Wednesday, September 3, 2025
Homeರಾಷ್ಟ್ರೀಯ | Nationalಸೆ.30ರವರೆಗೆ ಜಮ್ಮು ಮತ್ತು ಕತ್ರಾ ನಡುವೆ ರೈಲುಗಳ ಸಂಚಾರ ರದ್ದು

ಸೆ.30ರವರೆಗೆ ಜಮ್ಮು ಮತ್ತು ಕತ್ರಾ ನಡುವೆ ರೈಲುಗಳ ಸಂಚಾರ ರದ್ದು

Indian Railways cancels 68 trains till Sept 30 in Jammu due to rains, IMD predicts more showers

ಶ್ರೀನಗರ,ಸೆ.3- ದಕ್ಷಿಣ ಭಾರತದಲ್ಲಿ ಮಳೆಯ ಅಬ್ಬರ ಕಡಿಮೆಯಾಗಿದ್ದರೂ ಈಶಾನ್ಯ ಭಾರತದಲ್ಲಿ ಭಾರೀ ಮಳೆಯಾಗುತ್ತಿದೆ. ಹೀಗಾಗಿ ಸೆ.30ರವರೆಗೆ ಜಮ್ಮು ಮತ್ತು ಕತ್ರಾ ನಿಲ್ದಾಣದಿಂದ ಬರುವ 68 ಒಳ-ಹೊರಹೋಗುವ ರೈಲುಗಳನ್ನು ರದ್ದುಗೊಳಿಸಲಾಗಿದ್ದು, ಈಗಾಗಲೇ ರದ್ದುಗೊಂಡಿದ್ದ 24 ರೈಲುಗಳು ಪುನರಾರಂಭಗೊಳ್ಳಲಿವೆ ಎಂದು ಭಾರತೀಯ ರೈಲ್ವೆ ತಿಳಿಸಿದೆ.

ಭಾರೀ ಮಳೆ ಮತ್ತು ಹಠಾತ್‌ ಪ್ರವಾಹದಿಂದಾಗಿ, ಪಠಾಣ್ಕೋಟ್‌-ಜಮು ವಿಭಾಗದ ಅನೇಕ ಸ್ಥಳಗಳಲ್ಲಿ ಸಮಸ್ಯೆ ಮತ್ತು ಬಿರುಕುಗಳಿಂದಾಗಿ ಕಳೆದ ಎಂಟು ದಿನಗಳಿಂದ ಜಮು ರೈಲ್ವೆ ವಿಭಾಗದಲ್ಲಿ ಟೈಲ್‌ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಕತ್ರಾದ ಮಾತಾ ವೈಷ್ಣೋದೇವಿ ದೇಗುಲದ ಬಳಿ ಸಂಭವಿಸಿದ ಭೂಕುಸಿತದಲ್ಲಿ 34 ಜನರು ಸಾವನ್ನಪ್ಪಿದ್ದಾರೆ. ಜಮು ಪ್ರದೇಶದಲ್ಲಿ 1910ರಿಂದೀಚೆಗೆ ಬುಧವಾರದ ವೇಳೆಗೆ 380 ಮಿ.ಮೀ. ಮಳೆಯಾಗಿದ್ದು, ಅತಿಹೆಚ್ಚು ಮಳೆಯಾಗಿದೆ.

ಸಿಕ್ಕಿಬಿದ್ದ ಪ್ರಯಾಣಿಕರ ಸಂಚಾರಕ್ಕೆ ಅನುಕೂಲವಾಗುವಂತೆ, ಈ ಕೆಳಗಿನ ರೈಲು ಸೇವೆಗಳನ್ನು ನಡೆಸಲಾಗುತ್ತಿದೆ. ಜಮು ತಾವಿ-ಶ್ರೀ ಮಾತಾ ವೈಷ್ಣೋ ದೇವಿ ಕತ್ರಾ (2 ಶಟಲ್‌ ಸೇವೆಗಳು), ಜಮು ತಾವಿ-ಕೋಲ್ಕತ್ತಾ, ಮತ್ತು ಶ್ರೀ ಮಾತಾ ವೈಷ್ಣೋದೇವಿ ಕತ್ರಾ-ನವದೆಹಲಿಗೆ ಎಂದು ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ.

ಜಮು-ಕತ್ರಾ ವಿಭಾಗದಲ್ಲಿ ನಾಲ್ಕು ರೈಲುಗಳನ್ನು ಸೇರಿಸಲಾಗಿದೆ. ಸೆಪ್ಟೆಂಬರ್‌ 1ರಿಂದ 15ರವರೆಗೆ ಕಾರ್ಯನಿರ್ವಹಿಸುವ ಶಟಲ್‌ ಸೇವೆಗಾಗಿ ಜಮು-ಕತ್ರಾ ವಿಭಾಗದಲ್ಲಿ ನಾಲ್ಕು ರೈಲುಗಳನ್ನು ಸೇರಿಸಿಕೊಳ್ಳಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. ರೈಲ್ವೆಯು ಸಂಪರ್ಕ ಕ್ರಾಂತಿ ಮತ್ತು ಸೀಲ್ಡಾ ಎಕ್ಸ್ಪ್ರೆಸ್‌‍ ರೈಲುಗಳು, ಕಾಂತ್ರಿ ಎಕ್ಸ್ಪ್ರೆಸ್‌‍, ವಂದೇ ಭಾರತ್‌, ತಿರುವನಂತಪುರ ಎಕ್ಸ್ಪ್ರೆಸ್‌‍ ಮತ್ತು ಶಟಲ್‌ ಸೇವೆಗಳ ಕಾರ್ಯಾಚರಣೆಯನ್ನು ಪುನಃಸ್ಥಾಪಿಸಿದೆ.
ವಂದೇ ಭಾರತ್‌ ರೈಲು ಸೆಪ್ಟೆಂಬರ್‌ 7ರಿಂದ ಪುನರಾರಂಭಗೊಳ್ಳಲಿದೆ. ಒಟ್ಟು 5,784 ಪ್ರಯಾಣಿಕರನ್ನು ಜಮುವಿನಿಂದ ಏಳು ರೈಲುಗಳಲ್ಲಿ ಮುಂದಿನ ಪ್ರಯಾಣಕ್ಕಾಗಿ ಕರೆದೊಯ್ಯಲಾಗಿದೆ. ಸ್ಥಳೀಯರ ಸಂಚಾರಕ್ಕೆ ಅನುಕೂಲವಾಗುವಂತೆ ಎರಡು ಜೋಡಿ ರೈಲುಗಳನ್ನು ಸೇರಿಸುವ ಮೂಲಕ ಶಟಲ್‌ ಸೇವೆಗಳನ್ನು ಪ್ರಾರಂಭಿಸಲಾಗಿದೆ.

ಜಮು ಮತ್ತು ಕತ್ರಾ ನಡುವೆ ಸಿಲುಕಿರುವ ಪ್ರಯಾಣಿಕರು ಹೊರಡುತ್ತಾರೆ. ಜಮು-ಕೋಲ್ಕತ್ತಾ ಮತ್ತು ವೈಷ್ಣೋ ದೇವಿ-ನವದೆಹಲಿ ರೈಲುಗಳು ಓಡುತ್ತಿವೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಹೆಚ್ಚು ಮಳೆ ಸಾಧ್ಯತೆ:
ಮಂಗಳವಾರ ಸಂಜೆ ಕಾಶೀರದ ಹಲವಾರು ಭಾಗಗಳಲ್ಲಿ ಭಾರೀ ಮಳೆಯಾಗಿದೆ. ಮಂಗಳವಾರ ಸಂಜೆ ಕಾಶೀರ ಕಣಿವೆಯ ಹಲವು ಪ್ರದೇಶಗಳಲ್ಲಿ ಮಳೆಯಾಗಿದೆ. ಹೆಚ್ಚಿನ ಭಾಗಗಳಲ್ಲಿ ಮಳೆಯ ತೀವ್ರತೆಯು ಹಗುರದಿಂದ ಮಧ್ಯಮವಾಗಿದ್ದು, ದಕ್ಷಿಣ ಕಾಶೀರದ ಕೆಲವು ಪ್ರದೇಶಗಳಲ್ಲಿ ಭಾರೀ ಮಳೆಯಾಗಿದೆ. ಇಂದು ಕೂಡ ಭಾರೀ ಮಳೆಯಾಗಲಿದ್ದು, ಜಮು ಕಾಶೀರದಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರತಿಕೂಲ ಹವಾಮಾನ ಮುನ್ಸೂಚನೆಯ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಎಲ್ಲಾ ಇಲಾಖೆಗಳು ಕಟ್ಟೆಚ್ಚರವಹಿಸಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ, ಆದರೆ ಇಲ್ಲಿಯವರೆಗೆ ಝೀಲಂ ನದಿ ಮತ್ತು ಕಣಿವೆಯಲ್ಲಿರುವ ಇತರ ಜಲಮೂಲಗಳು ಪ್ರವಾಹ ಎಚ್ಚರಿಕೆ ಮಟ್ಟಕ್ಕಿಂತ ಕಡಿಮೆಹರಿಯುತ್ತಿವೆ.

RELATED ARTICLES

Latest News