ನವದೆಹಲಿ,ಮಾ. 2: ಭಾರತದಲ್ಲಿ ಡ್ರೋನ್ ತಂತ್ರಜ್ಞಾನ ಅಳವಡಿಕೆ ಹೆಚ್ಚಿಸಲು ಸರ್ಕಾರ ರೂಪಿಸಿದ ಹಲವು ಯೋಜನೆಗಳಲ್ಲಿ ನಮೋ ಡ್ರೋನ್ ದೀದಿ ಸ್ಟೀಮ್ ಅನ್ನು ಅಮೆರಿಕ ಪ್ರತಿಷ್ಠಿತ ಮಸಾಚುಸೆಟ್ಸ್ ಇನ್ಸ್‌ಟಿಟ್ಯೂಟ್ ಆಫ್ ಟೆಕ್ನಾಲಜಿ ಸಂಸ್ಥೆಯ ಪ್ರೊಫೆಸರ್ ಶ್ಲಾಘಿಸಿದ್ದಾರೆ. ಕೃಷಿ ಕ್ಷೇತ್ರಕ್ಕೆ ಡೋನ್ ಸೇವೆ ನೀಡುವುದು ಮಾತ್ರವಲ್ಲದೇ, ಮಹಿಳಾ ಸಬಲೀಕರಣದ ಪ್ರಯತ್ನಕ್ಕೂ ಈ ಯೋಜನೆ ಪೂರಕವಾಗಿದೆ. ಈ ನಮೋ ಡೋನ್ ದೀದಿ ಯೋಜನೆ ಅದ್ಭುತ ಎಂದು ಎಂಐಟಿ ಶಿಕ್ಷಣ ಸಂಸ್ಥೆಯ ಪ್ರೊಫೆಸರ್ ಜೋನೇತನ್ ಫೆಮಿಂಗ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ದೆಹಲಿಯ ಐಸಿಎಆರ್ ಪುಸಾ ಕ್ಯಾಂಪಸ್‌ನಲ್ಲಿ ನಮೋ ಡೋನ್ ದೀದಿಯವರೊಂದಿಗೆ ನಿನ್ನೆ ಸಂವಾದದಲ್ಲಿ ತೊಡಗಿದ್ದ ಫೆಮಿಂಗ್ ಅವರು, ಭಾರತದಲ್ಲಿ ಮಹಿಳಾ ಸಬಲೀಕರಣ ಸಾಧಿಸಲು ಸರ್ಕಾರ ಮಾಡುತ್ತಿರುವ ಪ್ರಯತ್ನಗಳನ್ನು ಮೆಚ್ಚಿಕೊಂಡರು.
ಹೊಸ ತಂತ್ರಜ್ಞಾನ ಬಳಕೆಗೆ ಮಹಿಳೆಯರಿಗೆ ತರಬೇತಿ ನೀಡಲಾಗುತ್ತಿರುವ ಪ್ರಕ್ರಿಯೆ ಬಗ್ಗೆ ಜೋನೇತನ್ ಪ್ಲೆಮಿಂಗ್ ಸಕಾರಾತ್ಮಕ ಅನಿಸಿಕೆ ವ್ಯಕ್ತಪಡಿಸಿದರು. ಭಾರತದ ಗ್ರಾಮೀಣ ಪ್ರದೇಶದ ಅಭಿವೃದ್ಧಿಪಡಿಸಲು ಸಹಕಾರಿಯಾಗಿರುವ ಹಾಗು ಗ್ರಾಮೀಣ ಮಹಿಳೆಯರನ್ನು ಸಬಲೀಕರಣಗೊಳಿಸುವ ಈ ಉಪಕ್ರಮವು ಇತರ ದೇಶಗಳಿಗೂ ಉತ್ತಮ ಮಾದರಿಯಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ಕೃಷಿ ಜಮೀನಿನಲ್ಲಿ ಬೆಳೆಗಳಿಗೆ ರಸಗೊಬ್ಬರ ಮತ್ತು ಕೀಟನಾಶಕಗಳನ್ನು ಸಿಂಪಡಿಸುವುದು ತುಸು ಕಷ್ಟದ ಕೆಲಸ. ಡೋನ್ ಮೂಲಕ ಇವುಗಳನ್ನು ಬೆಳೆಗಳಿಗೆ ಹೇಗೆ ಸಿಂಪಡಿಸಲಾಗುತ್ತದೆ. ಇದರಿಂದ ರೈತರಿಗೆ ಕೂಲಿಗೆ ವೆಚ್ಚ ಮಾಡುವುದು ಹೇಗೆ ತಪ್ಪುತ್ತದೆ ಎಂಬುದನ್ನು ಡೋನ್ ದೀದಿಯರು ಎಂಐಟಿ ಪ್ರೊಫೆಸರ್‌ಗೆ ತಿಳಿಸಿದರು.
ಗೀತಾ, ಸೀತಾ, ಪ್ರಿಯಾಂಕಾ ಮತ್ತು ಹೇಮಲತಾ ಎನ್ನುವ ಡೋನ್ ದೀದಿಯರು ಡೋನ್ ಬಳಕೆ ಹೇಗೆಂದು ಸ್ವತಃ ಪ್ರಯೋಗ ಮಾಡಿ ತೋರ್ಪಡಿಸಿದರು. ಡೋನ್ ದೀದಿಯರೊಂದಿಗೆ ಸಂವಾದದ ಬಳಿಕ ಜೋನೇತನ್ ಪ್ಲೆಮಿಂಗ್ ಅವರು ದೆಹಲಿಯ ಐಆರ್‌ಎಐನಲ್ಲೇ ಇರುವ ಡೋನ್ ರೋಬೋಟಿಕ್ ಮತ್ತು ಮೆಷಿನ್ ಲರ್ನಿಂಗ್ ಕೇಂದ್ರಕ್ಕೂ ಭೇಟಿ ನೀಡಿದ್ದರು. ಅಲ್ಲಿ ಸಾಂಪ್ರದಾಯಿಕ ಕೃಷಿಗಾರಿಕೆಗೂ, ತಂತ್ರಜ್ಞಾನ ಬಳಕೆಯಾಧಾರಿತ ಕೃಷಿಗಾರಿಕೆಗೂ ಇರುವ ವ್ಯತ್ಯಾಸವನ್ನು ತೋರಿಸಲಾಯಿತು.