Thursday, August 28, 2025
Homeರಾಷ್ಟ್ರೀಯ | Nationalಪಾಕ್‌ಗೆ ಮತ್ತೊಂದು ದೊಡ್ಡ ಜಲ ಶಾಕ್‌..!

ಪಾಕ್‌ಗೆ ಮತ್ತೊಂದು ದೊಡ್ಡ ಜಲ ಶಾಕ್‌..!

Indus Treaty Suspended: India Eyes Major Inter-Basin Water Transfers

ನವದೆಹಲಿ,ಜು.12– ಪಹಲ್ಗಾಮ್‌ ದಾಳಿ ಬಳಿಕ ಸಿಂಧೂ ನದಿ ಒಪ್ಪಂದವನ್ನು ತಡೆಹಿಡಿದು ಪಾಕಿಸ್ತಾನಕ್ಕೆ ಭಾರತ ಜಲ ಶಾಕ್‌ ನೀಡಿತ್ತು. ಈಗ ಒಂದು ಹೆಜ್ಜೆ ಮುಂದೆ ಹೋಗಿ ಪಾಕ್‌ಗೆ ಮತ್ತೊಂದು ಬಿಗ್‌ ಶಾಕ್‌ ನೀಡಲು ಮುಂದಾಗಿದೆ.

ಜಲ ಒಪ್ಪಂದ ತಡೆ ಹಿಡಿದಿದ್ದರೂ ನೀರಿನ ತಡೆಗೆ ಭಾರತದ ಬಳಿ ಯಾವುದೇ ಸೌಕರ್ಯ ಇದ್ದಿಲ್ಲ. ಈಗ ಭಾರತ ಹೊಸ ಡ್ಯಾಂ ಅನ್ನು ಚೆನಾಬ್‌ ನದಿಗೆ ನಿರ್ಮಿಸಲು ಮುಂದಾಗಿದೆ. ಜಮು ಮತ್ತು ಕಾಶೀರದ ಕಿಶಾ್ತ್ವರ್‌ನಲ್ಲಿ ಚೆನಾಬ್‌ ನದಿಗೆ ಕ್ವಾರ್‌ ಅಣೆಕಟ್ಟು ನಿರ್ಮಾಣಕ್ಕೆ ಮೋದಿ ಸರ್ಕಾರ ವೇಗ ನೀಡುತ್ತಿದೆ. ಇದಕ್ಕಾಗಿ 3,119 ಕೋಟಿ ರೂ. ಸಾಲ ಪಡೆಯಲು ಮುಂದಾಗಿದೆ.

ಇದು ಗ್ರೀನ್‌ಫೀಲ್‌್ಡ ಅಣೆಕಟ್ಟಾಗಿದ್ದು, ಕಳೆದ ವರ್ಷ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ. ಈಗ ಇದರ ನಿರ್ಮಾಣಕ್ಕೆ ಮೋದಿ ಸರ್ಕಾರ ವೇಗ ನೀಡಿದ್ದು, ಮುಂದಿನ ವರ್ಷದೊತ್ತಿಗೆ ನಿರ್ಮಾಣ ಕಾರ್ಯ ಮುಕ್ತಾಯವಾಗಲಿದೆ. ಇದರಿಂದ ಪಾಕಿಸ್ತಾನಕ್ಕೆ ಹೋಗುತ್ತಿದ್ದ ನೀರಿನ ಹರಿವಿನ ಮೇಲೆ ಭಾರೀ ಪರಿಣಾಮ ಬೀರಲಿದೆ. ಇದು ಪಾಕಿಸ್ತಾನಕ್ಕೆ ಜಲಸಂಕಷ್ಟ ಸೃಷ್ಟಿಸಲಿದೆ.

ಏಪ್ರಿಲ್‌ 22ರ ಪಹಲ್ಗಾಮ್‌ ದಾಳಿ ಬಳಿಕ ಭಾರತ ಪಾಕಿಸ್ತಾನದ ಮೇಲೆ ಜಲ ಬಾಂಬ್‌ ಹಾಕಿತ್ತು. ಅಂದ್ರೇ ಸಿಂಧೂ ನದಿ ಒಪ್ಪಂದವನ್ನು ರದ್ದುಗೊಳಿಸುವ ಮೂಲಕ ಪಾಕಿಸ್ತಾನಕ್ಕೆ ಶಾಕ್‌ ನೀಡಿತ್ತು. ಇದಕ್ಕೆ ಪಾಕಿಸ್ತಾನ ಭಾರೀ ವಿರೋಧ ವ್ಯಕ್ತಪಡಿಸಿತ್ತು. ಆದರೆ, ಈಗ ಒಂದು ಹೆಜ್ಜೆ ಮುಂದಿಟ್ಟಿರುವ ಮೋದಿ ಸರ್ಕಾರ ಹೊಸ ಡ್ಯಾಂ ನಿರ್ಮಾಣ ಕಾರ್ಯಕ್ಕೆ ವೇಗ ನೀಡಲು ಮುಂದಾಗಿದೆ. ಚೆನಾಬ್‌ ನದಿಗೆ ಕ್ವಾರ್‌ ಅಣೆಕಟ್ಟು ನಿರ್ಮಿಸುವ ಯೋಜನೆಯನ್ನು ಭಾರತ ರೂಪಿಸಿದೆ.

ಇದನ್ನು ಎನ್‌ಎಚ್‌ಪಿಸಿ ಲಿಮಿಟೆಡ್‌ ಮತ್ತು ಜಮು ಮತ್ತು ಕಾಶೀರ ರಾಜ್ಯ ವಿದ್ಯುತ್‌ ಅಭಿವೃದ್ಧಿ ನಿಗಮ ಲಿಮಿಟೆಡ್‌ನ ಜಂಟಿ ಉದ್ಯಮವಾದ ಚೆನಾಬ್‌ ವ್ಯಾಲಿ ಪವರ್‌ ಪ್ರಾಜೆಕ್ಟ್‌್ಸ ಲಿಮಿಟೆಡ್‌ ಕಾರ್ಯಗತಗೊಳಿಸುತ್ತಿದೆ. ಇದು 540 ಮೆಗಾವ್ಯಾಟ್‌ ಸಾಮರ್ಥ್ಯದ ಕ್ವಾರ್‌ ಹೈಡ್ರೋ ಎಲೆಕ್ಟ್ರಿಕ್‌ ಪ್ರಾಜೆಕ್ಟ್‌ ಆಗಿದೆ. ಇದಕ್ಕಾಗಿ ಸಾಲ ಪಡೆಯಲು ವಿವಿಧ ಹಣಕಾಸು ಸಂಸ್ಥೆಗಳು ಹಾಗೂ ಬ್ಯಾಂಕ್‌ಗಳಿಂದ ಉತ್ತಮ ಸ್ಪರ್ಧಾತಕ ಬಡ್ಡಿದರಗಳನ್ನು ಸಿವಿಪಿಪಿಎಲ್‌ ಆಹ್ವಾನಿಸಿರುವುದು ಕುತೂಹಲ ಕೆರಳಿಸಿದೆ.

2 ವರ್ಷದಲ್ಲಿ ಕ್ವಾರ್‌ ಡ್ಯಾಂ ಲೋಕಾರ್ಪಣೆ!
ಈಗಾಗಲೇ ಅಣೆಕಟ್ಟಿನ ನಿರ್ಮಾಣ ಶುರುವಾಗಿದ್ದು, ಯೋಜನೆಯ ಒಟ್ಟು ಮೌಲ್ಯ 4,526 ಕೋಟಿ ರೂ.ಗಳಾಗಿದೆ. ಇದರಲ್ಲಿ ಭಾಗಶಃ ಹಣವನ್ನು ಸಾಲದ ರೂಪದಲ್ಲಿ ಪಡೆಯಲು ಕೇಂದ್ರ ಮುಂದಾಗಿದೆ. ಅಂದರೆ 3,119 ಕೋಟಿ ರೂ. ಸಾಲ ಪಡೆದು ಯೋಜನೆಗೆ ವೇಗ ನೀಡಲು ಸರ್ಕಾರ ಮುಂದಾಗಿದೆ. ಈ ಯೋಜನೆಯ ಪ್ರಮುಖ ಮೈಲಿಗಲ್ಲು ಎಂದರೆ ಚೆನಾಬ್‌ ನದಿಯ ತಿರುವಾಗಿದ್ದು, ಇದನ್ನು ಜನವರಿ 2024ರಲ್ಲಿ ಎಂಜಿನಿಯರ್‌ಗಳು ಸಾಧಿಸಿದ್ದಾರೆ. ಇದು ಗೇಮ್‌ ಚೇಂಜರ್‌ ಆಗಿದ್ದು, ಸದ್ಯ ಪ್ರಗತಿಯಲ್ಲಿರುವ ಮುಖ್ಯ ಅಣೆಕಟ್ಟು ಕಾಮಗಾರಿಗಳ ಆರಂಭಕ್ಕೆ ದಾರಿ ಮಾಡಿಕೊಟ್ಟಿದೆ.

ಅದಲ್ಲದೇ ಹಲವು ಭಾಗಗಳಲ್ಲಿ ಯೋಜನೆಯ ಕೆಲಸ ಶುರುವಾಗಿದೆ. ಅದರಲ್ಲೂ 609 ಮೀಟರ್‌ ಉದ್ದದ ಮುಖ್ಯ ಪ್ರವೇಶ ಸುರಂಗದ ನಿರ್ಮಾಣ ಕಾರ್ಯ ಆರಂಭವಾಗಿದೆ. ಇದರ ಮೂಲಕ ನದಿಯನ್ನು ಬೇರೆ ಕಡೆ ತಿರುಗಿಸಿ ಜಲವಿದ್ಯುತ್‌ ಯೋಜನೆಯನ್ನು ನಿರ್ಮಿಸಲಾಗುತ್ತಿದೆ. ಸುರಂಗ ನಿರ್ಮಾಣದ ಬಳಿಕ ಅಣೆಕಟ್ಟಿನ ನಿರ್ಮಾಣ ಕಾರ್ಯಗಳು ಇದರ ಬೆನ್ನಲ್ಲೇ ಆರಂಭವಾಗಿವೆ.
ಕ್ವಾರ್‌ ಜಲ ವಿದ್ಯುತ್‌ ಯೋಜನೆಯು ಚೆನಾಬ್‌ ನದಿಯ ಮೇಲೆ ಇದ್ದು, ಜಮು ಮತ್ತು ಕಾಶೀರದ ಕಿಶಾ್ತ್ವರ್‌ ಜಿಲ್ಲೆಯಲ್ಲಿದೆ. 109 ಮೀಟರ್‌ ಎತ್ತರದ ಕಾಂಕ್ರೀಟ್‌ ಗ್ರಾವಿಟಿ ಡ್ಯಾಂ ಅನ್ನು ನಿರ್ಮಿಸಲಾಗುತ್ತಿದೆ. ಇದರಿಂದ 1975 ಮಿಲಿಯನ್‌ ಯೂನಿಟ್‌ ವಿದ್ಯುತ್‌ ಅನ್ನು ವಾರ್ಷಿಕವಾಗಿ ಉತ್ಪಾದಿಸಬಹುದಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಏಪ್ರಿಲ್‌ 24, 2022ರಂದು ಈ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿದ್ದಾರೆ.

ಕ್ವಾರ್‌ ಜಲವಿದ್ಯುತ್‌ ಯೋಜನೆಯನ್ನು 2027ರ ವೇಳೆಗೆ ಲೋಕಾರ್ಪಣೆ ಮಾಡಬೇಕು ಎಂದು ಸರ್ಕಾರ ಎಲ್ಲ ಪ್ರಯತ್ನ ಮಾಡುತ್ತಿದೆ. ಈ ಯೋಜನೆ ಪೂರ್ಣಗೊಂಡರೆ ಈ ಪ್ರದೇಶದಲ್ಲಿ ಜಲವಿದ್ಯುತ್‌ ಹೆಚ್ಚಾಗಿ ದೊರೆಯುತ್ತದೆ. ಇದು ಸಾಮಾನ್ಯವಾಗಿ ದೇಶದ ಮತ್ತು ನಿರ್ದಿಷ್ಟವಾಗಿ ಜಮುಕಾಶೀರದ ಕೈಗಾರಿಕಾ ಬೆಳವಣಿಗೆಯನ್ನು ಮತ್ತಷ್ಟು ಹೆಚ್ಚಿಸುತ್ತದೆ. ಈ ಯೋಜನೆಯು ಕಿಶ್ತಾಶ್ವರಿಂಂದ ಸುಮಾರು 28 ಕಿ.ಮೀ ದೂರದ ಪದಯಾರ್ನಾ ಗ್ರಾಮದ ಬಳಿ ಇದನ್ನು ನಿರ್ಮಿಸಲಾಗುತ್ತಿದೆ.

ಜಮ್ಮು ಕಾಶ್ಮೀರದಲ್ಲಿ ಸಾಲು ಸಾಲು ಯೋಜನೆಗೆ ವೇಗ
ಕ್ವಾರ್‌ ಡ್ಯಾಂಗೆ ಮಾತ್ರ ಭಾರತ ವೇಗ ನೀಡುತ್ತಿಲ್ಲ. ಅದರ ಜೊತೆ ಜೊತೆಗೆ 1000 ಮೆಗಾ ವ್ಯಾಟ್‌ ಸಾಮಥ್ರ್ಯದ ಪಕಲ್‌ ದಲ್‌, 850 ಮೆಗಾ ವ್ಯಾಟ್‌ ಸಾಮಥ್ರ್ಯದ ರಾಟ್ಲೆ, 624 ಮೆಗಾವ್ಯಾಟ್‌ ಸಾಮಥ್ರ್ಯದ ಕಿರು ಜಲವಿದ್ಯುತ್‌ ಯೋಜನೆಗಳಿಗೂ ವೇಗವನ್ನು ನೀಡಿದೆ. ಸಲಾಲ್‌ ಹಾಗೂ ಬಗಿಲ್‌ದಾರ್‌ ಜಲಾಶಯಗಳಲ್ಲಿ ಫ್ಲಶಿಂಗ್‌ ಕಾರ್ಯವನ್ನು ಕೂಡ ಕೇಂದ್ರ ಸರ್ಕಾರ ನಡೆಸಿದ್ದು, ಡ್ಯಾಂಗಳಲ್ಲಿ ನೀರಿನ ಸಂಗ್ರಹಣಾ ಸಾಮರ್ಥ್ಯವನ್ನು ಹೆಚ್ಚಿಸುತ್ತಿದೆ.

ಈ ಮೂಲಕ ಪಾಕಿಸ್ತಾನಕ್ಕೆ ನೀರು ಹೋಗದಂತೆ ಎಲ್ಲೆಲ್ಲಿ ತಡೆಯಬಹುದೋ, ಅಲ್ಲಲ್ಲಿ ತಡೆಯುವ ಕೆಲಸವನ್ನು ಭಾರತ ಮಾಡುತ್ತಿದೆ. ಸಿಂಧೂ ನದಿ ಒಪ್ಪಂದವನ್ನು ಭಾರತ ತಡೆಹಿಡಿದಿರುವುದರಿಂದ ಪಾಕಿಸ್ತಾನಕ್ಕೆ ಸಂಕಷ್ಟ ಶುರುವಾಗಿದೆ. ಪಾಕಿಸ್ತಾನದ ಶೇ.80ರಷ್ಟು ಕೃಷಿ ವಲಯ ಸಿಂಧೂ ನದಿಯನ್ನೇ ಅವಲಂಭಿಸಿರುವುದರಿಂದ ಸಿಂಧೂ ನದಿ ಹರಿಯುವುದು ನಿಂತರೆ ಪಾಕಿಸ್ತಾನದಲ್ಲಿ ಜಲಕ್ಷಾಮ ಉಂಟಾಗುವುದು ಶತಸಿದ್ಧ. ಈ ಹಿನ್ನೆಲೆ ಭಾರತ ಎಲ್ಲ ರೀತಿಯ ತಯಾರಿಯನ್ನು ಮಾಡಿಕೊಳ್ಳುತ್ತಿದೆ.

ಒಟ್ಟಿನಲ್ಲಿ, ಭಾರತ ಹಾಗೂ ಪಾಕಿಸ್ತಾನ ನಡುವಿನ ಜಲಸಮರ ಮತ್ತೊಂದು ಹಂತಕ್ಕೆ ತಲುಪಿದೆ. ಭಯೋತ್ಪಾದನೆಗೆ ಸದಾ ಬೆಂಬಲ ನೀಡುತ್ತಿರುವ ಪಾಕಿಸ್ತಾನಕ್ಕೆ ಪಾಠ ಕಲಿಸಲು ಭಾರತಕ್ಕೆ ಇದಕ್ಕಿಂತ ಒಳ್ಳೆಯ ಅಸ್ತ್ರ ಬೇರೊಂದಿಲ್ಲ. ಈ ಹಿನ್ನೆಲೆ ಜಮು ಕಾಶೀರದಲ್ಲಿರುವ ಜಲಾಶಯಗಳ ನಿರ್ಮಾಣ ಕಾರ್ಯಕ್ಕೆ ವೇಗ ನೀಡುವ ಕೆಲಸವನ್ನು ಮೋದಿ ಸರ್ಕಾರ ಮಾಡುತ್ತಿದ್ದು, ಪಾಕಿಸ್ತಾನಕ್ಕೆ ದೊಡ್ಡ ಜಲಶಾಕ್‌ನೀಡುತ್ತಿದೆ.

RELATED ARTICLES

Latest News