Tuesday, September 17, 2024
Homeರಾಷ್ಟ್ರೀಯ | Nationalಇಂಡಿ ಒಕ್ಕೂಟದ ಅಂಗ ಪಕ್ಷ ವಿಐಪಿಯ ಮುಖ್ಯಸ್ಥ ಮುಖೇಶ್‌ ಸಹಾನಿ ತಂದೆಯ ಹತ್ಯೆ

ಇಂಡಿ ಒಕ್ಕೂಟದ ಅಂಗ ಪಕ್ಷ ವಿಐಪಿಯ ಮುಖ್ಯಸ್ಥ ಮುಖೇಶ್‌ ಸಹಾನಿ ತಂದೆಯ ಹತ್ಯೆ

ಪಾಟ್ನಾ,ಜು.16- ಬಿಹಾರದಲ್ಲಿ ಇಂಡಿಯಾ ಒಕ್ಕೂಟದ ಅಂಗ ಪಕ್ಷವಾಗಿದ್ದ ವಿಕಾಸಶೀಲ್‌ ಇನ್ಸಾನ್‌ ಪಾರ್ಟಿ (ವಿಐಪಿ) ಮುಖ್ಯಸ್ಥ ಮುಖೇಶ್‌ ಸಹಾನಿ ಅವರ ತಂದೆಯನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ.

ಬಿಹಾರದ ದರ್ಬಂಗಾ ಜಿಲ್ಲೆಯಲ್ಲಿ ತಮ ಪೂರ್ವಜರ ಮನೆಯಲ್ಲಿ ಜಿತನ್‌ ಸಹಾನಿ ಅವರು ಬರ್ಬರವಾಗಿ ಹತ್ಯೆಯಾಗಿದ್ದಾರೆ. ಇಂದು ಬೆಳಗ್ಗೆ ಹಾಸಿಗೆಯ ಮೇಲೆ ಜಿತನ್‌ ಸಹಾನಿ ಅವರ ಛಿದ್ರಗೊಂಡ ಶವ ಪತ್ತೆಯಾಗಿದೆ. ಹಿರಿಯ ಪೊಲೀಸ್‌‍ ಅಧಿಕಾರಿ ಜಗನ್ನಾಥ್‌ ರೆಡ್ಡಿ ತಿಳಿಸಿದ್ದಾರೆ.
ಮಾಜಿ ಸಚಿವ ಮುಖೇಶ್‌ ಸಹಾನಿ ವಿಕಾಸಶೀಲ್‌ ಇನ್ಸಾನ್‌ ಪಾರ್ಟಿಯನ್ನು ಮುನ್ನಡೆಸುತ್ತಿದ್ದಾರೆ, ಇದು ಒಬಿಸಿ ಸಮುದಾಯದಲ್ಲಿ ಬಲವಾದ ಬೆಂಬಲವನ್ನು ಹೊಂದಿದೆ. ವಿಐಪಿ ಪ್ರಸ್ತುತ ಇಂಡಿ ಒಕ್ಕೂಟದಲ್ಲಿ ಆರ್‌ಜೆಡಿ ಮತ್ತು ಕಾಂಗ್ರೆಸ್‌‍ನೊಂದಿಗೆ ಮೈತ್ರಿ ಮಾಡಿಕೊಂಡಿದೆ.

ಯಾರೋ ಕಳ್ಳತನದ ಯೋಜನೆಯೊಂದಿಗೆ ಸಹಾನಿಗಳ ಮನೆಗೆ ನುಗ್ಗಿ ಜಿತನ್‌ ಸಹಾನಿಯನ್ನು ವಿರೋಧಿಸಿದಾಗ ಕೊಂದಿದ್ದಾರೆ ಎಂದು ಪ್ರಾಥಮಿಕ ತನಿಖೆ ಸೂಚಿಸುತ್ತದೆ ಎಂದು ಹಿರಿಯ ಪೊಲೀಸ್‌‍ ಅಧಿಕಾರಿ ಮನೀಶ್‌ ಚಂದ್ರ ಚೌಧರಿ ತಿಳಿಸಿದ್ದಾರೆ.

ಆಘಾತಕಾರಿ ಅಪರಾಧದ ತನಿಖೆಗಾಗಿ ಮೂವರು ಸದಸ್ಯರ ವಿಶೇಷ ತನಿಖಾ ತಂಡವನ್ನು ರಚಿಸಲಾಗಿದೆ ಎಂದು ಹಿರಿಯ ಅಧಿಕಾರಿ ರೆಡ್ಡಿ ಹೇಳಿದ್ದಾರೆ.ಜಿತನ್‌ ಸಹಾನಿ ಅವರ ಮನೆಯಲ್ಲಿ ನಡೆದ ಹತ್ಯೆಯ ಬಗ್ಗೆ ಪ್ರಮುಖ ಪ್ರತಿಪಕ್ಷ ಆರ್‌ಜೆಡಿ ನಿತೀಶ್‌ ಕುಮಾರ್‌ ಸರ್ಕಾರವನ್ನು ತೀವ್ರವಾಗಿ ಟೀಕಿಸಿದೆ. ಈ ಘಟನೆ ರಾಜ್ಯವನ್ನು ಬೆಚ್ಚಿ ಬೀಳಿಸಿದೆ ಎಂದು ಆರ್‌ಜೆಡಿ ವಕ್ತಾರ ಶಕ್ತಿ ಯಾದವ್‌ ಹೇಳಿದ್ದಾರೆ. ಬಿಹಾರದಲ್ಲಿ ಏನಾಗುತ್ತಿದೆ? ಒಂದು ದಿನವೂ ಕೊಲೆಯ ಸುದ್ದಿಯಿಲ್ಲ. ಬುದ್ದಿಹೀನ ಸರಕಾರ ಅಧಿಕಾರದಲ್ಲಿದೆ. ವ್ಯವಸ್ಥೆ ಕುಸಿದಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಉಪಮುಖ್ಯಮಂತ್ರಿ ಮತ್ತು ಬಿಜೆಪಿ ನಾಯಕ ಸಾವ್ರಾಟ್‌ ಚೌಧರಿ ಘಟನೆಯನ್ನು ದುರದಷ್ಟಕರ ಎಂದು ಬಣ್ಣಿಸಿದ್ದಾರೆ. ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ರಾಜ್ಯ ಸರ್ಕಾರದ ಪರವಾಗಿ ನಾನು ಭರವಸೆ ನೀಡಲು ಬಯಸುತ್ತೇನೆ. ಯಾರೇ ತಪ್ಪಿತಸ್ಥರನ್ನು ಕಂಬಿ ಹಿಂದೆ ಹಾಕಲಾಗುವುದು. ಸರ್ಕಾರವು ಮುಕೇಶ್‌ ಸಹಾನಿ ಅವರ ಕುಟುಂಬದೊಂದಿಗೆ ದಢವಾಗಿ ನಿಂತಿದೆ ಎಂದು ಅವರು ಹೇಳಿದರು.

RELATED ARTICLES

Latest News