Wednesday, August 20, 2025
Homeರಾಜ್ಯಒಳ ಮೀಸಲಾತಿಯಲ್ಲಿ ಸಣ್ಣ ಜಾತಿಗಳಿಗೆ ಅನ್ಯಾಯ : ಸುರೇಶ್‌ಬಾಬು

ಒಳ ಮೀಸಲಾತಿಯಲ್ಲಿ ಸಣ್ಣ ಜಾತಿಗಳಿಗೆ ಅನ್ಯಾಯ : ಸುರೇಶ್‌ಬಾಬು

Injustice to small castes in internal reservation: Suresh Babu

ಬೆಂಗಳೂರು,ಆ.20- ಪರಿಶಿಷ್ಟ ಜಾತಿ ಒಳಮೀಸಲಾತಿ ವಿಚಾರದಲ್ಲಿ ಸಣ್ಣ ಸಣ್ಣ ಜಾತಿಗಳಿಗೆ ಅನ್ಯಾಯವಾಗಿದ್ದು, ಅವರಿಗೂ ನ್ಯಾಯ ಒದಗಿಸಬೇಕು ಎಂದು ಜೆಡಿಎಸ್‌‍ ಶಾಸಕಾಂಗ ಪಕ್ಷದ ನಾಯಕ ಸಿ.ಬಿ.ಸುರೇಶ್‌ಬಾಬು ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿನ್ನೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಎಡ ಮತ್ತು ಬಲಗೈ ಸಮುದಾಯಕ್ಕೆ ಶೇ.6 ರಷ್ಟು ಹಾಗೂ ಉಳಿದೆಲ್ಲಾ ಜಾತಿಗಳಿಗೆ ಶೇ.5 ರಷ್ಟು ಮೀಸಲಾತಿ ಒದಗಿಸಿದ್ದಾರೆ ಎಂಬ ಮಾಹಿತಿ ಇದೆ. ಇದರಿಂದ ಸಣ್ಣ ಜಾತಿಗಳಿಗೆ ನ್ಯಾಯ ಒದಗಿಸಿಲ್ಲ. ಸದನದಲ್ಲಿ ಅನುದಾನ ತಾರತಮ್ಯ ವಿಚಾರವಾಗಿ ಧ್ವನಿ ಎತ್ತಿದ್ದೇವೆ. ಶಾಸಕರ ಕ್ಷೇತ್ರಾಭಿವೃದ್ಧಿ ಅನುದಾನ ಹೆಚ್ಚಳವಾಗಿ 10 ವರ್ಷ ಕಳೆದಿದೆ. ಈಗ ಬಜೆಟ್‌ ಗಾತ್ರವೂ ದೊಡ್ಡದಾಗಿದೆ. ಅನುದಾನ ಮಾತ್ರ ಹೆಚ್ಚಳವಾಗಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ನಮಗೆ ಅನುದಾನ ನೀಡದೇ ತಾರತಮ್ಯ ಮಾಡುವುದು ಸರಿಯಲ್ಲ. 50 ಕೋಟಿ ರೂ. ಅನುದಾನವನ್ನು ಮುಂಗಡವಾಗಿ ನೀಡಲು ಆರ್ಥಿಕ ಇಲಾಖೆ ಹಿಂದೇಟು ಹಾಕುತ್ತಿದ್ದು, ಇದು ಊಟ ಕಿತ್ತುಕೊಂಡಂತೆ ಎಂದು ಟೀಕಿಸಿದರು.

ಸೂಪರ್‌ ಸಿಎಂ ರಣದೀಪ್‌ ಸಿಂಗ್‌ ಸುರ್ಜೇವಾಲ ಅವರು ಬಂದು ಸಭೆ ನಡೆಸಿದ ನಂತರ ಶಾಸಕರಿಗೆ ಅನುದಾನ ಘೋಷಿಸಿದ್ದಾರೆ. ಆದರೆ ಮುಂಗಡವಾಗಿ ಅನುದಾನ ನೀಡಲು ಆಗುವುದಿಲ್ಲ ಎಂದು ಆರ್ಥಿಕ ಇಲಾಖೆ ತಿಳಿಸಿದೆ. ಹೀಗಾದರೆ ಗುತ್ತಿಗೆದಾರರು ಹೇಗೆ ಕಾಮಗಾರಿ ಕೈಗೆತ್ತಿಕೊಳ್ಳುತ್ತಾರೆ. ಕಾಂಗ್ರೆಸ್‌‍ ಶಾಸಕರು ಎಚ್ಚೆತ್ತುಕೊಳ್ಳಬೇಕಿದೆ. ಇದು ಶಾಸಕರ ಮೂಗಿಗೆ ತುಪ್ಪ ಸವರುವ ಕೆಲಸ ಎಂದು ಅವರು ಆರೋಪಿಸಿದರು.ಶಾಸಕರ ಕ್ಷೇತ್ರಗಳ ಅಭಿವೃದ್ಧಿಗೆ ಅನುದಾನ ಒದಗಿಸಿ ಕಾಮಗಾರಿ ಕೈಗೊಳ್ಳಲು ಮುಖ್ಯಮಂತ್ರಿ ಅವಕಾಶ ಕಲ್ಪಿಸಬೇಕು ಎಂದು ಅವರು ಆಗ್ರಹಿಸಿದರು.

RELATED ARTICLES

Latest News