Thursday, December 11, 2025
Homeಅಂತಾರಾಷ್ಟ್ರೀಯಸದ್ಯಕ್ಕೆ ಸಿಕ್ಕಲ್ಲ ಹೆಚ್‌ಒನ್‌ಬಿ ವೀಸಾ

ಸದ್ಯಕ್ಕೆ ಸಿಕ್ಕಲ್ಲ ಹೆಚ್‌ಒನ್‌ಬಿ ವೀಸಾ

H-1B Visa Appointments Postponed For Many Indians

ವಾಷಿಂಗ್ಟನ್‌, ಡಿ.10- ಅಮೆರಿಕ ಮತ್ತೆ ಹೆಚ್‌ಒನ್‌ಬಿ ವೀಸಾ ವಿತರಣೆಯಲ್ಲಿ ಕ್ಯಾತೆ ತೆಗಿದಿದೆ.ಅಮೆರಿಕದ ವಿದೇಶಾಂಗ ಇಲಾಖೆಯ ಹೊಸ ಸಾಮಾಜಿಕ ಮಾಧ್ಯಮ ಪರಿಶೀಲನೆ ನೀತಿಯು ಭಾರತದಲ್ಲಿ ಹೆಚ್‌ಒನ್‌ಬಿ ವೀಸಾ ಅರ್ಜಿಗಳನ್ನು ಮುಂದಿನ ವರ್ಷಕ್ಕೆ ಮುಂದೂಡಿದೆ. ಭಾರತದಲ್ಲಿನ ಅಮೆರಿಕ ರಾಯಭಾರ ಕಚೇರಿಯು ತಡರಾತ್ರಿ ವೀಸಾ ಅರ್ಜಿದಾರರಿಗೆ ಈ ವಿಚಾರವನ್ನು ತಿಳಿಸಿದೆ.

ನಿಮ್ಮ ವೀಸಾ ಅಪಾಯಿಂಟ್ಮೆಂಟ್‌ ಅನ್ನು ಮರು ನಿಗದಿಪಡಿಸಲಾಗಿದೆ ಎಂದು ಸೂಚಿಸುವ ಇಮೇಲ್‌ ನಿಮಗೆ ಬಂದಿದ್ದರೆ, ನಿಮ್ಮ ಹೊಸ ಅಪಾಯಿಂಟ್ಮೆಂಟ್‌ ದಿನಾಂಕದಂದು ನಿಮಗೆ ಸಹಾಯ ಮಾಡಲು ಮಿಷನ್‌ ಇಂಡಿಯಾ ಎದುರು ನೋಡುತ್ತಿದೆ ಎಂದು ರಾಯಭಾರ ಕಚೇರಿಯು ಹೇಳಿದೆ.

ಯಾವುದೇ ವೀಸಾ ಅರ್ಜಿದಾರರು ಸಂದರ್ಶನ ದಿನಾಂಕವನ್ನು ಮರು ನಿಗದಿಪಡಿಸಿದ ನಂತರವೂ ರಾಯಭಾರ ಕಚೇರಿಗೆ ಆಗಮಿಸಿದರೆ, ಅವರಿಗೆ ಪ್ರವೇಶ ನಿರಾಕರಿಸಲಾಗುವುದು ಎಂದು ರಾಯಭಾರ ಕಚೇರಿ ಎಚ್ಚರಿಸಿದೆ.

ಡಿಸೆಂಬರ್‌ ಮಧ್ಯದಿಂದ ಕೊನೆಯವರೆಗೆ ನಿಗದಿಯಾಗಿದ್ದ ಸಂದರ್ಶನಗಳನ್ನು ಮುಂದಿನ ವರ್ಷದ ಮಾರ್ಚ್‌ಗೆ ಮುಂದೂಡಲಾಗಿದೆ.ಅಮೆರಿಕ ಸರ್ಕಾರವು ಹೆಚ್‌1ಬಿ ವೀಸಾ ಅರ್ಜಿದಾರರು ಮತ್ತು ಅವರ ಹೆಚ್‌-4 ಅವಲಂಬಿತರಿಗೆ ಸ್ಕ್ರೀನಿಂಗ್‌ ಮತ್ತು ಪರಿಶೀಲನಾ ಕ್ರಮಗಳನ್ನು ವಿಸ್ತರಿಸಿತು.

ಅವರ ಎಲ್ಲಾ ಸಾಮಾಜಿಕ ಮಾಧ್ಯಮ ಪ್ರೊಫೈಲ್‌ಗಳಲ್ಲಿನ ಗೌಪ್ಯತಾ ಸೆಟ್ಟಿಂಗ್‌ಗಳನ್ನು ಗೆ ಹೊಂದಿಸುವಂತೆ ನಿರ್ದೇಶಿಸಿತು. ಡಿಸೆಂಬರ್‌ 15 ರಿಂದ ಅಧಿಕಾರಿಗಳು ಅವರ ಆನ್‌ಲೈನ್‌‍ ಉಪಸ್ಥಿತಿಯನ್ನು ಪರಿಶೀಲಿಸುತ್ತಾರೆ. ಅಮೆರಿಕದ ರಾಷ್ಟ್ರೀಯ ಭದ್ರತೆ ಅಥವಾ ಸಾರ್ವಜನಿಕ ಸುರಕ್ಷತೆಗೆ ಅಪಾಯವನ್ನುಂಟು ಮಾಡುವ ವೀಸಾ ಅರ್ಜಿದಾರರನ್ನು ಗುರುತಿಸುತ್ತಾರೆ. ವಿದ್ಯಾರ್ಥಿಗಳು ಮತ್ತು ವಿನಿಮಯ ಸಂದರ್ಶಕರು ಈಗಾಗಲೇ ಅಂತಹ ಪರಿಶೀಲನೆಗೆ ಒಳಗಾಗಿದ್ದಾರೆ. ಪ್ರತಿಯೊಂದು ವೀಸಾ ತೀರ್ಪು ರಾಷ್ಟ್ರೀಯ ಭದ್ರತಾ ನಿರ್ಧಾರವಾಗಿದೆ ಎಂದು ವಿದೇಶಾಂಗ ಇಲಾಖೆ ಹೇಳಿದೆ.

ಅಫ್ಘಾನ್‌ ಪ್ರಜೆಯೊಬ್ಬರು ಯುಎಸ್‌‍ ರಾಷ್ಟ್ರೀಯ ಗಾರ್ಡ್‌ ಸೈನಿಕರನ್ನು ಗುಂಡಿಕ್ಕಿ ಕೊಂದ ನಂತರ, ಟಾರ್ಗೆಟ್‌ ಮಾಡಿದ 19 ದೇಶಗಳಿಂದ ಬರುವ ಜನರಿಗೆ ಗ್ರೀನ್‌ ಕಾರ್ಡ್‌, ಯುಎಸ್‌‍ ಪೌರತ್ವ ಮತ್ತು ಇತರ ವಲಸೆ ಅರ್ಜಿಗಳನ್ನು ಅಮೆರಿಕ ನಿಲ್ಲಿಸಿದೆ.

RELATED ARTICLES

Latest News