Thursday, May 15, 2025
Homeರಾಜ್ಯಕರ್ನಲ್ ಸೋಫಿಯಾ ಅವರಿಗೆ ಅವಮಾನ ಮಾಡಿದ್ದು ಇಡೀ ಕರ್ನಾಟಕಕವನ್ನೇ ಅವಮಾನಿಸಿದಂತೆ : ಪರಮೇಶ್ವರ್

ಕರ್ನಲ್ ಸೋಫಿಯಾ ಅವರಿಗೆ ಅವಮಾನ ಮಾಡಿದ್ದು ಇಡೀ ಕರ್ನಾಟಕಕವನ್ನೇ ಅವಮಾನಿಸಿದಂತೆ : ಪರಮೇಶ್ವರ್

Insulting Colonel Sophia is like insulting the entire Karnataka: Parameshwar

ಬೆಂಗಳೂರು,ಮೇ.15- ಲೆಫ್ಟಿನೆಂಟ್ ಕರ್ನಲ್ ಸೋಫಿಯಾ ಖುರೇಷಿ ಕರ್ನಾಟಕದ ಸೊಸೆಯಾಗಿದ್ದು, ಮಧ್ಯ ಪ್ರದೇಶದ ಸಚಿವರ ಆಕ್ಷೇಪಾರ್ಹ ಹೇಳಿಕೆ ಸೂಫಿಯಾರವರಿಗಷ್ಟೇ ಅಲ್ಲ ಇಡೀ ರಾಜ್ಯಕ್ಕೆ ಮಾಡಿದ ಅಪಮಾನವಾಗಿದೆ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್ ಆಕ್ಷೇಪಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೋಫಿಯಾ ಅವರ ಪತಿ ಬೆಳಗಾವಿ ಜಿಲ್ಲೆಯವರು. ನಿನ್ನೆ ಬೆಳಗಾವಿಯ ಎಸ್ಪಿಯವರು ಹೇಳಿಕೆ ನೀಡಿ ಮಧ್ಯ ಪ್ರದೇಶದ ಸಚಿವರ ವಿರುದ್ಧ ಪ್ರಕರಣ ದಾಖಲಿಸಿರುವುದಾಗಿ ತಿಳಿಸಿದ್ದಾರೆ.

ಮುಂದೆ ಇದನ್ನು ಕೇಂದ್ರಸರ್ಕಾರದ ಗಮನಕ್ಕೆ ತಂದು ಟೀಕೆ ಮಾಡಿದ ವ್ಯಕ್ತಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಇದು ರಾಜ್ಯ ಮತ್ತು ದೇಶಕ್ಕೆ ಮಾ ಮಾಡಿದ ಅಪಮಾನ. ಸೂಕ್ತ ಸೂಕ್ಷ್ಮ ಪರಿಸ್ಥಿತಿಯಂತಹ ವೇಳೆಯಲ್ಲಿ ಇಂತಹ ಕೀಳು ಮನಸ್ಥಿತಿ ಯಾರಿಗೂ ಬರಬಾರದು ಎಂದರು.

ಕೇಂದ್ರ ಸರ್ಕಾರ ಕರ್ನಾಟಕಕ್ಕೆ ತತ್‌ಕ್ಷಣಕ್ಕೆ 5.50 ಕೋಟಿ ರೂ. ನೀಡಬೇಕು. ಆದರೆ ಪ್ರತೀಬಾರಿ ಅನುದಾನ ನೀಡಿಕೆಯಲ್ಲಿ ವಿಳಂಬವಾಗುತ್ತಲೇ ಇದೆ. ಇದಕ್ಕಾಗಿ ನಿನ್ನೆ ಮುಖ್ಯಮಂತ್ರಿಗಳು ಸಂಸದರ ಜೊತೆ ಸಭೆ ನಡೆಸಿ ಗಮನಕ್ಕೆ ತಂದಿದ್ದಾರೆ. ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಹಣ ಬಿಡುಗಡೆಗೆ ಒತ್ತಡ ಹೇರುವಂತೆ ಮನವಿ ಮಾಡಿದ್ದಾರೆ.

ಕೆಲವು ಸಂಸದರು ಸಭೆಗೆ ಗೈರುಹಾಜರಾದ ಬಗ್ಗೆ ಹೆಚ್ಚು ಚರ್ಚೆ ಮಾಡಲು ಬಯಸುವುದಿಲ್ಲ. ಅವರಿಗೆ ಅವರದೇ ಆದ ಕಾರ್ಯ ಒತ್ತಡಗಳಿರುತ್ತವೆ. ಆದರೆ ರಾಜ್ಯದ ಪರವಾಗಿ ಎಲ್ಲರೂ ಧ್ವನಿಯೆತ್ತಬೇಕು ಎಂಬುದು ನಮ್ಮ ಒತ್ತಾಯವಾಗಿದೆ. ಈ ಹಿಂದೆ ಅನುದಾನ ಸಿಗದೇ ಇದ್ದುದ್ದಕ್ಕಾಗಿ ದೆಹಲಿಗೆ ಹೋಗಿ ಪ್ರತಿಭಟನೆ ಮಾಡಬೇಕಾಯಿತು.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ಒಳ್ಳೆಯ ಬಾಂಧವ್ಯ ಇರಬೇಕು. ಈ ಕಾರಣಕ್ಕಾಗಿ ನಿಯಮಾವಳಿಗಳಿವೆ. ಅದನ್ನು ಎರಡೂ ಕಡೆಯವರು ಅರ್ಥ ಮಾಡಿಕೊಳ್ಳಬೇಕು. ನಮಗೆ ಬರಬೇಕಾದಂತಹ ಅನುದಾನ ಕೊಟ್ಟರೆ ನಾವು ಒತ್ತಾಯ ಮಾಡುವುದಿಲ್ಲ, 2-3 ದಿನ ಹಿಂದೆಮುಂದೆಯಾದರೂ ಸಕಾಲಕ್ಕೆ ಹಣ ಬಿಡುಗಡೆಯಾಗುವಂತೆ ಕೇಂದ್ರ ಸರ್ಕಾರ ನೋಡಿಕೊಳ್ಳಬೇಕು ಎಂದರು.

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಜನ್ಮದಿನದ ಸಂದರ್ಭದಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಜಾರಿಯಾಗಿದೆ. ಡಿಕೆಶಿಯವರಿಗೆ ಹುಟ್ಟುಹಬ್ಬದ ಶುಭಹಾರೈಸುತ್ತೇನೆ. ಗ್ರೇಟರ್ ಬೆಂಗಳೂರು ಅವರ ಕಲ್ಪನೆ. ಇಂದಿನಿಂದ ಅದು ಜಾರಿಗೆ ಬಂದಿದೆ. ಹೊಸರೂಪ ಯಶಸ್ವಿಯಾಗಲಿ, ಸಣ್ಣಪುಟ್ಟ ಲೋಪಗಳು, ನ್ಯೂನತೆಗಳಿದ್ದರೂ ಅದನ್ನು ಸರಿಪಡಿಸಿಕೊಳ್ಳಲಿ, ಅವಕಾಶವಿದೆ. ಫಲಿತಾಂಶಕ್ಕಾಗಿ ಕಾದು ನೋಡುತ್ತೇವೆ ಎಂದರು.

ವಿಶ್ವದ ದೊಡ್ಡ ನಗರಗಳಲ್ಲಿ ಈ ರೀತಿಯ ಪರಿಕಲ್ಪನೆಗಳಿವೆ. ಬೆಂಗಳೂರಿನ ವಿಸ್ತೀರ್ಣತೆ ದೊಡ್ಡದಿದ್ದು, ಒಬ್ಬ ಅಧಿಕಾರಿ ಅದನ್ನು ನಿಭಾಯಿಸುವುದು ಕಷ್ಟ. ಅದಕ್ಕಾಗಿ ಅಧಿಕಾರದ ವಿಕೇಂದ್ರೀಕರಣವಾಗಿದೆ ಎಂದು ಹೇಳಿದರು.

ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ಇದೇ 20 ರಂದು ಕಂದಾಯ ಇಲಾಖೆಯಿಂದ ಬೃಹತ್ ಸಮಾವೇಶ ನಡೆಸಿ 50 ಸಾವಿರ ಜನರಿಗೆ ಹಕ್ಕುಪತ್ರಗಳನ್ನು ನೀಡಲಾಗುತ್ತಿದೆ. ಇದೊಂದು ಸರ್ಕಾರದ ಕಾರ್ಯಕ್ರಮ, ಲೋಕಸಭೆಯ ವಿರೋಧಪಕ್ಷದ ನಾಯಕ ರಾಹುಲ್‌ ಗಾಂಧಿ, ರಾಜ್ಯ ಸಭೆಯ ವಿರೋಧಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಮತ್ತಿತರರು ಭಾಗವಹಿಸುತ್ತಾರೆ ಎಂದರು.

ಸರ್ಕಾರದ ಸಾಧನಾ ಸಮಾವೇಶವನ್ನು ಬೇರೆ ದಿನ ಮಾಡಲಾಗುತ್ತದೆ. ಸದ್ಯಕ್ಕೆ ಕಂದಾಯ ಇಲಾಖೆಯಿಂದ ಜನರಿಗೆ ದಾಖಲೆ ಪತ್ರಗಳನ್ನು ನೀಡಲು ಬೃಹತ್ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಹೇಳಿದರು.

RELATED ARTICLES

Latest News