ಜಕಾರ್ತ, ಅ 18- ಇಂಡೋನೇಷ್ಯಾದ ಸುಲವೇಸಿ ದ್ವೀಪದ ಉತ್ತರ ಭಾಗದಲ್ಲಿರುವ ರುವಾಂಗ್ ಪರ್ವತದಲ್ಲಿ ಜ್ವಾಲಾಮುಖಿ ಸ್ಪೋಟಗೊಂಡು ಸಾವಿರಾರು ಅಡಿ ಎತ್ತರದ ಬೂದಿ ಜನವಸತಿ ಪ್ರದೇಶದತ್ತ ಹರಡುತ್ತಿದ್ದು,ಇದಲ್ಲದೆ ಸುನಾಮಿ ಎಚ್ಚರಿಕೆಯನ್ನು ನೀಡಿಲಾಗಿದೆ. ಸುಮಾರು 11,000 ಕ್ಕೂ ಹೆಚ್ಚು ಜನರಿಗೆ ಈ ಪ್ರದೇಶವನ್ನು ತೊರೆಯುವಂತೆ ಅಧಿಕಾರಿಗಳು ಆದೇಶಿಸಿದ್ದು ,ಆತಂಕ ಶುರುವಾಗಿದೆ.
ಜ್ವಾಲಾಮುಖಿಯು ಲಾವಾ ಹೊರಸೂಸುತ್ತಿದ್ದು ಜೊತೆಗೆ ಕಳೆದ 24 ಗಂಟೆಗಳಲ್ಲಿ ಕನಿಷ್ಠ ಐದು ದೊಡ್ಡ ಸ್ಪೋಟ ಉಂಟಾಗಿದೆ ಎಂದು ಇಂಡೋನೇಷ್ಯಾದ ಜ್ವಾಲಾಮುಖಿ ಮತ್ತು ಭೂವೈಜ್ಞಾನಿಕ ವಿಪತ್ತು ತಗ್ಗಿಸುವಿಕೆ ಕೇಂದ್ರ ತಿಳಿಸಿದೆ.ಈಗಾಗಲೇ ಸುಮಾರು 800 ನಿವಾಸಿಗಳು ಪ್ರದೇಶವನ್ನು ತೊರೆದಿದ್ದಾರೆ ಪ್ರವಾಸಿಗರು ಮತ್ತು ಇತರರನ್ನು ರುವಾಂಗ್ ಜ್ವಾಲಾಮುಖಿಯಿಂದ ಪ್ರದೇಶದಿಂದ ಸುಮಾರು 6 ಕಿಲೋಮೀಟರ್ ದೂರದಲ್ಲಿ ಇರುವಂತೆ ಅಕಾರಿಗಳು ಸೂಚಿಸಿದ್ದಾರೆ.
ಇಂಡೋನೇಷ್ಯಾದ ದ್ವೀಪಸಮೂಹವು 2.70ಕೋಟಿ ಜನರು ವಾಸಿಸುತ್ತಿದ್ದು ಇಲ್ಲಿ 120 ಸಕ್ರಿಯ ಜ್ವಾಲಾಮುಖಿಗಳಿವೆ ಹೊಂದಿದೆ. ಇಂಡೋನೇಷ್ಯಾದ ರಾಷ್ಟ್ರೀಯ ವಿಪತ್ತು ತಗ್ಗಿಸುವಿಕೆ ಏಜೆನ್ಸಿ ಅಕಾರಿಗಳು ಪ್ರಸ್ತುತ ಜನರನ್ನು ಸುಲವೆಸಿ ದ್ವೀಪದ ಸಮೀಪದ ಮನಾಡೋ ನಗರಕ್ಕೆ ಸ್ಥಳಾಂತರಿಸುತ್ತಿದ್ದಾರೆ , ದೋಣಿಯಲ್ಲಿ ಇದು 6 ಗಂಟೆಗಳ ಪ್ರಯಾಣ ಎಂದು ತಿಳಿಸಿದ್ದಾರೆ.
2018ರಲ್ಲಿ, ಇಂಡೋನೇಷ್ಯಾದ ಅನಕ್ ಕ್ರಾಕಟೌ ಜ್ವಾಲಾಮುಖಿಯ ಸೋಟದಿಂದ ಸುಮಾತ್ರಾ ಮತ್ತು ಜಾವಾ ಕರಾವಳಿಯಲ್ಲಿ ಸುನಾಮಿ ಉಂಟುಮಾಡಿತು,ಸುಮಾರು 430 ಜನರು ಸಾವನ್ನಪ್ಪಿದರು.