿ ಪರಾರಿಯಾದ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಗುಂಡೇಟಿನಿಂದ ತೀವ್ರವಾಗಿ ಗಾಯಗೊಂಡಿದ್ದ ದಸೌರ್ ಅವರನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಅವರು ಕಷ್ಟಪಟ್ಟು ದುಡಿಯುವ ವ್ಯಕ್ತಿಯಾಗಿದ್ದು, ಯಾರಿಗಾದರೂ ಸಹಾಯ ಮಾಡಲು ಯಾವಾಗಲೂ ಹೊರಡುತ್ತಾರೆ ಮತ್ತು ನನಗೆ ಮತ್ತು ಅವರ ಕುಟುಂಬಕ್ಕೆ ಜಗತ್ತನ್ನು ನೀಡಲು ಬಯಸಿದ್ದರು ಎಂದು ಆತನ ಪತ್ನಿ ತಿಳಿಸಿದ್ದಾರೆ.

RELATED ARTICLES

Latest News