Wednesday, March 12, 2025
Homeರಾಷ್ಟ್ರೀಯ | Nationalಮಹಾರಾಷ್ಟ್ರ : ನಕ್ಸಲ್‌ ದಾಳಿಗೆ ಯೋಧ ಹುತಾತ್ಮ

ಮಹಾರಾಷ್ಟ್ರ : ನಕ್ಸಲ್‌ ದಾಳಿಗೆ ಯೋಧ ಹುತಾತ್ಮ

Inspector of elite commando unit C-60 killed in Naxal encounter in Gadchiroli

ಮುಂಬೈ, ಫೆ.12 (ಪಿಟಿಐ) – ಗಡ್ಚಿರೋಲಿ ಜಿಲ್ಲೆಯಲ್ಲಿ ನಕ್ಸಲೀಯರೊಂದಿಗಿನ ಎನ್‌ಕೌಂಟರ್‌ನಲ್ಲಿ ಹುತಾತರಾದ ಕಾನ್‌ಸ್ಟೆಬಲ್‌ ಮಹೇಶ್‌ ನಾಗುಲ್ವಾರ್‌ ಅವರ ಕುಟುಂಬಕ್ಕೆ ರಾಜ್ಯ ಸರ್ಕಾರ 2 ಕೋಟಿ ರೂಪಾಯಿ ಆರ್ಥಿಕ ನೆರವು ನೀಡಲಿದೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌‍ ಘೋಷಿಸಿದ್ದಾರೆ.

ನಿನ್ನೆ ಗಡ್‌ಚಿರೋಲಿಯಲ್ಲಿ ನಕ್ಸಲೀಯರೊಂದಿಗಿನ ಗುಂಡಿನ ಚಕಮಕಿಯಲ್ಲಿ ಗಾಯಗೊಂಡಿದ್ದ ವಿಶೇಷ ಕಮಾಂಡೋ ಘಟಕ ಸಿ-60 ನ 39 ವರ್ಷದ ಕಾನ್‌ಸ್ಟೆಬಲ್‌ ಸಾವನ್ನಪ್ಪಿದ್ದರು. ನಕ್ಸಲೀಯರ ವಿರುದ್ಧದ ಕಾರ್ಯಾಚರಣೆಯ ವೇಳೆ ಸಿ-60 ಕಮಾಂಡೋ ಘಟಕದ ಸಿಬ್ಬಂದಿ ಗಡ್ಚಿರೋಲಿಯ ಭಮ್ರಗಡ ತಾಲೂಕಿನ ಫುಲ್ನಾರ್‌ ಅರಣ್ಯ ಪ್ರದೇಶದಲ್ಲಿ ಮಾವೋವಾದಿ ಶಿಬಿರವನ್ನು ಯಶಸ್ವಿಯಾಗಿ ಧ್ವಂಸಗೊಳಿಸಿದ್ದಾರೆ ಎಂದು ಗಹ ಖಾತೆಯನ್ನು ಹೊಂದಿರುವ ಫಡ್ನವಿಸ್‌‍ ಹೇಳಿದ್ದಾರೆ.

ಆದರೆ, ಎನ್‌ಕೌಂಟರ್‌ ವೇಳೆ ಕಾನ್‌ಸ್ಟೆಬಲ್‌ ನಾಗುಲ್ವಾರ್‌ಗೆ ಬುಲೆಟ್‌ ಗಾಯಗಳಾಗಿವೆ. ತಕ್ಷಣ ಅವರನ್ನು ಹೆಲಿಕಾಪ್ಟರ್‌ ಮೂಲಕ ಹೆಲಿಕಾಪ್ಟರ್‌ ಮೂಲಕ ಹೊರತರಲಾಯಿತು ಮತ್ತು ಗಡ್ಚಿರೋಲಿಯ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಯಿತು ಎಂದು ಫಡ್ನವಿಸ್‌‍ ಎಕ್‌್ಸ ಪೋಸ್ಟ್‌‍ ನಲ್ಲಿ ತಿಳಿಸಿದ್ದರು. ಎಲ್ಲಾ ಪ್ರಯತ್ನಗಳ ಹೊರತಾಗಿಯೂ, ಅವರು ಹುತಾತರಾದರು ಎಂದು ಸಿಎಂ ಹೇಳಿದರು.

ನಕ್ಸಲ್‌ ಮುಕ್ತ ಭಾರತ ಅಭಿಯಾನದಲ್ಲಿ ಕಾನ್‌ಸ್ಟೆಬಲ್‌ ನಾಗುಲ್ವಾರ್‌ ಅವರ ತ್ಯಾಗವನ್ನು ಎಂದಿಗೂ ಮರೆಯಲಾಗದು, ರಾಷ್ಟ್ರಕ್ಕಾಗಿ ಅವರ ಸಮರ್ಪಣೆ ವ್ಯರ್ಥವಾಗುವುದಿಲ್ಲ ಎಂದು ಅವರು ಪ್ರತಿಪಾದಿಸಿದರು. ನಕ್ಸಲ್‌ ವಿರೋಧಿ ಕಾರ್ಯಾಚರಣೆಯ ನಂತರ ಗಡ್ಚಿರೋಲಿ ಪೊಲೀಸ್‌‍ ವರಿಷ್ಠಾಧಿಕಾರಿಯೊಂದಿಗೆ ಮಾತನಾಡಿದ ಫಡ್ನವಿಸ್‌‍, ನಾಗುಲ್ವಾರ್‌ ಅವರ ಕುಟುಂಬಕ್ಕೆ ತಮ ಒಗ್ಗಟ್ಟನ್ನು ವ್ಯಕ್ತಪಡಿಸಿದರು. ಅವರ ಕುಟುಂಬಕ್ಕೆ ರಾಜ್ಯ ಸರ್ಕಾರವು 2 ಕೋಟಿ ರೂಪಾಯಿ ಆರ್ಥಿಕ ನೆರವು ಮತ್ತು ಇತರ ಸೌಲಭ್ಯಗಳು ಮತ್ತು ಬೆಂಬಲವನ್ನು ನೀಡಲಿದೆ ಎಂದು ಫಡ್ನವಿಸ್‌‍ ಹೇಳಿದರು.

RELATED ARTICLES

Latest News