Friday, January 31, 2025
Homeರಾಷ್ಟ್ರೀಯ | Nationalಚೆಕ್ ಮಾಡಿಸಿದ್ದೇನೆ, ನನ್ನದು ಭಾರತೀಯ ಡಿಎನ್‌ಎ ; ಇಂಡೋನೇಷ್ಯಾ ಅಧ್ಯಕ್ಷ

ಚೆಕ್ ಮಾಡಿಸಿದ್ದೇನೆ, ನನ್ನದು ಭಾರತೀಯ ಡಿಎನ್‌ಎ ; ಇಂಡೋನೇಷ್ಯಾ ಅಧ್ಯಕ್ಷ

Indonesia President's "Indian DNA" Remark Leaves President, PM Modi In Splits

ನವದೆಹಲಿ,ಜ.27– ನನ್ನ ಪೂರ್ವಜರು ಭಾರತೀಯರು ಹಾಗಾಗಿ ನನ್ನೊಳಗೂ ಇಲ್ಲಿನ ಡಿಎನ್‌ಎ ಇದೆ ಎಂದು ಇಂಡೋನೇಷ್ಯಾ ಅಧ್ಯಕ್ಷ ಪ್ರಬೋವೊ ಸುಬಿಯಾಂಟೋ ತಿಳಿಸಿದ್ದಾರೆ. ಈ ಬಾರಿ ಗಣರಾಜ್ಯೋತ್ಸವದ ಮುಖ್ಯ ಅತಿಥಿಯಾಗಿ ಭಾರತಕ್ಕೆ ಆಗಮಿಸಿದ್ದ ಅವರು, ರಾಷ್ಟ್ರಪತಿ ದ್ರೌಪದಿ ಮುರ್ಮು ಆಯೋಜಿಸಿದ್ದ ಗೌರವಾರ್ಥ ಭೋಜನಕೂಟದ ಸಂದರ್ಭದಲ್ಲಿ ತಮ ಮನದಾಳದ ಮಾತನ್ನಾಡಿದ್ದಾರೆ.

ಕೆಲವು ವಾರಗಳ ಹಿಂದೆ, ನಾನು ನನ್ನ ಜೆನೆಟಿಕ್‌ ಸೀಕ್ವೆನ್ಸಿಂಗ್‌ ಪರೀಕ್ಷೆ ಮತ್ತು ಡಿಎನ್‌ಎ ಪರೀಕ್ಷೆಯನ್ನು ಮಾಡಿದ್ದೇನೆ, ಅದು ನನ್ನ ಡಿಎನ್‌ಎ ಭಾರತೀಯ ಎಂದು ತಿಳಿದುಬಂದಿದೆ. ನಾನು ಭಾರತೀಯ ಸಂಗೀತವನ್ನು ಕೇಳಿದಾಗ ನಾನು ನತ್ಯ ಮಾಡಲು ಪ್ರಾರಂಭಿಸುತ್ತೇನೆ ಎಂದು ಅವರು ಹೇಳಿದ್ದಾರೆ.

ಅಧ್ಯಕ್ಷ ಸುಬಿಯಾಂತೋ ಅವರ ಮಾತು ಕೇಳಿ ಪ್ರಧಾನಿ ನರೇಂದ್ರ ಮೋದಿ ಮತ್ತು ಉಪಾಧ್ಯಕ್ಷ ಜಗದೀಪ್‌ ಧಂಖರ್‌ ಸೇರಿದಂತೆ ಅತಿಥಿಗಳು ನಗಲು ಪ್ರಾರಂಭಿಸಿದರು. ಭಾರತದ 76ನೇ ಗಣರಾಜ್ಯೋತ್ಸವದ ಮುಖ್ಯ ಅತಿಥಿಯಾಗಿ ದೆಹಲಿಗೆ ಬಂದಿದ್ದ ಸುಬಿಯಾಂಟೋ ಉಭಯ ದೇಶಗಳ ನಡುವಿನ ನಿರಂತರ ಸಾಂಸ್ಕೃತಿಕ ಮತ್ತು ಐತಿಹಾಸಿಕ ಬಾಂಧವ್ಯದ ಕುರಿತು ಮಾತನಾಡಿದರು.

ಉಭಯ ದೇಶಗಳ ನಡುವಿನ ಪಾರಂಪರಿಕ ಪರಂಪರೆಗೆ ಒತ್ತು ನೀಡಿದ ಅವರು, ನಮ ಭಾಷೆಯ ಬಹುಮುಖ್ಯ ಭಾಗ ಸಂಸ್ಕೃತದಿಂದ ಬಂದಿದೆ. ಅನೇಕ ಇಂಡೋನೇಷಿಯನ್‌ ಹೆಸರುಗಳು ಸಂಸ್ಕೃತದಲ್ಲಿವೆ. ನಮ ದೈನಂದಿನ ಜೀವನದಲ್ಲಿ, ಪ್ರಾಚೀನ ಭಾರತೀಯ ನಾಗರಿಕತೆಯ ಪ್ರಭಾವವು ತುಂಬಾ ಪ್ರಬಲವಾಗಿದೆ ಎಂದು ಹೇಳಿದರು.

ಇಂಡೋನೇಷ್ಯಾದ ಅಧ್ಯಕ್ಷರು ಸಹ ಪ್ರಧಾನಿ ಮೋದಿಯವರ ನಾಯಕತ್ವವನ್ನು ಶ್ಲಾಘಿಸಿದರು ಮತ್ತು ಇದು ಸ್ಪೂರ್ತಿದಾಯಕ ಎಂದು ಬಣ್ಣಿಸಿದರು. ಭಾರತದಲ್ಲಿರುವುದಕ್ಕೆ ನನಗೆ ತುಂಬಾ ಹೆಮೆಯಾಗುತ್ತಿದೆ ಎಂದು ಅವರು ಹೇಳಿದರು. ನಾನು ವತ್ತಿಪರ ರಾಜಕಾರಣಿಯೂ ಅಲ್ಲ, ಉತ್ತಮ ರಾಜತಾಂತ್ರಿಕನೂ ಅಲ್ಲ, ನನ್ನ ಮನದಾಳದಲ್ಲಿರುವುದನ್ನು ಹೇಳುತ್ತೇನೆ.

ನಾನು ಇಲ್ಲಿಗೆ ಬಂದು ಕೆಲವು ದಿನಗಳಾಗಿವೆ, ಆದರೆ ಪ್ರಧಾನಿ ಮೋದಿಯವರ ನಾಯಕತ್ವ ಮತ್ತು ಬದ್ಧತೆಯಿಂದ ಬಹಳಷ್ಟು ಕಲಿತಿದ್ದೇನೆ ಎಂದರು. ಪ್ರಧಾನಿ ಮೋದಿಯವರ ನಾಯಕತ್ವ, ಬಡತನ ನಿರ್ಮೂಲನೆಗೆ ನಿಮ ಬದ್ಧತೆ, ಅಂಚಿನಲ್ಲಿರುವ ಜನರು ಮತ್ತು ಸಮಾಜದ ದುರ್ಬಲ ವರ್ಗದವರಿಗೆ ಸಹಾಯ ಮಾಡುವುದು ನಮಗೆ ಸ್ಫೂರ್ತಿಯಾಗಿದೆ ಎಂದಿದ್ದಾರೆ.

RELATED ARTICLES

Latest News