ಬೆಂಗಳೂರು.ಫೆ .3- ರಾಜ್ಯ ಒಲಿಂಪಿಕ್ಸ್ ಅಸೋಸಿಯೇಷನ್ನಿಂದ ಖೋ ಖೋ ಸಂಸ್ಥೆಗೆ ಅನ್ಯಾಯವಾಗುತ್ತಿದೆ ಎಂದು ಆರೋಪಿಸಿರುವ ಕರ್ನಾಟಕ ರಾಜ್ಯ ಖೋ ಖೋ ಸಂಸ್ಥೆ ಈ ಕೂಡಲೆ ಸರ್ಕಾರ ಆಗಿರುವ ಅನ್ಯಾಯವನ್ನು ಸರಿಪಡಿಸುವಂತೆ ಮನವಿ ಮಾಡಿಕೊಂಡಿದೆ.
ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ಸಂಸ್ಥೆ ಅಧ್ಯಕ್ಷ ಲೋಕೇಶ್ವರ್ ಅವರು ಕಳೆದ ವಾರವಷ್ಟೇ ವಿಶ್ವಕಪ್ ಗೆದ್ದ ಮಹಿಳಾ ಮತ್ತು ಪುರುಷರತಂಡದಲ್ಲಿ ಕನ್ನಡಿಗರಾದ ಚೈತ್ರ ಮತ್ತು ಗೌತಮ್ ಇದ್ದರು ಅಂತಹ ಆಟಗಾರರನ್ನು ನಮ ಸರ್ಕಾರ ಸರಿಯಾಗಿ ಗೌರವಿಸಿಲ್ಲ ಎಂದು ಆರೋಪಿಸಿದರು.
ನಮ ಸಂಸ್ಥೆ ಒಲಿಂಪಿಕ್ ಅಸೋಷಿಯೇಷನ್ನಲ್ಲಿ ನೋಂದಣಿ ಮಾಡಿಕೊಂಡಿದ್ದರು ಅದರ ಅಧ್ಯಕ್ಷ ಗೋವಿಂದರಾಜು ಅವರು ನಕಲಿ ಸಂಸ್ಥೆಯನ್ನು ನೋಂದಣಿ ಮಾಡಿಸಿಕೊಂಡು ನಮಗೆ ಅನ್ಯಾಯ ಮಾಡಿದ್ದಾರೆ ಎಂದು ದೂರಿದರು.
ಹೀಗಾಗಿ ಸರ್ಕಾರ ವಿಶ್ವಕಪ್ ಗೆದ್ದ ಕ್ರೀಡಾಪಟುಗಳಿಗೆ ಸರ್ಕಾರಿ ಹುದ್ದೆ ಜೊತೆಗೆ 50 ಲಕ್ಷ ರೂ.ಗಳ ಬಹುಮಾನ ಘೋಷಿಸಬೇಕು. ಈಗ ಇರುವ ರಾಜ್ಯಒಲಿಂಪಿಕ್ ಸಂಸ್ಥೆಯಮೂಲ ಅನುದಾನ ಕೇಳುವ ಪದ್ದತಿಯನ್ನುರದ್ದುಗೊಳಿಸ ಬೇಕು. ಒಲಂಪಿಕ್ ಅಸೋಸಿಯೇಷನ್ ಯಾವುದೇ ಕ್ರೆಡಾ ಸಂಸ್ಥೆಗಳನ್ನು ಕಡೆಗಣಿಸದಂತೆ ನೋಡಿಕೊಳ್ಳಬೇಕು ಎಂದು ಆವರು ಆಗ್ರಹಿಸಿದ್ದಾರೆ.
ಕರ್ನಾಟಕ ಒಲಿಂಪಿಕ್ ಅಸೋಸಿಯೇಷನ್ ಸಂಸ್ಥೆಗೆ ಈಗಾಗಲೇ ನೀಡಿರುವ ಅನುದಾನದ ಬಗ್ಗೆದುರುಪಯೋಗಪಡಿಸಿಕೊಂಡಿರುವ ಆರೋಪಗಳಿದ್ದುಅವುಗಳನ್ನುತನಿಖೆ ಮಾಡಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.