Friday, November 22, 2024
Homeಕ್ರೀಡಾ ಸುದ್ದಿ | Sportsಟಿ20 ವಿಶ್ವಕಪ್ ಗೆದ್ದ ಟೀಮ್ ಇಂಡಿಯಾ : ದೇಶದಾದ್ಯಂತ ರಾತ್ರಿಯಿಡೀ ಸಂಭ್ರಮಾಚರಣೆ

ಟಿ20 ವಿಶ್ವಕಪ್ ಗೆದ್ದ ಟೀಮ್ ಇಂಡಿಯಾ : ದೇಶದಾದ್ಯಂತ ರಾತ್ರಿಯಿಡೀ ಸಂಭ್ರಮಾಚರಣೆ

ಮುಂಬೈ, ಜೂ.30 (ಪಿಟಿಐ) ವೆಸ್ಟ್‌ ಇಂಡೀಸ್‌‍ನಲ್ಲಿ ನಡೆದ ಟಿ20 ಫೈನಲ್‌ ಪಂದ್ಯದಲ್ಲಿ ಭಾರತ ಕ್ರಿಕೆಟ್‌ ತಂಡ ಅಭೂತಪೂರ್ವ ಗೆಲುವು ಸಾಧಿಸುತ್ತಿದ್ದಂತೆ ತಡರಾತ್ರಿ ದೇಶದಾದ್ಯಂತ ಅಭಿಮಾನಿಗಳು ಸಂಭ್ರಮಾಚರಣೆ ನಡೆಸಿದ್ದಾರೆ.ಬೆಂಗಳೂರು, ದೆಹಲಿ, ಮುಂಬೈ ಸೇರಿದಂತೆ ದೇಶದ ಹಲವಾರು ನಗರಗಳಲ್ಲಿ ತ್ರಿವರ್ಣ ಧ್ವಜ ಹಿಡಿದು ಬೀದಿಗಿಳಿದ ಅಭಿಮಾನಿಗಳು ಭಾರತ ಮಾತಾಕೀ ಜೈ ಎಂದು ಘೋಷಣೆ ಕೂಗುವ ಮೂಲಕ ಮೆನ್‌ ಇನ್‌ ಬ್ಲೂ ಬಾಯ್‌್ಸಗಳನ್ನು ಹುರಿದುಂಬಿಸಿದರು.

ಜಮು, ಹೈದರಾಬಾದ್‌, ಪಾಟ್ನಾ ಅಥವಾ ಪುಣೆಯೇ ಆಗಿರಲಿ, ಕ್ರಿಕೆಟ್‌ ಆಟವನ್ನು ಧಾರ್ಮಿಕವಾಗಿ ಅನುಸರಿಸುವ ಮತ್ತು ಅದರ ಆಟಗಾರರನ್ನು ಆರಾಧಿಸುವ ಕೋಟ್ಯಂತರ ಕ್ರಿಕೆಟ್‌ ಅಭಿಮಾನಿಗಳಿಗೆ ವಿಶ್ವ ಪ್ರಶಸ್ತಿಗಾಗಿ ರಾಷ್ಟ್ರದ 13 ವರ್ಷಗಳ ಕಾಯುವಿಕೆ ಕೊನೆಗೊಂಡಿದ್ದರಿಂದ ಪರಸ್ಪರ ತಬ್ಬಿಕೊಳ್ಳುವುದು ಮತ್ತು ನತ್ಯ ಮಾಡುವುದು ಎಲ್ಲೆಡೆ ಕಂಡುಬಂದಿದೆ.

ಬಾರ್ಬಡೋಸ್‌‍ನಲ್ಲಿ ಭಾರತವು ದಕ್ಷಿಣ ಆಫ್ರಿಕಾವನ್ನು ಮಣಿಸಿದ ಕೂಡಲೇ ನಮ ಕ್ರಿಕೆಟಿಗರು ಕೋಟ್ಯಂತರ ಭಾರತೀಯರ ಹದಯವನ್ನು ಗೆದ್ದಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಎಕ್‌್ಸ ಮಾಡಿದ್ದಾರೆ.

ಚಾಂಪಿಯನ್‌ಗಳು! ನಮ ತಂಡವು ಟಿ20 ವಿಶ್ವಕಪ್‌ ಅನ್ನು ಸ್ಟೈಲ್‌ನಲ್ಲಿ ಮನೆಗೆ ತರುತ್ತದೆ! ನಾವು ಭಾರತೀಯ ಕ್ರಿಕೆಟ್‌ ತಂಡದ ಬಗ್ಗೆ ಹೆಮೆಪಡುತ್ತೇವೆ ಎಂದಿರುವ ಮೋದಿ ಪಂದ್ಯವನ್ನು ಐತಿಹಾಸಿಕ ಎಂದು ಬಣ್ಣಿಸಿದ್ದಾರೆ.

ಪಂದ್ಯವು ಬಾರ್ಬಡೋಸ್‌‍ನಲ್ಲಿ 11.30 ಕ್ಕೆ ಕೊನೆಗೊಂಡ ತಕ್ಷಣ, ಲಕ್ಷಾಂತರ ಅಭಿಮಾನಿಗಳು ಬೀದಿಗಿಳಿದು ಪಟಾಕಿ ಸಿಡಿಸಿ ಸಂಭ್ರಮಿಸಿದರು ಮಾತ್ರವಲ್ಲ, ಮಧ್ಯರಾತ್ರಿಯ ನಂತರ ಗಂಟೆಗಳವರೆಗೆ ಸಂಭ್ರಮಾಚರಣೆಗಳು ಮುಂದುವರೆದವು.

ದೆಹಲಿಯಲ್ಲಿ, ಈ ಸಂದರ್ಭವನ್ನು ಆಚರಿಸಲು ಹೆಚ್ಚಿನ ಸಂಖ್ಯೆಯ ಜನರು ಇಂಡಿಯಾ ಗೇಟ್‌ನಲ್ಲಿ ಜಮಾಯಿಸಿದರು. ಮುಂಬೈ ವಿಮಾನ ನಿಲ್ದಾಣದಲ್ಲಿ, ಅಭಿಮಾನಿಗಳು ಡ್ರಮ್‌ಗಳ ಬೀಟ್‌ಗಳಿಗೆ ನತ್ಯ ಮಾಡುತ್ತಿರುವುದು ಕಂಡುಬಂದಿತು, ಕೋಲ್ಕತ್ತಾದ ಬೀದಿಗಳು ಪಟಾಕಿಗಳು ಮತ್ತು ಅದಮ್ಯ ಅಭಿಮಾನಿಗಳ ಕೇಕೆಗಳು ಮತ್ತು ಸಿಳ್ಳೆಗಳಿಂದ ಬೆಳಗಿದವು. ಬೆಂಗಳೂರಿನಲ್ಲಿ ಟೀಂ ಇಂಡಿಯಾದ ಉಡುಗೆ ತೊಟ್ಟ ಅನೇಕ ಅಭಿಮಾನಿಗಳು ಪಬ್‌ಗಳು ಮತ್ತು ಹೊರಗಿನ ತಿನಿಸುಗಳಲ್ಲಿ ನತ್ಯ ಮಾಡುತ್ತಿರುವುದು ಕಂಡುಬಂತು.

ನಾವು ತುಂಬಾ ಭಾವಪರವಶರಾಗಿದ್ದೇವೆ. ನಾವು ಕೊನೆಯ ಬಾರಿಗೆ ಗೆದ್ದಾಗ ನಾನು ಚಿಕ್ಕವನಾಗ್ದೆಿ. ಕೂಗಾಟದಿಂದ ನನ್ನ ಗಂಟಲು ನೋಯುತ್ತಿದೆ ಆದರೆ ನಾವು ಎರಡು ದಿನಗಳ ಕಾಲ ಸಂಭ್ರಮ ಆಚರಿಸುತ್ತೇವೆ ಎಂದು ಕ್ರಿಕೆಟ್‌ ಅಭಿಮಾನಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ.
ಜಮುವಿನಲ್ಲಿ ಯುವಕರು ಮತ್ತು ಹಿರಿಯರು ಪಟಾಕಿ ಸಿಡಿಸುವ ಮೂಲಕ ಭಾರತ್‌ ಮಾತಾ ಕಿ ಜೈ ಘೋಷಣೆಗಳೊಂದಿಗೆ ಸಂಭ್ರಮಿಸಿದರು. ಇಡೀ ದೇಶವು ಸಂಭ್ರಮಿಸುತ್ತಿದೆ. ಇದು ನಮಗೆ ದೀಪಾವಳಿ ಇದ್ದಂತೆ ಎಂದು ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದರು.

ಹೈದರಾಬಾದ್‌ನ ರಾಜ್ಯ ಸಚಿವಾಲಯದ ಹೊರಗೆ ಪಟಾಕಿಗಳು ಆಕಾಶವನ್ನು ಬೆರಗುಗೊಳಿಸುತ್ತಿದ್ದಂತೆ ಸಂಭ್ರಮದ ದಶ್ಯಗಳು ಕಂಡುಬಂದವು. ಜನರು ಉನ್ನತ ಟ್ರಕ್‌ಗಳು, ಕಾರುಗಳು ಮತ್ತು ಇತರ ವಾಹನಗಳ ಮೇಲೆ ಏರಿ ಹಾರ್ನ್‌ ಮಾಡುತ್ತ ಸಂಭ್ರಮಿಸಿದರು ಟೀಂ ಇಂಡಿಯಾದ ಎಲ್ಲಾ ಆಟಗಾರರು ಮತ್ತು ಕೋಚ್‌ ರಾಹುಲ್‌ ದ್ರಾವಿಡ್‌ ಅವರ ಕೊಡುಗೆಯನ್ನು ಹಲವರು ಶ್ಲಾಘಿಸಿದ್ದಾರೆ.

RELATED ARTICLES

Latest News