Saturday, December 6, 2025
Homeಅಂತಾರಾಷ್ಟ್ರೀಯಬಾಂಗ್ಲಾದೇಶದಲ್ಲಿ 4.1 ತೀವ್ರತೆಯ ಭೂಕಂಪ

ಬಾಂಗ್ಲಾದೇಶದಲ್ಲಿ 4.1 ತೀವ್ರತೆಯ ಭೂಕಂಪ

4.1 magnitude earthquake hits Bangladesh

ಢಾಕಾ, ಡಿ.4 ಬಾಂಗ್ಲಾದೇಶದಲ್ಲಿ ಇಂದು ಮುಂಜಾನೆ 4.1 ತೀವ್ರತೆಯ ಭೂಕಂಪ ಸಂಭವಿಸಿದೆ. ರಾಜಧಾನಿ ಢಾಕಾ ಮತ್ತು ನೆರೆಯ ಜಿಲ್ಲೆಗಳಲ್ಲಿ ಕಂಪನದ ಅನುಭವವಾಗಿದ್ದು, ಸ್ಥಳೀಯ ಸಮಯ ಬೆಳಿಗ್ಗೆ 6:14 ಕ್ಕೆ ಭೂಕಂಪ ಸಂಭವಿಸಿದೆ.

ಯುರೋಪಿಯನ್‌ಮೆಡಿಟರೇನಿಯನ್‌ ಭೂಕಂಪನ ಕೇಂದ್ರದ ಪ್ರಕಾರ ಢಾಕಾ ಸಮೀಪದ ನರಸಿಂಗ್ಡಿದಲ್ಲಿ ಭೂಮಿಯ 30 ಕಿ.ಮೀ ಆಳದಲ್ಲಿ ಕೇಂದ್ರ ಬಿಂದು ದಾಖಲಾಗಿದೆ ಎಂದು ವರದಿ ಮಾಡಿದೆ.

ಸದ್ಯಕ್ಕೆ ಯಾವುದೇ ಹಾನಿ ಅಥವಾ ಸಾವುನೋವುಗಳ ವರದಿಯಾಗಿಲ್ಲ.ಭೂಕಂಪದ ಆಳ ಕಡಿಮೆ ಇರುವುದರಿಂದ, ಢಾಕಾ ಮತ್ತು ಸುತ್ತಮುತ್ತಲಿನ ಜಿಲ್ಲೆಗಳ ನಿವಾಸಿಗಳು ಲಘು ಕಂಪನವನ್ನು ಮಾತ್ರ ಅನುಭವಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬಾಂಗ್ಲಾದೇಶವು ಮೂರು ಟೆಕ್ಟೋನಿಕ್‌ ಪ್ಲೇಟ್‌ಗಳಾದ – ಭಾರತ, ಮ್ಯಾನ್ಮಾರ್‌ ಮತ್ತು ಯುರೇಷಿಯನ್‌ ಪ್ಲೇಟ್‌ಗಳ ಜಂಕ್ಷನ್‌ನಲ್ಲಿರುವುದರಿಂದ ಭೂಕಂಪಗಳ ಹೆಚ್ಚಿನ ಅಪಾಯವನ್ನು ಎದುರಿಸುತ್ತಿದೆ ಎಂದು ದಿ ಡೈಲಿ ಸ್ಟಾರ್‌ ಪತ್ರಿಕೆ ವರದಿ ಮಾಡಿದೆ.

ಕಳೆದ ತಿಂಗಳು, 5.7 ತೀವ್ರತೆಯ ಪ್ರಬಲ ಭೂಕಂಪನದಲ್ಲಿ ಸುಮಾರು 10 ಜನರು ಸಾವನ್ನಪ್ಪಿದರೆ,ಗಮನಾರ್ಹ ಹಾನಿಯನ್ನುಂಟುಮಾಡಿತು, ಢಾಕಾವು ವಿಶ್ವದ 20 ಅತ್ಯಂತ ಭೂಕಂಪ-ಪೀಡಿತ ನಗರಗಳಲ್ಲಿ ಒಂದೆಂದು ಪರಿಗಣಿಸಲ್ಪಟ್ಟಿದೆ, ಏಕೆಂದರೆ ಅದರ ಅತ್ಯಂತ ದಟ್ಟವಾದ ಜನಸಂಖ್ಯೆ ಮತ್ತು ಅಪಾರ ಸಂಖ್ಯೆಯ ಶಿಥಿಲಗೊಂಡ ಕಟ್ಟಡಗಳು ರಾಜಧಾನಿಯ ಹಳೆಯ ಭಾಗದಲ್ಲಿವೆ.

RELATED ARTICLES

Latest News