Thursday, November 21, 2024
Homeಅಂತಾರಾಷ್ಟ್ರೀಯ | Internationalಕೆನಡಾದಲ್ಲಿ ಕ್ಷೀಣಿಸಿದ ಭಾರತೀಯ ವಿದ್ಯಾರ್ಥಿಗಳ ಸಂಖ್ಯೆ

ಕೆನಡಾದಲ್ಲಿ ಕ್ಷೀಣಿಸಿದ ಭಾರತೀಯ ವಿದ್ಯಾರ್ಥಿಗಳ ಸಂಖ್ಯೆ

ಒಟ್ಟಾವಾ,ಜ.17- ಕೆನಡಾದಲ್ಲಿ ವಿದ್ಯಾಭ್ಯಾಸ ಮಾಡುವ ಭಾರತೀಯ ವಿದ್ಯಾರ್ಥಿಗಳ ಸಂಖ್ಯೆ ಕ್ಷಿಣಿಸತೊಡಗಿದೆ.
ಕೆನಡಾದಲ್ಲಿ ಖಲಿಸ್ತಾನಿ ಭಯೋತ್ಪಾದಕನ ಹತ್ಯೆಯ ರಾಜತಾಂತ್ರಿಕ ವಿವಾದದ ನಂತರ ಭಾರತವು ಕೆನಡಾದ ರಾಜತಾಂತ್ರಿಕರನ್ನು ಹೊರಹಾಕಿದ ನಂತರ ಭಾರತೀಯ ವಿದ್ಯಾರ್ಥಿಗಳಿಗೆ ಕೆನಡಾ ನೀಡಿದ ಅಧ್ಯಯನ ಪರವಾನಗಿಗಳ ಸಂಖ್ಯೆ ಕಳೆದ ವರ್ಷ ತೀವ್ರವಾಗಿ ಕುಸಿದಿದೆ ಎಂದು ತಿಳಿದುಬಂದಿದೆ.

ವಲಸೆ ಸಚಿವ ಮಾರ್ಕ್ ಮಿಲ್ಲರ್ ಸಂದರ್ಶನವೊಂದರಲ್ಲಿ ಭಾರತದೊಂದಿಗಿನ ನಮ್ಮ ಸಂಬಂಧವು ನಿಜವಾಗಿಯೂ ಬಹಳಷ್ಟು ಅರ್ಜಿಗಳನ್ನು ಪ್ರಕ್ರಿಯೆಗೊಳಿಸುವ ನಮ್ಮ ಸಾಮಥ್ರ್ಯವನ್ನು ಅರ್ಧದಷ್ಟು ಕಡಿಮೆ ಮಾಡಿದೆ ಎಂದು ತಿಳಿಸಿದ್ದಾರೆ. ಆ ಅಂಶಗಳು ಹಿಂದಿನ ತ್ರೈಮಾಸಿಕದಿಂದ ಕಳೆದ ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ ಭಾರತೀಯರಿಗೆ ನೀಡಲಾದ ಅಧ್ಯಯನ ಪರವಾನಗಿಗಳಲ್ಲಿ ಶೇ.86ರಷ್ಟು ಕುಸಿತಕ್ಕೆ ಕಾರಣವಾಗಿದೆ.

ಬಿಹಾರದ 94 ಲಕ್ಷ ಕುಟುಂಬಗಳಿಗೆ ತಲಾ 2 ಲಕ್ಷ ರೂ.ಆರ್ಥಿಕ ನೆರವು

ಒಟ್ಟಾವಾದಲ್ಲಿರುವ ಭಾರತದ ಹೈ ಕಮಿಷನ್‍ನ ಸಲಹೆಗಾರ ಸಿ. ಗುರುಸ್ ಉಬ್ರಮಣಿಯನ್ ಅವರು, ಕೆಲವು ಭಾರತೀಯ ಅಂತರರಾಷ್ಟ್ರೀಯ ವಿದ್ಯಾರ್ಥಿಗಳು ಕೆನಡಾದ ಕೆಲವು ಸಂಸ್ಥೆಗಳಲ್ಲಿ ವಸತಿ ಮತ್ತು ಸಾಕಷ್ಟು ಬೋಧನಾ ಸೌಲಭ್ಯಗಳ ಕೊರತೆಯಿಂದಾಗಿ ಇತ್ತೀಚಿನ ದಿನಗಳಲ್ಲಿ ಕೆನಡಾವನ್ನು ಹೊರತುಪಡಿಸಿ ಇತರ ದೇಶಗಳ ಆಯ್ಕೆಗಳನ್ನು ನೋಡುತ್ತಿದ್ದಾರೆ ಎಂದು ಹೇಳಿದರು.

ಇತ್ತೀಚಿನ ವರ್ಷಗಳಲ್ಲಿ ಭಾರತೀಯರು ಕೆನಡಾದಲ್ಲಿ ಅತಿ ದೊಡ್ಡ ಅಂತರರಾಷ್ಟ್ರೀಯ ವಿದ್ಯಾರ್ಥಿಗಳ ಗುಂಪನ್ನು ರಚಿಸಿದ್ದರು ಅಂತರರಾಷ್ಟ್ರೀಯ ವಿದ್ಯಾರ್ಥಿಗಳು ಕೆನಡಾದ ವಿಶ್ವವಿದ್ಯಾನಿಲಯಗಳಿಗೆ ನಗದು ಹಸುವಾಗಿದ್ದು, ಅವರು ವಾರ್ಷಿಕವಾಗಿ ಸುಮಾರು 22 ಶತಕೋಟಿ (16.4 ಶತಕೋಟಿ) ಆದಾಯ ತರುತ್ತಿದ್ದರು ಎನ್ನಲಾಗಿದೆ.

ಕೆನಡಾದ ಸರ್ಕಾರವು ದೇಶಕ್ಕೆ ಪ್ರವೇಶಿಸುವ ಒಟ್ಟಾರೆ ಅಂತರರಾಷ್ಟ್ರೀಯ ವಿದ್ಯಾರ್ಥಿಗಳ ಸಂಖ್ಯೆಯನ್ನು ಕಡಿಮೆ ಮಾಡಲು ಪ್ರಯತ್ನಿಸುತ್ತಿದೆ, ಭಾಗಶಃ ನಡೆಯುತ್ತಿರುವ ವಸತಿ ಕೊರತೆಗೆ ಪ್ರತಿಕ್ರಿಯೆಯಾಗಿ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಸಬೂಬು ಹೇಳುತ್ತಿದೆ.

RELATED ARTICLES

Latest News