ಬೆಂಗಳೂರು,ಅ.7- ದೀಪಾವಳಿ ಸಮೀಪಿಸುತ್ತಿದ್ದು ಪಟಾಕಿಯಿಂದ ಯಾವುದೇ ಅವಘಡಗಳು ಸಂಭವಿಸದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ವಹಿಸುವಂತೆ ನಗರ ಪೊಲೀಸ್ ಆಯುಕ್ತ ಸೀಮಂತ್ಕುಮಾರ್ ಸಿಂಗ್ ಅವರು ಸೂಚಿಸಿದ್ದಾರೆ.
ಈ ಸಂಬಂಧ ತಮ ಕಚೇರಿಯಲ್ಲಿಂದು ಜಿಬಿಎ, ಅಗ್ನಿ ಶಾಮಕ, ಬೆಸ್ಕಾಂ ಹಾಗೂ ಜಿಎಸ್ಟಿ ಅಧಿಕಾರಿಗಳು ಸೇರಿದಂತೆ ಪಟಾಕಿ ಮಾರಾಟಗಾರರ ಜೊತೆ ಆಯುಕ್ತರು ಸಭೆ ನಡೆಸಿ ಕೆಲವು ಸಲಹೆ, ಸೂಚನೆ ನೀಡಿದರು.ಕಳೆದ ವರ್ಷ ಆನೇಕಲ್ನ ಪಟಾಕಿ ಗೋದಾಮಿನಲ್ಲಿ ಸಂಭವಿಸಿದ ಘಟನೆ ನಗರದಲ್ಲಿ ಮರುಕಳಿಸದಂತೆ ಎಚ್ಚರಿಕೆ ವಹಿಸಲು ಸೂಚನೆ ನೀಡಿದ್ದಾರೆ.
ಎಲ್ಲಾ ವಿಭಾಗದವರು ನಮಗೆ ಮಾಹಿತಿ ನೀಡಿದ್ದಾರೆ. ಪಟಾಕಿ ಮಾರಾಟ ಮಾಡುವವರು ಅರ್ಜಿ ಹಾಕಿದರೆ ಚೀಟಿ ಎತ್ತುವ ಮೂಲಕ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಪಟಾಕಿ ಮಾರಾಟ ಮಾಡಲು 57 ಮೈದಾನಗಳಲ್ಲಿ ,411 ಜಾಗ ನಿಗಧಿ ಮಾಡಲಾಗಿದೆ ಎಂದರು.ಅಗ್ನಿ ಶಾಮಕ ಇಲಾಖೆಗೆ ಮಾಲಿನ್ಯ ಮಂಡಳಿ ಈಗಾಗಲೇ ಸೂಚನೆ ಕೊಟ್ಟಿದ್ದಾರೆ. ಯಾವುದೇ ಗೊಂದಲ ಹಾಗೂ ಸಮಸ್ಯೆಗಳಾಗದಂತೆ ಎಲ್ಲರಿಗೂ ಸೂಚನೆ ನೀಡಲಾಗಿದೆ ಎಂದು ಆಯುಕ್ತರು ಹೇಳಿದರು.