Tuesday, October 8, 2024
Homeರಾಷ್ಟ್ರೀಯ | Nationalಮಾಲ್ಡೀವ್ಸ್ ಅಧ್ಯಕ್ಷ ಮೊಹಮದ್‌ ಮುಯಿಝುಗೆ ವಿದ್ಯುಕ್ತ ಸ್ವಾಗತ

ಮಾಲ್ಡೀವ್ಸ್ ಅಧ್ಯಕ್ಷ ಮೊಹಮದ್‌ ಮುಯಿಝುಗೆ ವಿದ್ಯುಕ್ತ ಸ್ವಾಗತ

ನವದೆಹಲಿ, ಅ. 7 (ಪಿಟಿಐ) ಮಾಲ್ಡೀವ್ಸ್ ಅಧ್ಯಕ್ಷ ಮೊಹಮದ್‌ ಮುಯಿಝು ಅವರಿಗೆ ಇಂದು ರಾಷ್ಟ್ರಪತಿ ಭವನದ ಮುಂಭಾಗದಲ್ಲಿ ವಿಧ್ಯುಕ್ತ ಸ್ವಾಗತ ಮತ್ತು ಗೌರವ ರಕ್ಷೆಯನ್ನು ನೀಡಲಾಯಿತು. ಮಾಲ್ಡೀವ್ಸ್‌‍ ಅಧ್ಯಕ್ಷರು, ಪ್ರಥಮ ಮಹಿಳೆ ಸಾಜಿದಾ ಮೊಹಮದ್‌ ಮತ್ತು ನಿಯೋಗದೊಂದಿಗೆ ನಿನ್ನೆ ಸಂಜೆ ಭಾರತಕ್ಕೆ ಆಗಮಿಸಿದರು.

ರಾಷ್ಟ್ರಪತಿ ಭವನಕ್ಕೆ ಆಗಮಿಸಿದ ಗಣ್ಯರನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಸ್ವಾಗತಿಸಿದರು. ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಕೂಡ ಉಪಸ್ಥಿತರಿದ್ದರು. ಮುಯಿಜ್ಜು ಅವರು ನಂತರ ಇಲ್ಲಿನ ರಾಜ್‌ಘಾಟ್‌ನಲ್ಲಿರುವ ಮಹಾತ್ಮ ಗಾಂಧಿ ಅವರ ಸ್ಮಾರಕದಲ್ಲಿ ಮಾಲಾರ್ಪಣೆ ಮಾಡುವ ಮೂಲಕ ಗೌರವ ಸಲ್ಲಿಸಿದರು. ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಕೀರ್ತಿ ವರ್ಧನ್‌ ಸಿಂಗ್‌ ಅವರೊಂದಿಗೆ ರಾಜ್‌ಘಾಟ್‌ಗೆ ತೆರಳಿದರು.


ಈ ಭೇಟಿಯು ಭಾರತ-ಮಾಲ್ಡೀವ್ಸ್ ನ ಈ ದೀರ್ಘಾವಧಿಯ ಸಮಗ್ರ ದ್ವಿಪಕ್ಷೀಯ ಪಾಲುದಾರಿಕೆಗೆ ಮತ್ತಷ್ಟು ಉತ್ತೇಜನ ನೀಡಲಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೇಳಿದೆ. ಮಾಲ್ಡೀವ್‌್ಸ ಅಧ್ಯಕ್ಷರು ಜೂನ್‌ನಲ್ಲಿ ಪ್ರಧಾನಿ ಮೋದಿಯವರ ಪ್ರಮಾಣವಚನ ಸಮಾರಂಭದಲ್ಲಿ ಭಾಗವಹಿಸಿದ್ದರೂ, ಇದು ಭಾರತಕ್ಕೆ ಅವರ ಮೊದಲ ದ್ವಿಪಕ್ಷೀಯ ಭೇಟಿಯಾಗಿದೆ. ವಿದೇಶಾಂಗ ವ್ಯವಹಾರಗಳ ಸಚಿವ ಎಸ್‌‍ ಜೈಶಂಕರ್‌ ಅವರು ಮುಯಿಝು ಅವರನ್ನು ಭೇಟಿ ಮಾಡಿದರು ಮತ್ತು ಪ್ರಧಾನಿ ಮೋದಿಯವರೊಂದಿಗಿನ ಮುಯಿಝು ಅವರ ಮಾತುಕತೆಯು ನಮ ಸೌಹಾರ್ದ ಸಂಬಂಧಗಳಿಗೆ ಹೊಸ ಪ್ರಚೋದನೆಯನ್ನು ನೀಡುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಅವರ ಭೇಟಿಯ ಸಮಯದಲ್ಲಿ, ಮುಯಿಝು ಅವರು ದ್ವಿಪಕ್ಷೀಯ, ಪ್ರಾದೇಶಿಕ ಮತ್ತು ಅಂತರರಾಷ್ಟ್ರೀಯ ವಿಷಯಗಳ ಬಗ್ಗೆ ಪರಸ್ಪರ ಹಿತಾಸಕ್ತಿಗಳ ಕುರಿತು ಮೋದಿ ಅವರೊಂದಿಗೆ ಚರ್ಚೆ ನಡೆಸಲಿದ್ದಾರೆ ಎಂದು ಎಂಇಎ ತಿಳಿಸಿದೆ. ಬಳಿಕ ಹೈದರಾಬಾದ್‌ ಹೌಸ್‌‍ನಲ್ಲಿ ಸಭೆ ನಡೆಯಲಿದೆ

RELATED ARTICLES

Latest News