ಬೀಜಿಂಗ್, ಜ.8- ಅಮೆರಿ ಕಾದ ಆಕ್ರಮಣಕಾರಿ ನಡಿಗೆ ಜಗತ್ತಿನ ಹಲವಾರು ರಾಷ್ಟ್ರ ಗಳು ಆಕ್ರೋಶಗೊಂಡಿದೆ. ವೆನಿಜುವೆಲಾ ನಂತರ ಗ್ರೀನ್‌ಲ್ಯಾಂಡ್ ಮೇಲೆ ಕಣ್ಣು ಹಾಕಿರುವ ಟ್ರಂಪ್‌ನ ನಿಲುವಿನ ಬಗ್ಗೆ ವ್ಯಾಪಕ ಟೀಕೆಗಳು ವ್ಯಕ್ತವಾಗಿದ್ದು, ಪ್ರಮುಖವಾಗಿ ಚೀನಾ, ಐರೋಪ್ಯ ರಾಷ್ಟ್ರಗಳು ಅಮೆರಿಕಾದ ವಿರುದ್ಧ ತಿರುಗಿ ಬೀಳಲು ಮುಂದಾಗಿವೆ.
ವಿವಿಧ ರಾಷ್ಟ್ರಗಳ ಮೇಲೆ ಬೆದರಿಕೆ ಹಾಕಿ ಅವರನ್ನು ಎದುರಿ ಸುವ ಕಾರ್ಯಗಳು ನಡೆಯುತ್ತಿದ್ದು, ಅಮೆರಿಕಾದ ವಿರುದ್ಧ ಎಲ್ಲರೂ ಧನಿ ಎತ್ತಬೇಕು ಎಂದು ಹಲವು ನಾಯಕರು ಹೇಳಿದ್ದಾರೆ. ಸದ್ಯದಲ್ಲಿಯೇ ರಷ್ಯಾ, ಚೀನಾ, ಜಪಾನ್, ಐರೋಪ್ಯ ರಾಷ್ಟ್ರಗಳು ಮುಂದಿನ ಕಾರ್ಯತಂತ್ರದ ಬಗ್ಗೆ ತಯಾರಿ ಆರಂಭಿಸಿವೆ.
ಅಮೆರಿಕಾದಲ್ಲಿಯೇ ಟ್ರಂಪ್ ನಿರ್ಧಾರಕ್ಕೆ ಹಲವಾರು ಟೀಕೆಗಳು ವ್ಯಕ್ತವಾಗುತ್ತಿರುವ ನಡುವೆಯೇ ಕೆಲವು ರಾಷ್ಟ್ರಗಳು ತಿರುಗಿಬೀಳಲು ಮುಂದಾಗಿರುವುದು ಜಾಗತಿಕ ಮಟ್ಟದಲ್ಲಿ ಮೂರನೇ ಮಹಾಯುದ್ಧಕ್ಕೆ ನಾಂದಿ ಎಂದು ವಿಶ್ಲೇಷಿಸಲಾಗುತ್ತಿದೆ.
ಯಾವುದೇ ಕಾರಣಕ್ಕೂ ಟ್ರಂಪ್ ಆಕ್ರಮಣಕಾರಿ ಧೋರಣೆಯನ್ನು ಸಹಿಸಲು ಸಾಧ್ಯವಿಲ್ಲವೆಂದು ವಿಶ್ವಸಂಸ್ಥೆಯ ಹಲವು ಸದಸ್ಯ ರಾಷ್ಟ್ರಗಳು ಆತಂಕ ವ್ಯಕ್ತಪಡಿಸಿರುವ ನಡುವೆಯೇ ಮುಂದುವರಿದ ದೇಶಗಳು ಈಗ ತಮ ವ್ಯೂಹವನ್ನು ರಚಿಸಲು ಮುಂದಾಗಿವೆ.
ಈಗಾಗಲೇ ಚೀನಾ-ತೈವಾನ್ ವಶಪಡಿಸಿಕೊಳ್ಳಲು ಮುಂದಾಗುತ್ತಿದೆ. ಇನ್ನೂ ಇರಾನ್ ಮತ್ತು ಅಮೆರಿಕಾ ನಡುವೆ ಮುನಿಸು ಹೆಚ್ಚುತ್ತಿದೆ. ದಕ್ಷಿಣ ಕೋರಿಯಾ-ಉತ್ತರ ಕೋರಿಯಾ ನಡುವೆ ಯುದ್ಧದ ಕಾರ್ಮೋಡ ಸೃಷ್ಟಿಯಾಗಿದೆ. ಅರಬ್ ದೇಶಗಳಲ್ಲೂ ಪರಿಸ್ಥಿತಿ ವ್ಯತ್ಯಾಸವಾಗುತ್ತಿರುವುದು ಮೂರನೇ ಮಹಾ ಯುದ್ಧದ ಮುನ್ಸೂಚನೆ ಎಂದು ಹೇಳಲಾಗುತ್ತಿದೆ.
