Sunday, April 20, 2025
Homeಅಂತಾರಾಷ್ಟ್ರೀಯ | Internationalಕೆನಡಾದಲ್ಲಿ ಗುಡಿಕ್ಕಿ ಭಾರತೀಯ ವಿದ್ಯಾರ್ಥಿನಿ ಹತ್ಯೆ

ಕೆನಡಾದಲ್ಲಿ ಗುಡಿಕ್ಕಿ ಭಾರತೀಯ ವಿದ್ಯಾರ್ಥಿನಿ ಹತ್ಯೆ

Indian student, 21, killed by stray bullet in Canada

ನ್ಯೂಯಾರ್ಕ್‌, ಏ.19– ಕೆನಡಾದಲ್ಲಿ ಮತ್ತೊರ್ವ 21 ವರ್ಷದ ಭಾರತೀಯ ವಿದ್ಯಾರ್ಥಿನಿ ಗುಂಡೇಟಿಗೆ ಬಲಿಯಾಗಿದ್ದಾರೆ. ಭಾರತೀಯ ಮಹಿಳೆ ಹರ್ಸಿಮ್ರತ್‌ ರಾಂಧವ ಅವರು ಕಾಲೇಜಿಗೆ ತೆರಳಲು ಬಸ್‌‍ ನಿಲ್ದಾಣದಲ್ಲಿ ಕಾಯುತ್ತಿದ್ದಾಗ ಕಾರಿನಲ್ಲಿ ಬಂದ ಕೆಲವರು ಗುಂಡು ಹಾರಿಸಿ ಪರಾರಿಯಾಗಿದ್ದಾರೆ.

ಹರ್ಸಿಮ್ರತ್‌ ರಾಂಧವ ಒಂಟಾರಿಯೊದ ಹ್ಯಾಮಿಲ್ಟನ್‌ಲ್ಲಿರುವ ಮೊಹಾಕ್‌ ಕಾಲೇಜಿನ ವಿದ್ಯಾರ್ಥಿಯಾಗಿದ್ದರು. ಈ ನರಹತ್ಯೆಯ ಬಗ್ಗೆ ಹ್ಯಾಮಿಲ್ಟನ್‌ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಒಂಟಾರಿಯೊದ ಹ್ಯಾಮಿಲ್ಟನ್‌ನಲ್ಲಿ ಭಾರತೀಯ ವಿದ್ಯಾರ್ಥಿ ಹರ್ಸಿಮ್ರತ್‌ ರಾಂಧವ ಅವರ ದುರಂತ ಸಾವಿನಿಂದ ನಾವು ತೀವ್ರ ದುಃಖಿತರಾಗಿದ್ದೇವೆ ಎಂದು ಟೊರೊಂಟೊದಲ್ಲಿನ ಭಾರತೀಯ ಕಾನ್ಸುಲೇಟ್‌ ಜನರಲ್‌ ಪೋಸ್ಟ್‌ ಮಾಡಿದ್ದಾರೆ.

ಸ್ಥಳೀಯ ಪೊಲೀಸರ ಪ್ರಕಾರ, ಅವಳು ಮುಗ್ಧ ಬಲಿಪಶುವಾಗಿದ್ದು, ಎರಡು ವಾಹನಗಳನ್ನು ಒಳಗೊಂಡ ಶೂಟಿಂಗ್‌ ಘಟನೆಯ ಸಮಯದಲ್ಲಿ ದಾರಿತಪ್ಪಿದ ಗುಂಡಿನಿಂದ ಮಾರಣಾಂತಿಕವಾಗಿ ಗಾಯಗೊಂಡಳು. ಪ್ರಸ್ತುತ ನರಹತ್ಯೆ ತನಿಖೆ ನಡೆಯುತ್ತಿದೆ. ನಾವು ಅವರ ಕುಟುಂಬದೊಂದಿಗೆ ನಿಕಟ ಸಂಪರ್ಕದಲ್ಲಿದ್ದೇವೆ ಮತ್ತು ಅಗತ್ಯವಿರುವ ಎಲ್ಲಾ ಸಹಾಯವನ್ನು ನೀಡುತ್ತಿದ್ದೇವೆ.

ಈ ಕಷ್ಟದ ಸಮಯದಲ್ಲಿ ನಮ್ಮ ಆಲೋಚನೆಗಳು ಮತ್ತು ಪ್ರಾರ್ಥನೆಗಳು ದುಃಖಿತ ಕುಟುಂಬದೊಂದಿಗೆ ಇವೆ ಎಂದು ಅಧಿಕಾರಿ ಹೇಳಿದರು.ಸ್ಥಳೀಯ ಕಾಲಮಾನ ಸಂಜೆ 7.30ರ ಸುಮಾರಿಗೆ ಈ ಘಟನೆ ನಡೆದಿದೆ ಎಂದು ಹ್ಯಾಮಿಲ್ಟನ್‌ ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

RELATED ARTICLES

Latest News