ನ್ಯೂಯಾರ್ಕ್,ಏ.3- ಅಮೆರಿಕ ಅಧ್ಯಕ್ಷ ಡೊನಾಲ್‌್ಡ ಟ್ರಂಪ್ ವಿಧಿಸಿರುವ ಪರಸ್ಪರ ಸುಂಕಗಳನ್ನು ಟೀಕಿಸಿರುವ ಅಮೆರಿಕ ಕಾಂಗ್ರೆಸ್‌ನ ಭಾರತೀಯ-ಅಮೆರಿಕನ್ ಸದಸ್ಯರು ಮತ್ತು ವಲಸಿಗ ಸಮುದಾಯವು, ಅವುಗಳನ್ನು ಅಜಾಗರೂಕ ಮತ್ತು ಸ್ವಯಂ ವಿನಾಶಕಾರಿ ಎಂದು ಕರೆದಿದ್ದು, ಈ ಸವಾಲುಗಳನ್ನು ಎದುರಿಸಲು ಮಾತುಕತೆಯಲ್ಲಿ ತೊಡಗುವಂತೆ ಉಭಯ ದೇಶಗಳ ನಾಯಕರನ್ನು ಒತ್ತಾಯಿಸಿದ್ದಾರೆ.
ಟ್ರಂಪ್ ಭಾರತದ ಮೇಲೆ ಶೇ. 26 ರಷ್ಟು ರಿಯಾಯಿತಿ ಪರಸ್ಪರ ಸುಂಕ ವಿಧಿಸಿದರು.
ಭಾರತವು ನಮಗೆ ಶೇ. 52 ರಷ್ಟು ಶುಲ್ಕ ವಿಧಿಸುತ್ತದೆ, ಆದ್ದರಿಂದ ನಾವು ಅದರ ಅರ್ಧದಷ್ಟು ಶೇ. 26 ರಷ್ಟು ಶುಲ್ಕ ವಿಧಿಸುತ್ತೇವೆ ಎಂದು ಅವರು ಹೇಳಿದ್ದಾರೆ.
ಜಾಗತಿಕವಾಗಿ ವಿಧಿಸಲಾದ ಅಮೆರಿಕದ ಉತ್ಪನ್ನಗಳ ಮೇಲಿನ ಹೆಚ್ಚಿನ ಸುಂಕವನ್ನು ಎದುರಿಸುವ ಐತಿಹಾಸಿಕ ಕ್ರಮದಲ್ಲಿ ಅಧ್ಯಕ್ಷ ಟ್ರಂಪ್, ಸುಮಾರು 60 ದೇಶಗಳ ಮೇಲೆ ಪರಸ್ಪರ ಸುಂಕವನ್ನು ಘೋಷಿಸಿದ್ದಾರೆ.ಟ್ರಂಪ್ ಅವರ ಸುಂಕಗಳು ಭಾರತೀಯ ಸರಕುಗಳನ್ನು ಕಡಿಮೆ ಸ್ಪರ್ಧಾತ್ಮಕವಾಗಿಸುತ್ತದೆ ಎಂದು ಸಂಸದರು ಅಭಿಪ್ರಾಯಪಟ್ಟಿದ್ದಾರೆ.
ಟ್ರಂಪ್ ಅವರ ಸುಂಕವು ದುಡಿಯುವ ಕುಟುಂಬಗಳ ಮೇಲಿನ ತೆರಿಗೆಯಾಗಿದ್ದು, ಇದರಿಂದ ಅವರು ಶ್ರೀಮಂತ ಅಮೆರಿಕನ್ನರಿಗೆ ತೆರಿಗೆಗಳನ್ನು ಕಡಿತಗೊಳಿಸಬಹುದು ಎಂದು ಕಾಂಗ್ರೆಸ್ ಸದಸ್ಯ ರಾಜಾ ಕೃಷ್ಣಮೂರ್ತಿ ಹೇಳಿದರು.
ಈ ಇತ್ತೀಚಿನ ವಿಮೋಚನಾ ದಿನ ಸುಂಕಗಳು ಅಜಾಗರೂಕ ಮತ್ತು ಸ್ವಯಂ-ವಿನಾಶಕಾರಿಯಾಗಿದ್ದು, ಆರ್ಥಿಕ ನೋವನ್ನುಂಟುಮಾಡುತ್ತವೆ ಎಂದು ಅವರು ಮಾಹಿತಿ ನೀಡಿದ್ದಾರೆ.