ನ್ಯೂಯಾರ್ಕ್, ಮಾ.20- ಇಸ್ರೇಲ್‌ಗೆ ಸಂಬಂಧಿಸಿದಂತೆ ಅಮೆರಿಕದ ವಿದೇಶಾಂಗ ನೀತಿಯನ್ನು ವಿರೋಧಿಸಿದ ಆರೋಪದ ಮೇಲೆ ಅಮೆರಿಕದಲ್ಲಿ ಭಾರತೀಯ ಪ್ರಜೆಯನ್ನು ಫೆಡರಲ್ ವಲಸೆ ಅಧಿಕಾರಿಗಳು ಬಂಧಿಸಿದ್ದಾರೆ .
ಬಾದರ್ ಖಾನ್ ಸೂರಿ ಬಂಧಿತ ವಿದ್ಯಾರ್ಥಿ, ವಾಷಿಂಗ್ಟನ್ ಯ ಜಾರ್ಜ್ ಟೌನ್ ವಿಶ್ವವಿದ್ಯಾಲಯದ ಎಡ್ಕಂಡ್ ಎ ವಾಲ್ಸ್ ಸ್ಕೂಲ್ ಆಫ್ ಫಾರಿನ್ ಸರ್ವಿಸ್‌ನಲ್ಲಿ ಅಲ್ವಾಲೀದ್ ಬಿನ್ ತಲಾಲ್ ಸೆಂಟರ್ ಫಾರ್ ಮುಸ್ಲಿಂ-ಕ್ರಿಶ್ಚಿಯನ್ ಅಂಡರ್ ಸ್ಟಾಂಡಿಂಗ್‌ನಲ್ಲಿ ಪೋಸ್ಟ್ ಡಾಕ್ಟರಲ್ ಫೆಲೋ ಆಗಿದ್ದಾರೆ.
ವಿದ್ಯಾರ್ಥಿ ವೀಸಾದಲ್ಲಿ ಅಧ್ಯಯನ ಮತ್ತು ಬೋಧನೆ ಮಾಡುತ್ತಿದ್ದ ಸೂರಿಯನ್ನು ಅಮೆರಿಕದ ವಿದೇಶಾಂಗ ನೀತಿಯನ್ನು ವಿರೋಧಿಸುತ್ತಿದ್ದಾರೆ ಎಂದು ಸರ್ಕಾರ ಆರೋಪಿಸಿದೆ.
ವಿದ್ಯಾರ್ಥಿ ಕಾರ್ಯಕರ್ತರ ಮೇಲೆ ಟ್ರಂಪ್ ಆಡಳಿತದ ದಮನದ ಮಧ್ಯೆ ಫೆಡರಲ್ ವಲಸೆ ಅಧಿಕಾರಿಗಳು ಬಂಧಿಸಿದ್ದಾರೆ ಎಂದು ಪೊಲಿಟಿಕೊದಲ್ಲಿ ವರದಿಯಾಗಿದೆ. ಸೋಮವಾರ ರಾತ್ರಿ ವರ್ಜೀನಿಯಾದ ಅವರ ಮನೆಯ ಹೊರಗೆ ಸೂರಿಯನ್ನು ಏಜೆಂಟ್‌ಗಳು ಬಂಧಿಸಿದ್ದಾರೆ ಎಂದು ವರದಿ ಹೇಳಿದೆ